ಇಂಡಿ: ಶಂಕರಲಿಂಗೇಶ್ವರ ಜಾತ್ರೋತ್ಸವ ನಿಮಿತ್ತ ಲಚ್ಯಾಣದಲ್ಲಿ ಜಾನುವಾರುಗಳ ಜಾತ್ರೆ ನಡೆಯಿತು. ಜಾತ್ರೆಗೆ ಆಗಮಿಸಿದ ಜಾನುವಾರುಗಳಿಗೆ ಬಿಸಿಲಿನ ತಾಪ ತಪ್ಪಿಸಲು ಜಾನು ವಾರುಗಳಿಗೆ ನೆರಳಿನ ಭಾಗ್ಯ ನೀಡಲಾಗಿತ್ತು.
ಇದೇ ಮೋದಲ ಬಾರಿಗೆ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಎನ್ನಬಹುದಾದ 5 ದಿನಗಳಿಂದ ನಡೆದ ಈ ಜಾತ್ರೆಗೆ ತಮ್ಮ ಎತ್ತುಗಳು, ಹೋರಿ, ದನ -ಕರುಗಳನ್ನು ಮಾರಾಟ ಮಾಡಲು ಆಗಮಿಸಿದ್ದ ರೈತರಿಗೆ ಜಾತ್ರೆ ವಿಶೇಷತೆ ಮತ್ತು ಜಾನುವಾರಗಳ ಬಗ್ಗೆ ಕಮೀಟಿಯವರು ತೋರಿದ ಕಾಳಜಿ ಕಂಡು ರೈತರಿಗೆ ಸಂತಸ ಇಮ್ಮಡಿಗೊಂಡಿತ್ತು.
ಜನ ಜಾನುವಾರಗಳಿಗೆ ಬೇಸಿಗೆ ಬಿಸಿಲು 42 ಡಿಗ್ರಿ ತಾಪಮಾನ ಇರುವುದರಿಂದ ಜಾನುವಾರುಗಳಿಗೆ ಮತ್ತು ಸಾರ್ವಜನಿಕರಿಗೆ ಶುದ್ಧ ತಂಪಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಈ ವ್ಯವಸ್ಥೆಯನ್ನು ಜೇವೂರ ಗ್ರಾಮದ ರೇವಣಸಿದ್ದೇಶ್ವರ ಮಂಟಪ ಕಾರ್ಯಾಲಯ ಮತ್ತು ಜಾತ್ರಾ ಸಮಿತಿ ಸಹಯೋಗದಲ್ಲಿ ಮಾಡಲಾಗಿತ್ತು.
ನಾನು ಅನೇಕ ಜಾತ್ರೆಗಳನ್ನು ನೋಡಿದ್ದೇನೆ. ಆದರೆ ಲಚ್ಯಾಣದ ಶಂಕರಲಿಂಗೆಶ್ವರ ಜಾತ್ರೆಯಲ್ಲಿ ಜಾತ್ರಾ ಕಮೀಟಿಯವರು ತೋರಿದ ಕಾಳಜಿ ಮತ್ಯಾವ ಜಾತ್ರೆಯಲ್ಲಿ ಕಂಡಿಲ್ಲ. ಜಾನುವಾರುಗಳು ರೈತರ ಆಸ್ತಿಯಾಗಿದ್ದು ಜಾನುವಾರುಗಳಿಗೆ ಯಾವುದೇ ಅನಾರೋಗ್ಯವಾಗಬಾರದು ಎಂದು ವೈದ್ಯರ ತಂಡ ಸಹಿತ ಕರೆಸಿದ್ದಾರೆ.
•
ವಿಠ್ಠಲ ಬಾಬಳಗಾಂವ, ಸಾರ್ವಜನಿಕ