Advertisement

Gaza ಆಸ್ಪತ್ರೆ ದಾಳಿ; ಉಗ್ರರ ರಾಕೆಟ್ ಮಿಸ್ ಫೈರ್ ಆಗಿ ಅಮಾಯಕರು ಬಲಿ?

04:54 PM Oct 18, 2023 | Team Udayavani |

ಗಾಜಾ: ಸುಮಾರು 500ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಗಾಜಾದ ಅಲ್ ಅಹ್ಲಿ ಅರಬ್ ಆಸ್ಪತ್ರೆಯ ಸ್ಫೋಟದಲ್ಲಿ ಭಾಗಿಯಾಗಿರುವುದನ್ನು ಇಸ್ರೇಲಿ ಮಿಲಿಟರಿ ಬುಧವಾರ ನಿರಾಕರಿಸಿದ್ದು, ವೈಮಾನಿಕ ಯುದ್ಧಸಾಮಗ್ರಿಗಳಿಂದ ನೇರವಾದ ಹೊಡೆತಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದೆ.

Advertisement

ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಇಸ್ರೇಲಿ ರಕ್ಷಣಾ ಪಡೆಗಳ ವಕ್ತಾರರು, ಇಸ್ರೇಲ್ ಕಡೆಗೆ ಇಸ್ಲಾಮಿಕ್ ಜಿಹಾದ್ ಉಗ್ರಗಾಮಿಗಳು ಹಾರಿಸಿದ ರಾಕೆಟ್‌ಗಳು ಉಡಾವಣೆಯಾದ ನಂತರ ಗುರಿ ತಲುಪುವುದು ವಿಫಲವಾಗಿ ಆಸ್ಪತ್ರೆಗೆ ಹೊಡೆದಿವೆ ಎಂದು ಹೇಳಿದ್ದಾರೆ.

‘ಗಾಜಾದಿಂದ ಕಳೆದ 11 ದಿನಗಳಲ್ಲಿ ಸುಮಾರು 450 ರಾಕೆಟ್‌ಗಳು ಹಾರಿಸಲಾಗಿದ್ದು ಹೊಡೆದುರುಳಿಸಲಾಗಿದೆ. ರಾಕೆಟ್ ಮಿಸ್ ಫೈರಿಂಗ್ ಬಗ್ಗೆ ಮಾತನಾಡುತ್ತಿರುವ ಉಗ್ರರ ನಡುವಿನ ಸಂವಹನದ ಬಗ್ಗೆ ನಮಗೆ ಗುಪ್ತಚರ ಮಾಹಿತಿ ಇದೆ. ಆಸ್ಪತ್ರೆಗೆ ಅಪ್ಪಳಿಸಿದ ರಾಕೆಟ್ ಭೂಮಿ, ಸಮುದ್ರ ಅಥವಾ ವಾಯುಮಾರ್ಗದಿಂದ ಯಾವುದೇ ರೀತಿಯಲ್ಲಿ ಇಸ್ರೇಲ್ ರಕ್ಷಣಾ ಪಡೆಗಳಿಗೆ ಸೇರಿಲ್ಲ ಎಂದು ತನಿಖೆ ದೃಢಪಡಿಸಿದೆ’ಎಂದು ಅವರು ಹೇಳಿದರು.

ಮಾರಣಾಂತಿಕ ಸ್ಫೋಟದ ನಂತರ 500ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ.ಪ್ಯಾಲೆಸ್ಟೀನಿಯನ್ನರು ಇಸ್ರೇಲ್ ಅನ್ನೇ ದಾಳಿಯ ಹೊಣೆಗಾರರನ್ನಾಗಿ ಮಾಡಿದ್ದಾರೆ. ಆಸ್ಪತ್ರೆಯಲ್ಲಿ ಹಲವಾರು ಮಂದಿ  ಚಿಂತಾಜನಕ ಸ್ಥಿತಿಯಲ್ಲಿದ್ದು, ಪುಟ್ಟ ಪುಟ್ಟ ಮಕ್ಕಳು ವೃದ್ದರು ರೋಗಿಗಳು ಅಸಾಹಾಯಕಾಗಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಯುದ್ಧದ ಭೀಕರತೆಯನ್ನು ಸಾರಿ ಹೇಳುತ್ತಿದೆ.

ಆಸ್ಪತ್ರೆ ದಾಳಿ ಬಳಿಕ ಆಕ್ರಮಿತ ವೆಸ್ಟ್ ಬ್ಯಾಂಕ್ ಮತ್ತು ಜೋರ್ಡಾನ್ ಮತ್ತು ಟರ್ಕಿ ಸೇರಿದಂತೆ ಹಲವು ದೇಶಗಳಲ್ಲಿ ವ್ಯಾಪಕ ಪ್ರತಿಭಟನೆಗಳನ್ನು ನಡೆಸಲಾಗುತ್ತಿದೆ.

Advertisement

ಹಮಾಸ್ ಉಗ್ರರು ಈ ಸ್ಫೋಟದಿಂದ ಸಾವುನೋವುಗಳ ಸಂಖ್ಯೆಯನ್ನು ಹೆಚ್ಚಿಸಿದೆಸ್ಫೋಟಕ್ಕೆ ಕಾರಣವೇನು ಎಂದು ಹೇಳಿಕೊಂಡಷ್ಟು ಬೇಗನೆ ತಿಳಿಯುವುದಿಲ್ಲ ಎಂದು ಇಸ್ರೇಲಿ ಮಿಲಿಟರಿ ಆರೋಪಿಸಿದೆ.

“ಸಂಜೆ 6.15 ಕ್ಕೆ, ಇಸ್ರೇಲ್‌ನಲ್ಲಿ ಹಮಾಸ್‌ನಿಂದ ರಾಕೆಟ್‌ಗಳ ಸುರಿಮಳೆಯಾಯಿತು, ನಂತರ ಸಂಜೆ 6.59 ಕ್ಕೆ ಸುಮಾರು 10 ರಾಕೆಟ್‌ಗಳ ಸುರಿಮಳೆಯಾಯಿತು. ಅದೇ ಸಮಯದಲ್ಲಿ ಆಸ್ಪತ್ರೆಯಲ್ಲಿ ಸ್ಫೋಟ ಸಂಭವಿಸಿದೆ. ನಮ್ಮ ಗುಪ್ತಚರ ವರದಿಗಳ ಪ್ರಕಾರ, ಹಮಾಸ್ ಇಸ್ಲಾಮಿಕ್ ಜಿಹಾದ್ ರಾಕೆಟ್‌ಗಳನ್ನು ಗುರಿತಪ್ಪಿ ಉಡಾಯಿಸಿದ್ದು, ನಿಜವಾಗಿ ಏನಾಯಿತು ಎಂಬುದನ್ನು ಮರೆಮಾಡಲು ಜಾಗತಿಕ ಮಾಧ್ಯಮಗಳಲ್ಲಿ ಪ್ರಚಾರವನ್ನು ಪ್ರಾರಂಭಿಸಲು ನಿರ್ಧರಿಸಿದೆ” ಎಂದು ಹೇಳಿದೆ.

ಪ್ರಧಾನಿ ಮೋದಿ ಖಂಡನೆ
”ನಡೆಯುತ್ತಿರುವ ಘರ್ಷಣೆಯಲ್ಲಿ ನಾಗರಿಕ ಸಾವುನೋವುಗಳು ಅತ್ಯಂತ ಕಳವಳಕಾರಿ ಗಂಭೀರ ವಿಷಯವಾಗಿದ್ದು, ಅದರಲ್ಲಿ ಭಾಗಿಯಾಗಿರುವವರು ಹೊಣೆಗಾರರಾಗಲೇಬೇಕು” ಎಂದು ನರೇಂದ್ರ ಮೋದಿ ಬುಧವಾರ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next