Advertisement
ಆತ್ಮಹತ್ಯೆಗೆ ಮುಂದಾದವನು ಜ್ಞಾನೇಶ್ವರ ಪಾಟೀಲ್ ಎಂಬ 23 ವರ್ಷದ ವ್ಯಕ್ತಿ. ತನ್ನ ಯತ್ನವನ್ನು ಫೇಸ್‌ಬುಕ್ ಲೈವ್ ಮಾಡಿದ್ದ. ಇದನ್ನು 7,695 ಕಿ.ಮೀ. ದೂರದ ಐರ್ಲೆಂಡ್‌ನಲ್ಲಿ ಗಮನಿಸುತ್ತಿದ್ದ ಅಧಿಕಾರಿಗಳು ಮುಂಬಯಿ ಪೊಲೀಸರಿಗೆ ಮಾಹಿತಿ ನೀಡಿ ಅವನ ಜೀವ ಉಳಿಸಿದ್ದಾರೆ.
ಜ್ಞಾನೇಶ್ವರ ಫೇಸ್‌ಬುಕ್ ಲೈವ್‌ಗೆ ಹೋಗಿ ಪದೇ ಪದೆ ಗಂಟ ಲನ್ನು ಬ್ಲೇಡ್‌ನಿಂದ ಕತ್ತರಿಸುತ್ತಿದ್ದ. ಇದರ ಸೂಚನೆ ಪಡೆದ ಐರ್ಲೆಂಡ್‌ನ ಸೈಬರ್ ಅಧಿಕಾರಿಗಳು ಮುಂಬಯಿ ಪೊಲೀ ಸರಿಗೆ ಮಾಹಿತಿ ನೀಡಿದರು. ಇದರಿಂದ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ತೆರಳಿ ಯುವಕನನ್ನು ಸಾವಿನಿಂದ ರಕ್ಷಿಸಿದ್ದಾರೆ. ಎಲ್ಲಿದೆ ಈ ಪ್ರದೇಶ?
ಮುಂಬಯಿಯಿಂದ 323 ಕಿ.ಮೀ. ದೂರದಲ್ಲಿರುವ ಭೋಯಿ ಸೊಸೈಟಿ ಆಫ್ ಧುಲೇಯಲ್ಲಿ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದ. ರವಿವಾರ ರಾತ್ರಿ 8 ಗಂಟೆಗೆ ಐರ್ಲೆಂಡ್‌ನಿಂದ ಮುಂಬಯಿ ಪೊಲೀಸರಿಗೆ ಘಟನೆ ಮಾಹಿತಿ ಬಂದಿತ್ತು. ಜ್ಞಾನೇಶ್ವರ ಪಾಟೀಲ್ ಮನೆಯಲ್ಲಿ ಒಂಟಿಯಾಗಿದ್ದರು.
Related Articles
“ನಿಮ್ಮ ಪ್ರದೇಶದ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸುತ್ತಿದ್ದಾರೆ’ ಎಂದು ಐರ್ಲೆಂಡ್‌ನ ಫೇಸ್‌ಬುಕ್ ಪ್ರಧಾನ ಕಚೇರಿ ಯಿಂದ ಮುಂಬಯಿ ಸೈಬರ್ ಸೆಲ್‌ನ ಡಿಸಿಪಿ ರಶ್ಮಿ ಕರಂಡಿಕರ್ ಅವರಿಗೆ ರವಿವಾರ ರಾತ್ರಿ 8ರ ಸುಮಾರಿಗೆ ಕರೆ ಬಂದಿದೆ. “ಅವರ ಕೈ ಮತ್ತು ಗಂಟಲಿನಿಂದ ರಕ್ತಸ್ರಾವವಾಗುತ್ತಿದೆ. ದಯ ವಿಟ್ಟು ತತ್‌ಕ್ಷಣ ಸಹಾಯ ಮಾಡಿ’ ಎಂದು ಮಾಹಿತಿಯಲ್ಲಿ ಉಲ್ಲೇಖೀಸಲಾಗಿತ್ತು. ಪೊಲೀಸರು ತತ್‌ಕ್ಷಣ ಕಾರ್ಯ ಪ್ರವೃತ್ತ ರಾಗಿದ್ದರು. 9 ಗಂಟೆಗೆ ಧುಲೆಗೆ ತಲುಪಿ ಜ್ಞಾನೇಶ್ವರನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು. ಸದ್ಯ ಆತ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
ಫೇಸ್‌ಬುಕ್ ಹೇಗೆ ಪತ್ತೆ ಮಾಡುತ್ತದೆ?2017ರಲ್ಲಿ ಫೇಸ್‌ಬುಕ್ ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನವನ್ನು ಪರಿಚಯಿಸಿತು. ಬಳಕೆದಾರರ ಮನಸ್ಸಿನ ಸ್ಥಿತಿ ಹೇಗಿದೆ ಎಂಬುದನ್ನು ಇದು ತೋರಿಸುತ್ತದೆ. ವ್ಯಕ್ತಿಗೆ ಆತ್ಮಹತ್ಯೆ ಯಂತಹ ವರ್ತನೆ ಇದೆಯೋ ಇಲ್ಲವೋ ಎಂಬುದನ್ನು ಅರ್ಥೈಸಿಕೊಳ್ಳುತ್ತದೆ. ಇದು ರಕ್ತ ಅಥವಾ ಹಿಂಸೆ ಕಂಡುಬಂದಲ್ಲಿ ಎಚ್ಚರಿಕೆಯನ್ನು ರವಾನಿಸುತ್ತದೆ.