Advertisement
ಉತ್ತರಕನ್ನಡ ಜಿÇÉೆಯ ಚಿಪಗೇರಿಯಲ್ಲಿ ದತ್ತಣ್ಣ ಎಂದು ನನ್ನ ಸರೀಕರೆಲ್ಲ ಕರೆಯುವ ಹಿರಿಯರೊಬ್ಬರಿ¨ªಾರೆ. ಈಗ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಚಿಪಗೇರಿಯಂಥ ಹಳ್ಳಿಯಲ್ಲಿದ್ದು ಸುಮಾರು ಐವತ್ತಕ್ಕೂ ಹೆಚ್ಚು ರಾಗಗಳನ್ನು ಆರಂಭದ ಆಲಾಪದ ಐದು ನಿಮಿಷಗಳಲ್ಲಿಯೇ ಗುರುತಿಸುವಂಥ ಸಾಮರ್ಥ್ಯ ಅವರಲ್ಲಿದ್ದುದು ನಮಗೆಲ್ಲ ಆಗ ಸುಲಭಕ್ಕೆ ಜೀರ್ಣಿಸಿಕೊಳ್ಳಲಾಗದಂಥ ವಿಷಯ! ಇದೆಲ್ಲ ಅವರಿಗೆ ಸಾಧ್ಯವಾಗಿದ್ದು ರೇಡಿಯೋದಲ್ಲಿ ನಿಯಮಿತ ಸಮಯಗಳಲ್ಲಿ ಪ್ರಸಾರವಾಗುತ್ತಿದ್ದ ಶಾಸ್ತ್ರೀಯ ಸಂಗೀತದ ಕಾರ್ಯಕ್ರಮಗಳಿಂದ. ಇದಕ್ಕೆ ವಿಪರೀತದ ಮತ್ತು ತಮಾಷೆಯ ಸಂಗತಿಯೆಂದರೆ ನಮ್ಮ ಕಾಲದ ನನ್ನಂಥ ಯುವ ಸಂಗೀತದ ವಿದ್ಯಾರ್ಥಿಗಳು ರಾಗವೊಂದರ ಲಕ್ಷಣದ ಬಗ್ಗೆ ಸಂದೇಹವು ಬಂದಲ್ಲಿ ಮಾಡುವ ಮೊದಲ ಕೆಲಸವೆಂದರೆ ಆ ರಾಗದ ಹೆಸರನ್ನು ಗೂಗಲ್ ಸರ್ಚ್ ಬಾಕ್ಸಿನಲ್ಲಿ ಟೈಪ್ ಮಾಡುವುದು. ನಿಜವಾಗಿಯೂ ನಾವು ಮಾಡಬೇಕಾದದ್ದು ಯಾವುದೇ ಒಂದು ಘರಾಣೆಯ ಶ್ರೇಷ್ಠ ಕಲಾವಿದರು ಹಾಡಿರುವ ಆ ರಾಗವನ್ನು ಕೇಳುವುದು. ಆದರೆ ನಮ್ಮಲ್ಲಿನ ಆಸ್ಥೆ, ಸಮಯಾನುಕೂಲ ಮತ್ತು ತುರ್ತಾಗಿ ರಾಗವೊಂದನ್ನು ಅರ್ಥ ಮಾಡಿಕೊಳ್ಳಲೇಬೇಕೆಂಬ ಗೂಗಲ್ ಜಮಾನಾದ ವಿಚಿತ್ರ ಹಠವೊಂದು ನಮ್ಮನ್ನು ಗೂಗಲ್ ಸರ್ಚ್ ಬಾಕ್ಸಿಗೆ ಕರೆದೊಯ್ಯುತ್ತದೆ.
Related Articles
Advertisement
ಇಂಥ ಮಾತನ್ನು ಕೇಳಿದ ನಾನು ಒಮ್ಮೆ ಮರ್ಮಶೂಲೆಯಿಂದ ತಲೆತಿರುಗಿ ಬೀಳುವ ಹಂತವನ್ನು ತಲುಪಿದರೂ ಈ ಮಹಾಶಯರ ನೇರನುಡಿ ಮತ್ತು ಆ ನೇರ ಮಾತಿನ ಹಿಂದೆ ಅಡಗಿದ್ದ ಬದುಕಿನ ವ್ಯಂಗ್ಯವು ಕಲಿಯುವಿಕೆ ಮತ್ತು ಬದುಕಿನ ಸಂಬಂಧದ ಬಗ್ಗೆ ಹೊಸ ಬಗೆಯ ಅರ್ಥವೊಂದನ್ನು ನನ್ನಲ್ಲಿ ಹೊಳೆಯಿಸಿತು. ಅವರ ಆ ಮಾತು ಏಕಕಾಲಕ್ಕೆ ಶಾಸ್ತ್ರೀಯ ಸಂಗೀತದ ಕಲಿಯುವಿಕೆಯಲ್ಲಿ ವಿಪರೀತ ಆಸಕ್ತಿಯನ್ನು ಹೊಂದಿಯೂ ಬದುಕಿನ ಕಾರಣಕ್ಕೆ ಭಾರತದಿಂದ ಹೊರಗಿರಬೇಕಾಗಿ ಬಂದು ಗುರುವಿನ ಆಶ್ರಯವನ್ನು ಹೊಂದಲಾಗದ ದೌರ್ಭಾಗ್ಯ ಮತ್ತು ಆ ದೌರ್ಭಾಗ್ಯವು ಈ ಜನ್ಮದಲ್ಲಿ ಕೊನೆಯಾಗುವಂಥದ್ದಲ್ಲವಾದ್ದರಿಂದ ಇರುವ ಪರಿಸ್ಥಿತಿಯನ್ನು ಲಘುವಾಗಿ ತೆಗೆದುಕೊಂಡು ಹೋಗುವಂಥ ಸಮಚಿತ್ತದ ಭಾವ ಇವರೆಡನ್ನೂ ಸಮದೂಗಿಸಿ ಬಿಂಬಿಸುತ್ತದೆ.
ರಾಗವೆಂಬುದನ್ನು ಕಾವ್ಯಸೌಂದರ್ಯದ ಅಂಗದಿಂದ ನೋಡಿದರೆ ಅದಕ್ಕೆ “ಬಣ್ಣ ‘ ಎಂಬ ಅರ್ಥವೂ ಇದೆ. ಒಂದೊಳ್ಳೆಯ ಹಾಡಲು ಬರುವಂಥ ಕಾವ್ಯವೊಂದನ್ನು ಬರೆದ ಭಾವಜೀವಿಗೆ ತನ್ನ ಕಾವ್ಯದ ಭಾವಕ್ಕೆ ಮತ್ತಷ್ಟು ತೀವ್ರತೆಯನ್ನು ಹಚ್ಚುವ ಹಾಡು ಬಲ್ಲ ಜೀವಿಯೊಂದರ ತಲಾಶೆಯು ಯಾವಾಗಲೂ ಇರುತ್ತದೆ. ಹಾಗೆ ಹಾಡುಬಲ್ಲ ಜೀವಿಯು ಸಿಕ್ಕಿ ತನ್ನ ಕಾವ್ಯವನ್ನು ಹಾಡಿದರೆ ಕಾವ್ಯಜೀವಿಗೆ ಸಂತೋಷ. ಆ ಹಾಡಿನಲ್ಲಿ ನಿಜವಾಗಿ ಒಂದಾಗುವುದು ಕಾವ್ಯದ ಬಣ್ಣ ಮತ್ತು ಹಾಡಿನ ರಾಗದ ಬಣ್ಣ. ಕಾವ್ಯಜೀವಿಯ ಭಾವ ಮತ್ತು ಹಾಡುಗಾರನ ಅಂತರಂಗಗಳು ಒಂದಾಗುವ ಆ ಬಣ್ಣಗಳ ಮೇಳಕ್ಕೆ ಒಂದೊಳ್ಳೆಯ ಭದ್ರಗಲ್ಲನ್ನು ಹಾಕುವುದು ಹಾಡಿನ ರಾಗ.
ಇಲ್ಲಿ ಗಮನಿಸಬೇಕಾದ ಮತ್ತೂಂದು ಅಂಶವಿದೆ. ಅತೀ ಸಾಮಾನ್ಯ ಕೇಳುಗನೂ ಅಂಥ ಹಾಡನ್ನು ಕೇಳುತ್ತಾನೆ ಮತ್ತು ರಾಗಗಳನ್ನು ಬಲ್ಲ ಸಂಗೀತಜ್ಞನೂ ಆ ಹಾಡನ್ನು ಕೇಳುತ್ತಾನೆ. ಹಾಡಿನ ಸಾಹಿತ್ಯವನ್ನು ಆನಂದಿಸಲು ಯಾವ ಪೂರ್ವತಯಾರಿಯೂ ಬೇಕಿಲ್ಲದಿದ್ದರೂ ಹಾಡಿನಲ್ಲಿ ಹೊಸತಾದ ಬಣ್ಣವೊಂದು ಇದೆ ಅಥವಾ ಇಲ್ಲ ಎಂಬುದನ್ನು ಗಮನಿಸಲು ಒಂದು ಅಭ್ಯಸಿತ ಮನಸ್ಸು ಬೇಕು ಅಥವಾ ಹಾಡುಗಳನ್ನು ಕೇವಲ ಭಾವನಾಜಗತ್ತಿನಲ್ಲಿ ಕೇಳುತ್ತ ಕಳೆಯುವ ಹುಚ್ಚು ಮನಸ್ಸು ಬೇಕು. ಈ ಎರಡು ಬಗೆಯ ಮನಸ್ಸುಗಳು ಹಾಡೊಂದನ್ನು ಹೊಕ್ಕುವ ಬಗೆಯು ವಿಭಿನ್ನವಾಗಿದ್ದರೂ ಕೊನೆಗೆ ಮೊರೆಹೋಗುವುದು, ಕಳೆದು ಹೋಗುವುದು, ಆ ಹಾಡು ಹಚ್ಚುವ ಬಣ್ಣಗಳಲ್ಲಿಯೇ.
ದಕ್ಷಿಣಆಫ್ರಿಕಾದ “ಬ್ಲೂಮ್ ಫೌಂಟೀನ್’ ಎಂಬ ನಗರದÇÉೊಂದು ಆಪ್ತ ಸಿತಾರ್ ಕಛೇರಿ. ವಾದಕ ಆ ರಾಗವನ್ನು ತನ್ನ ಪ್ರಯತ್ನವನ್ನು ಮೀರುತ್ತ ನುಡಿಸುತ್ತಿ¨ªಾನೆ. ಸುತ್ತ ನೆರೆದ ವಿಭಿನ್ನ ಸಾಂಸ್ಕೃತಿಕ ಹಿನ್ನೆಲೆಯ ಇಪ್ಪತ್ತೈದೇ ಕೇಳುಗರಲ್ಲಿ ಒಬ್ಬರಿಗೂ ರಾಗಗಳ ಪರಿಚಯವಿಲ್ಲ. ಇಷ್ಟಾಗಿ ಕಾರ್ಯಕ್ರಮವು ಮುಗಿಯುವ ಹೊತ್ತಿಗೆ ಕೆಲವರ ಕಣ್ಣುಗಳಲ್ಲಿ ಆಶ್ಚರ್ಯ, ಕೆಲವರ ಕಣ್ಣುಗಳಲ್ಲಿ ದಿವ್ಯ ಪ್ರಶಾಂತ ಭಾವ. ಒಬ್ಟಾಕೆ ಬಂದು ಕಲಾವಿದನಲ್ಲಿ ಹೇಳುತ್ತಾಳೆ: “ಕಛೇರಿಯ ಉದ್ದಕ್ಕೂ ಮುಚ್ಚಿದ ಕಣ್ಣುಗಳ ಒಳಗೆ ನಾನು ಬಣ್ಣಗಳನ್ನು ನೋಡುತ್ತಿ¨ªೆ!’
ಸ್ವರ, ನಾದ, ಶ್ರುತಿ ಮೊದಲಾದ ಅಗತ್ಯ ಅಂಗಗಳನ್ನು ಒಳಗೊಳ್ಳುವ ಶಾಸ್ತ್ರೀಯ ಸಂಗೀತ ಗೊತ್ತಿಲ್ಲದ ಕಿವಿಗೆ ಅತ್ಯಂತ ಕಠೊರ ಎನ್ನಿಸುವ “ರಾಗ’ ಎಂಬ ಶಬ್ದವನ್ನು ಶಬ್ದದ ಹೊರತಾಗಿ ಕಣ್ಣು ಮುಚ್ಚಿ ನಿಜವಾಗಿ ನಾವು ಹೀಗೂ ನೋಡಬಹುದು. ರಾಗಕ್ಕೊಂದು ಸೌಂದರ್ಯವಿರುತ್ತದೆ ಮತ್ತು ಆ ಸೌಂದರ್ಯವು ಅದೇ ರಾಗವನ್ನು ಎಷ್ಟು ಬಾರಿ ಕೇಳಿದರೂ ಹೊಸತಾಗಿ ಕಾಣಿಸುತ್ತದೆ. ವಿಷಯ ಕೇಳಿದರೆ, ಬಣ್ಣದ ಪ್ರಮಾಣವು ಸೌಂದರ್ಯವನ್ನು ನಿರ್ಧರಿಸುತ್ತದೆ!
– ಕಣಾದ ರಾಘವ