Advertisement

ನಿವೃತ್ತಿ ಘೋಷಿಸಿದ್ದ ಹೆವಿಟ್‌ ಮತ್ತೆ ಕಣಕ್ಕೆ

07:25 AM Dec 16, 2017 | |

ಮೆಲ್ಬರ್ನ್: ವೃತ್ತಿಪರ ಟೆನಿಸ್‌ಗೆ ನಿವೃತ್ತಿ ಘೋಷಿಸಿದ್ದ ವಿಶ್ವದ ಮಾಜಿ ನಂ.1 ಆಟಗಾರ, ಆಸ್ಟ್ರೇಲಿಯದ ಲೇಟನ್‌ ಹೆವಿಟ್‌ ಮತ್ತೆ ಡಬಲ್ಸ್‌ ಮೂಲಕ ಮರುಪ್ರವೇಶಕ್ಕೆ ಸಜ್ಜಾಗಿದ್ದಾರೆ. ಜ. 15ರಿಂದ ಆರಂಭವಾಗಲಿರುವ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಅವರು ಸ್ಯಾಮ್‌ ಗ್ರೋತ್‌ ಜತೆ ಸೇರಿ ಕಣಕ್ಕೆ ಇಳಿಯಲಿದ್ದಾರೆ.

Advertisement

ಲೇಟನ್‌ ಹೆವಿಟ್‌ ಪುರುಷರ ಸಿಂಗಲ್ಸ್‌ನಲ್ಲಿ 2001ರ ಯುಎಸ್‌ ಓಪನ್‌, 2002ರ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಮ್‌ ಗೆದ್ದಿದ್ದಾರೆ. ಪ್ರದರ್ಶನದ ಮಟ್ಟ ಕುಸಿದುದರಿಂದ 2016ರ ಆಸ್ಟ್ರೇಲಿಯ ಓಪನ್‌ ಬಳಿಕ ಟೆನಿಸ್‌ ನಿವೃತ್ತಿ ಘೋಷಿಸಿದ್ದರು.

ಇದೀಗ ಆಸ್ಟ್ರೇಲಿಯ ಓಪನ್‌ ಮೂಲಕವೇ ಹೆವಿಟ್‌ ಮತ್ತೆ ಟೆನಿಸ್‌ ಅಂಗಳಕ್ಕೆ ಮರಳಲು ಸಜ್ಜಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಹೆವಿಟ್‌, “ಟೆನಿಸ್‌ಗೆ ಮತ್ತೆ ಮರಳುವ ಬಗ್ಗೆ ಉತ್ಸುಕನಾಗಿದ್ದೇನೆ. ತವರಿನ ಆಸ್ಟ್ರೇಲಿಯನ್‌ ಓಪನ್‌ ಕೂಟದಲ್ಲಿ ಸ್ಯಾಮ್‌ ಗ್ರೋತ್‌ ಜತೆ ಸೇರಿ ಡಬಲ್ಸ್‌ನಲ್ಲಿ ಕಣಕ್ಕೆ ಇಳಿಯಲಿದ್ದೇನೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next