ಬೆಳಗಾವಿ: ತಾಲೂಕಿನ ದೇಸೂರು ಗ್ರಾಮ ಪಂಚಾಯಿತಿಯ ಮತಗಟ್ಟೆಯಲ್ಲಿ ಚುನಾವಣಾ ಸಿಬ್ಬಂದಿ ಬಳಿ ಲೈಸನ್ಸ್ ಇರುವ ಗುಂಡು ತುಂಬಿದ್ದ ರಿವಾಲ್ವರ್ ಪತ್ತೆಯಾಗಿದೆ. ಮತಗಟ್ಟೆಗೆ ನಿಯೋಜನೆಗೊಂಡ ಸಿಬ್ಬಂದಿ ಬಳಿಯೇ ರಿವಾಲ್ವರ್ ಇದ್ದಿದ್ದರಿಂದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಸುಲೇಮಾನ ಸನದಿ ಎಂಬ ಚುನಾವಣಾ ಅಧಿಕಾರಿ ಬಳಿ ರಿವಾಲ್ವರ್ ಇರುವುದು ಪಕ್ಕದವರು ಗಮನಿಸಿದ್ದಾರೆ. ಇದರಲ್ಲಿ ಜೀವಂತ ಗುಂಡುಗಳು ಇದ್ದವು ಎಂಬುದು ತಿಳಿದು ಬಂದಿದೆ.
ಇದನ್ನೂ ಓದಿ:ನೆರವಿಗೆ ಬಾರದ ಜನ! ಸರಕು ಸಾಗಣೆ ಟ್ರಕ್, ಕಾರು ಡಿಕ್ಕಿ: ಕಾರಿನಲ್ಲಿದ್ದ ಐವರು ಸಜೀವ ದಹನ
ಈ ಅಧಿಕಾರಿ ಬಳಿ ಲೋಡೆಡ್ ಇರುವ ಪಿಸ್ತೂಲ್ ಇರುವುದನ್ನು ಗಮನಿಸಿದ ಸಿಬ್ಬಂದಿ ತಕ್ಷಣ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಮತಗಟ್ಟೆ ಕೇಂದ್ರಕ್ಕೆ ತೆರಳಿದ ಹಿರಿಯ ಪೊಲಿಸ್ ಅಧಿಕಾರಿಗಳು ಪಿಸ್ತೂಲ್ ನಲ್ಲಿ ತುಂಬಲಾಗಿದ್ದ ಗುಂಡುಗಳನ್ನು ಹೊರಗೆ ತೆಗೆದಿದ್ದಾರೆ. ಸುಲೇಮಾನ್ ಸನದಿಗೆ ಮೊದಲಿನಿಂದಲೂ ಪಿಸ್ತೂಲ್ ಇಟ್ಟುಕೊಳ್ಳುವುದು ಕ್ರೇಜ್ ಇದೆ. ಹೀಗಾಗಿ ಸನದಿ ಪಿಸ್ತೂಲ್ ಮತಗಟ್ಟೆಗೆ ತೆಗೆದುಕೊಂಡು ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಚುನಾವಣೆ ಸಮಯದಲ್ಲಿ ಪೊಲೀಸ್ ಠಾಣೆಗೆ ಜಮಾ ಮಾಡಬೇಕಿದ್ದ ಪಿಸ್ತೂಲ್ ನ್ನು ಕರ್ತವ್ಯದ ಸಮಯದಲ್ಲಿ ತನ್ನೊಂದಿಗೆ ತಂದಿದ್ದನು. ಕೂಡಲೇ ಅಧಿಕಾರಿಗಳು ಸನದಿಯನ್ನು ಮತಗಟ್ಟೆ ಕೆಲಸದಿಂದ ಬದಲಾಯಿಸಿದ್ದಾರೆ.