Advertisement

ಸೇನೆಯಿಂದ ಕಾಶ್ಮೀರದ ಐದು ಟಾಪ್‌ ಉಗ್ರರ ಹಿಟ್‌ ಲಿಸ್ಟ್‌ ರಿಲೀಸ್‌

03:55 PM Sep 16, 2017 | udayavani editorial |

ಶ್ರೀನಗರ : ಅಮರನಾಥ ಯಾತ್ರಿಕರ ಮೇಲೆ ಉಗ್ರ ದಾಳಿ ನಡೆಸಿದ್ದ ಮಾಸ್ಟರ್‌ ಮೈಂಡ್‌ ಉಗ್ರ, ಲಷ್ಕರ್‌ ಎ ತಯ್ಯಬ ಸಂಘಟನೆಯ ಕಮಾಂಡರ್‌ ಅಬು ಇಸ್ಮಾಯಿಲ್‌ನನ್ನು ಶ್ರೀನಗರದಲ್ಲಿನ ಎನ್‌ಕೌಂಟರ್‌ನಲ್ಲಿ ಹತ್ಯೆಗೈದ ಒಂದು ದಿನದ ತರುವಾಯ ಜಮ್ಮು ಕಾಶ್ಮೀರದಲ್ಲಿನ ಭದ್ರತಾ ಪಡೆ, ಕಾಶ್ಮೀರ ಕಣಿವೆಯಲ್ಲಿ ಕ್ರಿಯಾಶೀಲರಾಗಿರುವ ಐವರು  ಉನ್ನತ ಕಟ್ಟರ್‌ ಉಗ್ರರನ್ನು ಮಟಾಶ್‌ ಮಾಡುವ ತನ್ನ ಹಿಟ್‌ ಲಿಸ್ಟ್‌ ಪ್ರಕಟಿಸಿದೆ.

Advertisement

ಇನ್ನೊಂದು ತಿಂಗಳ ಒಳಗಾಗಿ ಈ ಐವರು ಉನ್ನತ ಉಗ್ರರನ್ನು ಹತ್ಯೆಗೈವ ಯೋಜನೆಯನ್ನು ತಾನು ಹೆಣೆದಿರುವುದಾಗಿ ಭದ್ರತಾ ಪಡೆ ಹೇಳಿದೆ.

ಭದ್ರತಾ ಪಡೆಗಳ ಹಿಟ್‌ ಲಿಸ್ಟ್‌ ನಲ್ಲಿರುವ ಐವರು ಉಗ್ರರ ಸಂಕ್ಷಿಪ್ತ ವಿವರ ಇಲ್ಲಿದೆ :

ಝಕೀರ್‌ ಮೂಸಾ : 

 ಕಾಶ್ಮೀರ ಕಣಿವೆಯ ಓರ್ವ ಮೋಸ್ಟ್‌ ವಾಂಟೆಡ್‌ ಉಗ್ರನಾಗಿರುವ ಈತ ಕಾಶ್ಮೀರದಲ್ಲಿನ ಅಲ್‌ ಕಾಯಿದಾ ಘಟಕದ ಮುಖ್ಯಸ್ಥನಾಗಿದ್ದಾನೆ. ಹಿಜ್‌ಬುಲ್‌ ಮುಜಾಹಿದೀನ್‌ ಸಂಘಟನೆಯಂದ ಈಚೆಗೆ ಹೊರ ಬಂದಿದ್ದ ಈತ ಬಳಿಕ ಅಲ್‌ ಕಾಯಿದಾ ಸೇರಿದ್ದ. 20ರ ಹರೆಯದ ಈತನನ್ನು ಹತ ಬುರ್ಹಾನ್‌ ವಾನಿಯ ಉತ್ತರಾಧಿಕಾರಿಯಾಗಿ ನೇಮಿಸಲಾಗಿತ್ತು. ಆದರೆ ಈತ ಹಿಜ್‌ಬುಲ್‌ ಸಂಘಟನೆಯಿಂದ ಬೇರ್ಪಟ್ಟು ತಾಲಿಬಾನ್‌ ಎ ಕಶ್ಮೀರ್‌ ಎಂಬ ತನ್ನದೇ ಉಗ್ರ ಸಂಘಟನೆಯನ್ನು ಸ್ಥಾಪಿಸಿದ್ದ.

Advertisement

ರಿಯಾಜ್‌ ನಾಯ್‌ಕೂ :

ಉಗ್ರರ ವಾಂಟೆಡ್‌ ಪಟ್ಟಿಯಲ್ಲಿ 29ರ ಹರೆಯದ ಈತ ಎ++ ಕೆಟಗರಿಗೆ ಸೇರಿದವನಾಗಿದ್ದಾನೆ. ಈತ ಹಿಜ್‌ಬುಲ್‌ ಮುಜಾಹಿದೀನ್‌ ಸಂಘಟನೆ ಹೊಸ ಮುಖ್ಯಸ್ಥ. ಕಳೆದ ತಿಂಗಳಲ್ಲಿ ಹತನಾಗಿದ್ದ ಯಾಸಿನ್‌ ಇಟ್ಟೂ  ಗೆ ಈತ ಉತ್ತರಾಧಿಕಾರಿ. 

ಸದ್ದಾಂ ಪೆದ್ದಾರ್‌ :

ಸಲೀಂ ಅಲಿಯಾಸ್‌ ಝೈದ್‌ ಶೋಪಿಯಾನ್‌ ನಲ್ಲಿನ ಹಿಜ್‌ಬುಲ್‌ ಮುಜಾಹಿದೀನ್‌ ಜಿಲ್ಲಾ ಕಮಾಂಡರ್‌. ಈತ ಶೋಪಿಯಾನ್‌ನ ಶ್ರೀಮಾಲ್‌ ಎಂಬಲ್ಲಿನ ನಿವಾಸಿ. 2015ರ ಸೆಪ್ಟಂಬರ್‌ನಲ್ಲಿ ಈತನ ನೇಮಕ ನಡೆದಿತ್ತು. ಈತ ಬುರ್ಹಾನ್‌ ವಾನಿ ಪಂಗಡದವ. ಹಿಜ್‌ಬುಲ್‌ನಿಂದ ಮೂಸಾ ನಿರ್ಗಮಿಸಿದ ಬಳಿಕ ಈತ ಈ ಸಂಘಟನೆಯ ಟಾಪ್‌ ಕಮಾಂಡರ್‌ ಆದ. 

ಝೀನಾತ್‌ ಉಲ್‌ ಇಸ್ಲಾಂ : 

28ರ ಹರೆಯದ ಶೋಪಿಯಾನ್‌ ನಿವಾಸಿಯಾಗಿರುವ ಈತ 2015ರಲ್ಲಿ ಲಷ್ಕರ್‌ ಎ ತಯ್ಯಬ ಸೇರಿಕೊಂಡಿದ್ದ. ಅಬು ಇಸ್ಮಾಯಿಲ್‌ ಹತನಾದ ಬಳಿಕ ಈತ ಎಲ್‌ಇಟಿ ಉಗ್ರ ಸಂಘಟನೆಯ ಮುಂದಿನ ಕಮಾಂಡರ್‌ ಆಗಿದ್ದಾನೆ. ಈತ ಶೋಪಿಯಾನ್‌ನ ಜೇನಿಪುರದ ನಿವಾಸಿ. ಶೋಪಿಯಾನ್‌ ಉಗ್ರ ದಾಳಿಯ ಹಿಂದಿನ ಮಾಸ್ಟರ್‌ ಮೈಂಡ್‌. ಈತನ ಈ ದಾಳಿಯಲ್ಲಿ ಮೂವರು ಜವಾನರು ಹುತಾತ್ಮರಾಗಿದ್ದರು.

ಖಾಲೀದ್‌ : 

ಈತ ಪಾಕ್‌ನಿವಾಸಿ. ಈತನ ನಿಜ ಹೆಸರು ಅಬು ಹಂಸ ಇದ್ದಿರಬೇಕು ಎಂದು ಪೊಲೀಸರು ಶಂಕಿಸುತ್ತಾರೆ. ಈತ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ವಿಭಾಗೀಯ ಕಮಾಂಡರ್‌. 2016ರಿಂದ ಈತ ಉತ್ತರ ಕಾಶ್ಮೀರದ ಶೋಪಿಯಾನ್‌ನಲ್ಲಿ ಸಕ್ರಿಯ ಉಗ್ರನಾಗಿದ್ದಾನೆ. 

Advertisement

Udayavani is now on Telegram. Click here to join our channel and stay updated with the latest news.

Next