Advertisement
ಕನ್ನಡ ಸಾಹಿತ್ಯ ಪರಿಷತ್ ವಲಯ ಘಟಕದ ವತಿಯಿಂದ ಪಟ್ಟಣದ ಅಂಬೇಡ್ಕರ್ ಸ್ಮಾರಕ ಭವನದಲ್ಲಿ ಏರ್ಪಡಿಸಲಾಗಿದ್ದ ಕವಿ-ಕಾವ್ಯಧಾರೆ ವಿಶೇಷ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಸಾಹಿತ್ಯದ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು. ಶ್ರಮಿಕರ ಹಸಿವು ಮತ್ತು ಶೋಷಿತ ಹೆಣ್ಣಿನ ನೋವುಗಳನ್ನು ಅನಾವರಣಗೊಳಿಸಬಲ್ಲ ಆಕ್ರೋಶದ ಕವನಗಳು ಕಿವಿಗಪ್ಪಳಿಸಬೇಕಿದೆ. ಆ ಮೂಲಕ ಜಿಡ್ಡುಗಟ್ಟಿದ ಸಮಾಜವನ್ನು ಬಡಿದೆಚ್ಚರಿಸಬೇಕಿದೆ ಎಂದರು.
ಲಿಂಗಣ್ಣ ಸತ್ಯಂಪೇಟೆ, ದಾಬೊಲ್ಕರ್, ಗೌರಿ ಲಂಕೇಶ ಅವರಂತಹ ಪ್ರಗತಿಪರ ಬರಹಗಾರರನ್ನು ಕೊಲ್ಲಲಾಗುತ್ತಿದೆ.
ಹೆದರಿ-ಬೆದರಿ ಬರೆಯಬೇಕಾದ ಪ್ರಸಂಗ ಎದುರಾಗಿದ್ದು, ಎದೆಗುಂದದೆ ಜನರ ಅಂತರಾಳ ತಟ್ಟಬಲ್ಲ ಸಾಹಿತ್ಯ ರಚನೆಗೆ
ನಾವು ಮುಂದಾಗಬೇಕಿದೆ ಎಂದರು. ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಎಂಬ ಕವಿ ಡಾ| ಸಿದ್ದಲಿಂಗಯ್ಯನವರ ಕಾವ್ಯ ಇಂದಿಗೂ ನಮ್ಮ ಎದೆ ತಟ್ಟುತ್ತಿದೆ. ಸಮಾಜದಲ್ಲಿ ಕ್ರೌರ್ಯ, ಹಿಂಸೆ ಜೀವಂತವಿರುವ ವರೆಗೆ ಈ ಕಾವ್ಯ ಪ್ರತಿಧ್ವನಿಸುತ್ತದೆ. ಯುವ ಕವಿಗಳಿಂದ ಇಂತಹ ಅಮರ ಸಾಹಿತ್ಯ ಹುಟ್ಟಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.
Related Articles
Advertisement
ಪುರಸಭೆ ಅಧ್ಯಕ್ಷೆ ಮೈನಾಬಾಯಿ ಗೋಪಾಲ ರಾಠೊಡ ಉದ್ಘಾಟಿಸಿದರು. ಸದಾಶಿವ ಕಟ್ಟಿಮನಿ ಅತಿಥಿಯಾಗಿದ್ದರು.ಕಸಾಪ ವಲಯ ಅಧ್ಯಕ್ಷ ಖೇಮಲಿಂಗ ಬೆಳಮಗಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಉಪಾಧ್ಯಕ್ಷ ಮಲ್ಲಯ್ಯ ಗುತ್ತೇದಾರ, ಶಿಕ್ಷಕ ಸಿದ್ದಲಿಂಗ ಬಾಳಿ, ಶಕುಂತಲಾ ಪೋದ್ದಾರ, ವಿಜಯಕುಮಾರ ಸಿಂಗೆ, ಶ್ರವಣಕುಮಾರ ಮೌಸಲಗಿ, ಶರಣು ಹೇರೂರ, ನಾಗೇಂದ್ರ ಜೈಗಂಗಾ, ಶೇಖಪ್ಪ ಹೇರೂರ, ವೀರಣ್ಣ ಯಾರಿ ಪಾಲ್ಗೊಂಡಿದ್ದರು. ಕವಿಗಳಾದ ಹಣಮಂತ ಘಂಟೇಕರ, ಯಶವಂತ ಧನ್ನೇಕರ, ಬಸವರಾಜ ಹೊಸಮನಿ, ಮಲ್ಲೇಶ ನಾಟೀಕಾರ,
ರಾಜಶೇಖರ ಕಡಗನ, ಶಿವುಕುಮಾರ ಕೊಳ್ಳಿ, ಹಣಮಂತ ಶಹಾಬಾದ, ವಿಕ್ರಮ ನಿಂಬರ್ಗಾ ಮತ್ತಿತರರು ಸ್ವರಚಿತ ಕವನ ವಾಚಿಸಿದರು. ಮಾತೋಶ್ರೀ ರಮಾಬಾಯಿ ಕನ್ಯಾ ಪ್ರೌಢಶಾಲೆ ವಿದ್ಯಾರ್ಥಿನಿಯರು ಭಾವಗೀತೆ ಹಾಡಿದರು. ಕಸಾಪ ಕೋಶಾಧ್ಯಕ್ಷ ದೇವಿಂದ್ರ ಕರದಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಗೌರವ ಕಾರ್ಯದರ್ಶಿ ಚಂದ್ರು ಕರಣಿಕ ಸ್ವಾಗತಿಸಿದರು. ಸಿದ್ದಯ್ಯಶಾಸ್ತ್ರೀ ನಂದೂರಮಠ ನಿರೂಪಿಸಿದರು, ಭೀಮಾಶಂಕರ ಸಿಂಧೆ ವಂದಿಸಿದರು.