ಸಾಹಿತಿಗಳನ್ನು ಸಂರಕ್ಷಿಸಿದರೆ ಕನ್ನಡ ಸಂರಕ್ಷಿಸಿದಂತೆ ಎಂದು ಹಿರಿಯ ಸಾಹಿತಿ ಪ್ರೊ.ಕೆ.ಭೈರವಮೂರ್ತಿ ಅಭಿಪ್ರಾಯಪಟ್ಟರು.
Advertisement
ನಗರದ ಗಾಂಧಿಭವನದಲ್ಲಿ ಸಂಸ್ಕೃತಿ ಸಂಘಟನೆ ಹಮ್ಮಿಕೊಂಡಿದ್ದ ಸಾಹಿತಿ ದಂಪತಿಗಳಿಗೆ ತವರಿನಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಹಿತಿಗಳು ಸಮಾಜಕ್ಕೆ ನೀಡುವ ಬೆಳಕು ಮತ್ತು ಮಾದರಿಯಿಂದ ಸಂಸ್ಕಾರ ದೊರೆಯುತ್ತದೆ.
ಮಾದರಿಯನ್ನು ಮಾನವ ಹಾಗೂ ಸಮಾಜಕ್ಕೂ ಹಂಚಬೇಕು. ಸಾಧಕರು ಸಮಾಜಕ್ಕೆ ಬೆಳಕು
ನೀಡುತ್ತಾರೆ. ಪರಿಪೂರ್ಣತೆಯನ್ನು ಹುಡುಕುವುದೇ ಸಂಸ್ಕೃತಿಯ ಲಕ್ಷಣ ಎಂದು ಹೇಳಿದರು. ಕ್ರಿಯಾಶೀಲರಾಗಿರಬೇಕು: ಸಂಸ್ಕೃತಿಯು ಬದುಕಿಗೆ ಸುಕೃತಿ ತಂದುಕೊಡಲಿದೆ. ಸಾಹಿತಿಗಳು ಸುಮ್ಮನೆ ಕೂರಬಾರದು. ಕೊನೆಯ ಉಸಿರುವವರೆಗೂ ಕ್ರಿಯಾಶೀಲರಾಗಿ ಸಂಸ್ಕೃತಿ ಉಳಿಸುವ, ಸಮಾಜವನ್ನು ತಿದ್ದುವ ಹಾಗೂ ಉತ್ತಮ ಸಮಾಜ ರೂಪಿಸಲು ಕೆಲಸ ಮಾಡುತ್ತಲೇ ಇರಬೇಕು. ಅವರು ನಿಜವಾದ ಉತ್ತಮ ಸಾಹಿತಿಗಳಾಗಿ ಉಳಿದುಕೊಳ್ಳುತ್ತಾರೆ ಎಂದು ತಿಳಿಸಿದರು.
Related Articles
ಪ್ರತಿಯೊಬ್ಬರೂ ತಮಗೆ ತಾವೇ ನೀತಿ ಸಂಹಿತೆ ಅಳವಡಿಸಿಕೊಳ್ಳಬೇಕು. ವಿದ್ಯೆ ಜೊತೆಗೆ ವಿನಯ
ಇದ್ದರೆ ಜ್ಞಾನ ಸಂಪತ್ತು ಲಭಿಸುತ್ತದೆ. ಆದರೆ, ಯಾರೂ ಪರಿಪೂರ್ಣರಲ್ಲ. ಸಾಹಿತಿಗಳು ಕೂಡ
ಜ್ಞಾನ ತಪಸ್ವಿಗಳಾಗಿದ್ದಾರೆ. ಸಾಹಿತ್ಯ ಲೋಕಕ್ಕೆ ಸಾಹಿತಿ ದಂಪತಿಗಳು ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಶ್ಲಾಗಿಸಿದರು.
Advertisement