ನಾರ್ತ್ ಸೌಂಡ್ (ಆ್ಯಂಟಿಗುವಾ): ನಾಯಕ ಲಿಯಮ್ ಲಿವಿಂಗ್ಸ್ಟೋನ್ ಅವರ ಅಜೇಯ ಶತಕ ಸಾಹಸದಿಂದ ವೆಸ್ಟ್ ಇಂಡೀಸ್ ಎದುರಿನ 2ನೇ ಏಕದಿನ ಪಂದ್ಯವನ್ನು ಇಂಗ್ಲೆಂಡ್ ಪ್ರಚಂಡ ಚೇಸಿಂಗ್ ನಡೆಸಿ 5 ವಿಕೆಟ್ಗಳಿಂದ ಗೆದ್ದಿದೆ. ಸರಣಿ 1-1 ಸಮಬಲಕ್ಕೆ ಬಂದಿದೆ.
ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ 6 ವಿಕೆಟಿಗೆ 328 ರನ್ ಪೇರಿಸಿತು. ಇಂಗ್ಲೆಂಡ್ 47.3 ಓವರ್ಗಳಲ್ಲಿ 5 ವಿಕೆಟಿಗೆ 329 ರನ್ ಬಾರಿಸಿತು. ಸರಣಿ ನಿರ್ಣಾಯಕ ಪಂದ್ಯ ನ. 6ರಂದು ಬ್ರಿಜ್ಟೌನ್ನಲ್ಲಿ ನಡೆಯಲಿದೆ.
ವಿಂಡೀಸ್ ನಾಯಕ ಶಾಯ್ ಹೋಪ್ ಶತಕ ಸಿಡಿಸಿದರು.117 ರನ್ ಗಳಿಸಿ ಔಟಾದರು. ಕೀಸಿ ಕಾರ್ಟಿ 71 ರನ್ ಗಳಿಸಿ ಔಟಾದರು. ಶೆರ್ಫೇನ್ ರುದರ್ಫೋರ್ಡ್ 54 ರನ್ ಕೊಡುಗೆ ಮೂನ್ನೂರರ ಗಡಿ ದಾಟಲು ನೆರವಾಯಿತು.
ಇಂಗ್ಲೆಂಡ್ ಪರ ಲಿವಿಂಗ್ಸ್ಟೋನ್ 85 ಎಸೆತಗಳಲ್ಲಿ 124 ರನ್ ಗಳಿಸಿ ಅಬ್ಬರಿಸಿದರು. ಫಿಲಿಪ್ ಸಾಲ್ಟ್ 59, ಜಾಕೋಬ್ ಬೆಥೆಲ್ 55, ಸ್ಯಾಮ್ ಕರ್ರನ್ 52 ರನ್ ಕೊಡುಗೆ ನೀಡಿದರು.
ವೆಸ್ಟ್ ಇಂಡೀಸ್ 328/6 (50) ಇಂಗ್ಲೆಂಡ್ 329/5 (47.3)