Advertisement

ಸಾಹಿತಿಗಳು ಸಾಂಸ್ಕೃತಿಕ ರಾಯಭಾರಿಗಳು: ಶಿರೋಳ

01:58 PM Aug 07, 2020 | Suhan S |

ಬೀಳಗಿ: ಸದೃಢ ಹಾಗೂ ಆರೋಗ್ಯಪೂರ್ಣ ಸಮಾಜ ನಿರ್ಮಿಸುವಲ್ಲಿ ಸಾಹಿತಿಗಳ ಪಾತ್ರ ಹಿರಿದಾಗಿದೆ. ಕೃತಿಗಳು ಸಮಾಜದ ಮಗ್ಗುಲಗಳನ್ನು ಪರಿಚಯಿಸುತ್ತವೆ. ಸಾಹಿತಿಗಳು ಸಾಂಸ್ಕೃತಿಕ ರಾಯಭಾರಿಗಳು. ಸಾಹಿತಿಗಳನ್ನು ಗುರುತಿಸಿ-ಗೌರವಿಸುವುದು ಹೆಮ್ಮೆಯ ಸಂಗತಿ ಎಂದು ಸಾಹಿತಿ ಸಿದ್ಧರಾಮ ಶಿರೋಳ ಹೇಳಿದರು.

Advertisement

ಅನಗವಾಡಿ ಗ್ರಾಮದ ಬಿ.ಎನ್‌. ಖೋತ ಅಂತಾರಾಷ್ಟ್ರೀಯ ಪಬ್ಲಿಕ್‌ ಶಾಲೆಯಲ್ಲಿ ಜಿಲ್ಲಾ-ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಆಶ್ರಯದಲ್ಲಿ ಆಯೋಜಿಸಿದ್ದ 2019ನೇ ಸಾಲಿನ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ನಾಡಿನ ನೆಲ-ಜಲ, ಸಂಸ್ಕೃತಿ-ಪರಂಪರೆ ಉಳಿವಿಗಾಗಿ ಕಸಾಪ ಕಂಕಣಬದ್ಧವಾಗಿದೆ ಎಂದರು. ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಖೋತ ಸಮಾರಂಭ ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಪ್ರತಿಭೆಗಳನ್ನು ಗುರುತಿಸಿ-ಗೌರವಿಸುವುದು ಸಾಹಿತ್ಯ ಲೋಕದ ಶ್ರೀಮಂತಿಕೆ ಹೆಚ್ಚಿಸುತ್ತದೆ ಎಂದರು.

ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಗುರುರಾಜ ಲೂತಿ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಶ್ರೀಶೈಲ ಕರಿಶಂಕರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಭಾವಂತ ಲೇಖಕರಿಗೆ ಪ್ರಶಸ್ತಿಗಳು ದೊರೆತಿವೆ. ಪ್ರತಿಭಾವಂತರನ್ನು ಗುರುತಿಸಿ ಸನ್ಮಾನಿಸಿರುವುದು ಅಭಿನಂದನಾರ್ಹ ಎಂದರು. ಕಸಾಪ ತಾಲೂಕಾಧ್ಯಕ್ಷ ಡಿ.ಎಂ. ಸಾಹುಕಾರ ಮಾತನಾಡಿದರು. ಇದೇ ವೇಳೆ ಲೇಖಕ ಎಸ್‌.ಎಸ್‌. ಹಳ್ಳೂರ ಅವರ ಕನಸಿನ ದೀಪಗಳು, ಕಥೆಗಾರ ಎಚ್‌.ಎಂ. ಜುಟ್ಟಲ ಅವರ ಜೇನುಗೂಡು ಕೃತಿಗಳನ್ನು ಕಥೆಗಾರ ಪ್ರೊ| ಅಬ್ಟಾಸ ಮೇಲಿನಮನಿ ಬಿಡುಗಡೆಗೊಳಿಸಿದರು.

ಇದೇ ಸಂದರ್ಭದಲ್ಲಿ ಲೇಖಕ ಸೋಮಲಿಂಗ ಬೇಡರ, ಚಂದ್ರಕಾಂತ ತಾಳಿಕೋಟಿ, ಸಿ.ಎಂ. ಜೋಶಿ, ಸುಮಿತ ಮೇತ್ರಿ, ಮಹಾದೇವ ಬಸರಕೋಡ, ಎಚ್‌.ಎಂ. ಜುಟ್ಟಲ, ಬಸವರಾಜ ಮಠ, ಡಿ.ಎಂ. ಸಾಹುಕಾರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಜಿ.ಕೆ. ತಳವಾರ, ಪ್ರಾಚಾರ್ಯೆ ಸಾವಿತ್ರಿ ಬೆಕ್ಕೇರಿ, ಸಾಹಿತಿ ಎಸ್‌.ಎಸ್‌. ಹಳ್ಳೂರ ಇದ್ದರು. ಬಸವರಾಜ ಡಾವಣಗೇರಿ ನಿರೂಪಿಸಿದರು. ಜಗದೀಶ ಖೋತ ಸ್ವಾಗತಿಸಿದರು. ಶಿವಾನಂದ ಹಿರೇಮಠ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next