Advertisement

ಕರ್ನಾಟಕ ಸೇರಿ ದಕ್ಷಿಣದ ರಾಜ್ಯಗಳಲ್ಲಿ ಹಿಂದಿ ಹೇರಿಕೆ?

03:50 AM Apr 15, 2017 | Team Udayavani |

ನವದೆಹಲಿ: ಕರ್ನಾಟಕ ಸೇರಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹಿಂದಿ ಭಾಷೆಯನ್ನು ಹೇರುವ ಕೆಲಸ ಸದ್ದಿಲ್ಲದೇ ಸಾಗುತ್ತಿದೆ. ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರಲ್ಲಿ ದ.ಭಾರತದ 4 ರಾಜ್ಯಗಳು ತ್ರಿಭಾಷಾ ಸೂತ್ರಗಳನ್ನು ಸಂಪೂರ್ಣ ಜಾರಿ ಮಾಡಿಲ್ಲ ಎಂದು ಆರೋಪಿ ಸಿರುವುದು ಇದಕ್ಕೆ ಸಾಕ್ಷಿ. ಶಾಲೆಗಳಲ್ಲಿ 1ರಿಂದ 8ನೇ ತರಗತಿ ವರೆಗೂ ಕಡ್ಡಾಯವಾಗಿ ಹಿಂದಿ ಕಲಿಸಲು ಕೇಂದ್ರ, ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶ ನೀಡಲು ಕೋರಿ ದೆಹಲಿ ಬಿಜೆಪಿ ವಕ್ತಾರ, ನ್ಯಾಯವಾದಿ ಅಶ್ವಿ‌ನಿ ಕುಮಾರ್‌ ಉಪಾಧ್ಯಾಯ್‌ ಅವರು ಸುಪ್ರೀಂಗೆ ಪಿಐಎಲ್‌ ಸಲ್ಲಿಸಿದ್ದಾರೆ. 

Advertisement

1968ರ ರಾಷ್ಟ್ರೀಯ ನೀತಿ ನಿರ್ಣಯದ ಅನ್ವಯ ತ್ರಿಭಾಷಾ ಸೂತ್ರವನ್ನು ಎಲ್ಲ ರಾಜ್ಯಗಳೂ ಪಾಲಿಸಬೇಕಿತ್ತು. ಆದರೆ, ಕರ್ನಾಟಕ ಸೇರಿ ದಕ್ಷಿಣ ಭಾರತದ 4 ರಾಜ್ಯಗಳು ತ್ರಿಭಾಷಾ ಸೂತ್ರಗಳನ್ನು ಜಾರಿ ಮಾಡಿಲ್ಲ. ಹಿಂದಿಯೇತರ ರಾಜ್ಯಗಳ ಅಧಿಕಾರಿಗಳು ಹಿಂದಿ ಭಾಷೆಯ ರಾಜ್ಯಗಳಿಗೆ ಬಂದಾಗ ಸಂವಹನ ನಡೆಸಲು, ಓದಲು ಕಷ್ಟಪಡುತ್ತಾರೆ. ಹಿಂದಿ ಕಲಿಕೆ ಕಡ್ಡಾಯ ಮಾಡುವುದರಿಂದ ಈ ಸಮಸ್ಯೆ ತಲೆದೋರದು ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next