ರಟ್ಟಿಹಳ್ಳಿ: ಇಂದಿನ ಮಕ್ಕಳೇ ನಾಳಿನ ನಾಯಕರು ಎಂಬ ಮಾತಿನಂತೆ, ಕೊರೊನಾದ ಪ್ರಕರಣಗಳು ನಮ್ಮ ಭಾಗದಲ್ಲಿ ಕಡಿಮೆ ಎಂದು ನಿರ್ಲಕ್ಷ್ಯ ಮಾಡದೇ, ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಜಾಗರೂಕತೆಯಿಂದ ಇದ್ದರೆ ಬದುಕು ಸುಂದರವಾಗಿರುತ್ತದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ರಟ್ಟಿಹಳ್ಳಿಯ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮ ಭವಿಷ್ಯ ನಮ್ಮ ಕೈಯಲ್ಲೇ ಇದೆ. ನಾವು ಸಾಧ್ಯವಾದಷ್ಟು ಜಾಗೃತಿಯಿಂದ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಉತ್ತಮ. ವಿದ್ಯಾರ್ಥಿಗಳು ಉಜ್ವಲ ಭವಿಷ್ಯದ ಕನಸಿನಲ್ಲಿ ಬಂದವರು. ಅವರು ಉತ್ತಮ ಭವಿಷ್ಯಕ್ಕಾಗಿ ಲಸಿಕೆ ಪಡೆದುಕೊಂಡು ಸದೃಢರಾಗಿ, ಅಭ್ಯಾಸ ಮಾಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಸ್ಥಳೀಯ ಮುಖಂಡರಾದ ಗಣೇಶ ವೇರ್ಣೆàಕರ್, ಮಾಲತೇಶ ಗಂಗೋಳ, ರಾಘವೇಂದ್ರ ಹರವಿಶೆಟ್ರ, ಪ್ರಾಚಾರ್ಯ ಗುಡ್ಡಾಚಾರಿ ಕಮ್ಮಾರ, ಮಹೇಂದ್ರ ಬಡಳ್ಳಿ, ತಹಶೀಲ್ದಾರ್‌ರಾದ ಅರುಣಕುಮಾರ ಕಾರ್ಗಿ, ದೇವರಾಜ ನಾಗಣ್ಣನವರ ಇತರರು ಉಪಸ್ಥಿತರಿದ್ದರು.