Advertisement

ರಾಜ್ಯಪಾಲರಿಗೆ ನಾಮಕರಣ ಸದಸ್ಯರ ಪಟ್ಟಿ 

11:41 AM May 03, 2017 | Harsha Rao |

ಬೆಂಗಳೂರು: ಸಂಪುಟ ವಿಸ್ತರಣೆ ಸಂಬಂಧ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ವಿಧಾನ ಪರಿಷತ್‌ಗೆ ಮೂವರು ನಾಮಕರಣ ಸದಸ್ಯರ ನೇಮಕ ಸಂಬಂಧ ರಾಜ್ಯಪಾಲರಿಗೆ ಪಟ್ಟಿ ಸಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಆವರಣದಲ್ಲಿ ನಾನಾ ಅಭಿವೃದ್ಧಿ ಯೋಜನೆಗಳಿಗೆ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಪ್ರತಿಕ್ರಿಯಿಸಿದ ಅವರು, ಸಂಪುಟ ವಿಸ್ತರಣೆ ಸಂಬಂಧ ಹೈಕಮಾಂಡ್‌ ಭೇಟಿ ಮಾಡಿ ತೀರ್ಮಾನಿಸಲಾಗುವುದು ಎಂದು ತಿಳಿಸಿದರು. ಎಐಸಿಸಿ ಮಹಾ ಅಧಿವೇಶನವನ್ನು ಬೆಂಗಳೂರಿನಲ್ಲಿ ನಡೆಸುವ
ಯಾವುದೇ ಪ್ರಸ್ತಾವವಿಲ್ಲ. ಕಾಂಗ್ರೆಸ್‌ ರಾಜ್ಯ ಉಸ್ತುವಾರಿಯಾಗಿ ನೇಮಕಗೊಂಡಿರುವ ವೇಣುಗೋಪಾಲ್‌ ಅವರು ನಾನು
ದುಬೈನಲ್ಲಿದ್ದಾಗ ಕರೆ ಮಾಡಿದ್ದರು. ಎಐಸಿಸಿ ಸಭೆಯೊಂದನ್ನು ಮುಗಿಸಿ ನಂತರ ಬರುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.

ಸಚಿವ ತನ್ವೀರ್‌ ಸೇs… ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಭ್ರಷ್ಟಾಚಾರ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ಆರೋಪವನ್ನು ಎಲ್ಲರೂ ಮಾಡುತ್ತಾರೆ. ಆದರೆ ಅದು ನಿಜವೋ, ಸುಳ್ಳೋ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ ಎಂದರು. ಕೆಲ ವಿದ್ಯಾರ್ಥಿಗಳು ಸಚಿವರ ನಿವಾಸದ ಬಳಿ ಪ್ರತಿಭಟನೆ ನಡೆಸಿದ ಬಗ್ಗೆ ಕೇಳಿದ ಪ್ರಶ್ನೆಗೆ, ಅದರ ಹಿಂದೆ ರಾಜಕಾರಣವಿದೆಯೇ ಎಂಬುದನ್ನು ನೋಡಬೇಕಾಗುತ್ತದೆ ಎಂದು ಹೇಳಿದರು.

ಕಾಂಗ್ರೆಸ್‌- ಜೆಡಿಎಸ್‌ ನಡುವೆ ಒಳ ಒಪ್ಪಂದವಾಗಿದೆ ಎಂಬ ಅಪಪ್ರಚಾರ ಮುಖ್ಯಮಂತ್ರಿಗಳ ಕಚೇರಿಯಿಂದಲೇ
ನಡೆಯುತ್ತಿದೆ ಎಂಬ ಎಚ್‌.ಡಿ.ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, “ನಾವೇಕೆ ಆ ರೀತಿ ಮಾಡೋಣ. ಅದರಿಂದ ನಮಗೆ ರಾಜಕೀಯವಾಗಿ ಏನು ಲಾಭ. ಕುಮಾರಸ್ವಾಮಿ ಅವರ ಆರೋಪಗಳು ಆಧಾರರಹಿತ. ಅವರಿಗೆ
ರಾಜಕೀಯವಾಗಿ ಲಾಭವಾಗಲಿದೆ ಎಂಬ ನಿರೀಕ್ಷೆಯಲ್ಲಿ ಆ ರೀತಿ ಹೇಳಿರಬಹುದು. ಆದರೆ ಅದರಿಂದ ಏನು ಆಗುವುದಿಲ್ಲ. ಅವೆಲ್ಲಾ ಸುಳ್ಳು ಆರೋಪಗಳು ಎಂದು ಪ್ರತಿಕ್ರಿಯಿಸಿದರು.

ಮೇಲ್ಮನೆ ಪಟ್ಟಿಯಲ್ಲಿಲ್ಲ ಕೆ.ಪಿ.ನಂಜುಂಡಿ ಹೆಸರು
ಬೆಂಗಳೂರು:
ವಿವಿಧ ಕ್ಷೇತ್ರಗಳಿಂದ ವಿಧಾನ ಪರಿಷತ್‌ಗೆ ಮೂವರು ಗಣ್ಯರನ್ನು ನಾಮ ನಿರ್ದೇಶನ ಮಾಡುವಂತೆ ರಾಜ್ಯ ಸರ್ಕಾರ ರಾಜ್ಯಪಾಲರಿಗೆ ಶಿಫಾರಸು ಮಾಡಿದೆ. ನಿರೀಕ್ಷೆಯಂತೆ ಸಿ.ಎಂ.ಲಿಂಗಪ್ಪ, ಮೋಹನ್‌ ಕೊಂಡಜ್ಜಿ ಹಾಗೂ ಪಿ.ಆರ್‌.ರಮೇಶ್‌ ಅವರ ಹೆಸರನ್ನು ಅಧಿಕೃತವಾಗಿ ರಾಜ್ಯಪಾಲರಿಗೆ ಕಳುಹಿಸಲಾಗಿದೆ. ಶಿಕ್ಷಣ ಕ್ಷೇತ್ರದಿಂದ ಸಿ.ಎಂ.ಲಿಂಗಪ್ಪ, ಸಮಾಜ ಸೇವೆ ಕ್ಷೇತ್ರದಿಂದ ಪಿ.ಆರ್‌.ರಮೇಶ್‌ ಹಾಗೂ ಸಿನಿಮಾ ಕ್ಷೇತ್ರದಿಂದ ಮೋಹನ್‌ ಕೊಂಡಜ್ಜಿ ಹೆಸರನ್ನು ಶಿಫಾರಸು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ. ಈ ಮೊದಲು ಪಿ.ಆರ್‌.ರಮೇಶ್‌ ಬದಲು ಕೆ.ಪಿ.ನಂಜುಂಡಿ ಹೆಸರು ಪಟ್ಟಿಯಲ್ಲಿ ಇತ್ತು ಎಂದು ಹೇಳಲಾಗುತ್ತಿದೆ. ನಂತರ ಕೆ.ಪಿ.ನಂಜುಂಡಿ ಬದಲಿಗೆ ಪಿ.ಆರ್‌.ರಮೇಶ್‌ ಹೆಸರು ಸೇರಿಸಲಾಗಿದೆ ಎಂದು ತಿಳಿದು ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next