Advertisement

Richest People: ಜಗತ್ತಿನ ಸಿರಿವಂತರ ಪಟ್ಟಿ : ಮಸ್ಕ್‌ಗೆ ಇಲ್ಲ ಮೊದಲ ಸ್ಥಾನ

11:57 AM Jan 30, 2024 | Team Udayavani |

ಹೊಸದಿಲ್ಲಿ: ಖ್ಯಾತ ಉದ್ಯಮಿ ಟೆಸ್ಲಾ ಮುಖ್ಯಸ್ಥ ಎಲಾನ್‌ ಮಸ್ಕ್ ಅವರನ್ನು ಹಿಂದಿಕ್ಕಿ ಮೊಯಿಟ್‌ ಹೆನ್ನೆಸ್ಸಿ ಲೂಯಿಸ್‌ ವಿಟಾನ್‌ನ ಅಧ್ಯಕ್ಷ ಹಾಗೂ ಸಿಇಒ ಆಗಿರುವ ಬರ್ನಾರ್ಡ್‌ ಅರ್ನಾಲ್ಟ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ ಎಂದು ಫೋರ್ಬ್ಸ್‌ ವರದಿ ತಿಳಿಸಿದೆ.

Advertisement

ಬರ್ನಾರ್ಡ್‌ ಮತ್ತು ಅವರ ಕುಟುಂಬದ ಆಸ್ತಿ ಮೌಲ್ಯವು 23.6 ಶತಕೋಟಿ ಡಾಲರ್‌ಗಳಷ್ಟು ಏರಿಕೆ ಕಾಣುವ ಮೂಲಕ ಇದೀಗ ಒಟ್ಟು ನಿವ್ವಳ ಮೌಲ್ಯವು 207.6 ಶತಕೋಟಿ ಡಾಲರ್‌ಗಳಿಗೆ ತಲುಪಿದೆ.

ಇದು ಮಸ್ಕ್ ಅವರ ನಿವ್ವಳ ಆಸ್ತಿ ಮೌಲ್ಯಕ್ಕಿಂತ ಶೇ.13ರಷ್ಟು ಹೆಚ್ಚಳವಾಗಿದೆ. ಪ್ರಸಕ್ತ ಎಲಾನ್‌ ಮಸ್ಕ್ ಅವರ ನಿವ್ವಳ ಆಸ್ತಿ ಮೌಲ್ಯವು 204.7 ಶತಕೋಟಿ ಡಾಲರ್‌ ಗಳಾಗಿದೆ. 2022ರಿಂದಲೂ ಈ ಇಬ್ಬರು ಉದ್ಯಮಿಗಳು ಜಾಗತಿಕ ಶ್ರೀಮಂತ ವ್ಯಕ್ತಿ ಎಂಬ ಪಟ್ಟ ಅಲಂಕರಿಸಲು ರೇಸ್‌ ನಲ್ಲಿದ್ದರು. ಇದೀಗ ಮಸ್ಕ್ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next