Advertisement

ಒಂದು ಶತಕ ಹಲವು ದಾಖಲೆ: ಸಾಧನೆಗಳ ಮೈಲಿಗಲ್ಲು ನೆಟ್ಟ ರಜತ್ ಪಾಟೀದಾರ್

11:16 AM May 26, 2022 | Team Udayavani |

ಕೋಲ್ಕತ್ತಾ: ಪ್ರಯಾಸದಿಂದಲೇ ಪ್ಲೇ ಆಫ್ ಗೆ ಕಾಲಿಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಎಲಿಮಿನೇಟರ್ ಪಂದ್ಯ ಗೆದ್ದುಕೊಂಡಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಫಾಫ್ ಪಡೆ ಗೆದ್ದು ಕ್ವಾಲಿಫೈಯರ್ 2 ಗೆ ಪ್ರವೇಶ ಪಡೆದಿದೆ. ಅಲ್ಲಿ ರಾಜಸ್ಥಾನ ತಂಡವನ್ನು ಎದುರಿಸಲಾಗಿದೆ.

Advertisement

ಎಲ್ಎಸ್ ಜಿ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್ ಸಿಬಿ ಆರಂಭದಲ್ಲಿ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಸಿಡಿದು ನಂತ ರಜತ್ ಪಾಟೀದಾರ್ ತನ್ನ ಚೊಚ್ಚಲ ಶತಕ ಬಾರಿಸಿ ಮಿಂಚಿದರು. ಕೇವಲ 54 ಎಸೆತ ಎದುರಿಸಿದ ರಜತ್ ಅಜೇಯ 112 ರನ್ ಬಾರಿಸಿದರು.

ಐಪಿಎಲ್ ಹರಾಜಿನಲ್ಲಿ ಬಿಕರಿಯಾಗದ ರಜತ್ ನನ್ನು ಆರ್ ಸಿಬಿ ತಂಡವು ಕೂಟದ ಮಧ್ಯದಲ್ಲಿ ಖರೀದಿ ಮಾಡಿತ್ತು. ತಂಡದಲ್ಲಿದ್ದ ಲವ್ನೀತ್ ಸಿಸೋಡಿಯಾ ಗಾಯಗೊಂಡಾಗ ಬದಲಿ ಆಟಗಾರನಾಗಿ ರಜತ್ ನನ್ನು ಆರ್ ಸಿಬಿ ಆಯ್ಕೆ ಮಾಡಿತ್ತು.

ರಜತ್ ಪಾಟೀದಾರ್ ಒಂದೇ ಇನ್ನಿಂಗ್ಸ್ ನಲ್ಲಿ ಹಲವು ದಾಖಲೆ ಬರೆದಿದ್ದಾರೆ. ರಜತ್ ಇನ್ನಿಂಗ್ ನ್ನು ಐಪಿಎಲ್ ಪ್ಲೇ ಆಫ್ ಗಳಲ್ಲಿ ಸಾರ್ವಕಾಲಿಕ ಶ್ರೇಷ್ಠ ಇನ್ನಿಂಗ್ಸ್ ಎಂದು ಬಣ್ಣಿಸಲಾಗುತ್ತಿದೆ.

ಐಪಿಎಲ್‌ನ ಪ್ಲೇಆಫ್/ನಾಕೌಟ್‌ಗಳಲ್ಲಿ ಶತಕ ಬಾರಿಸಿದ ಮೊದಲ ಅನ್‌ಕ್ಯಾಪ್ಡ್ ಆಟಗಾರ ಎಂಬ ದಾಖಲೆಗೆ ಪಾಟೀದಾರ್ ಪಾತ್ರರಾಗಿದ್ದಾರೆ. 2014ರ ಐಪಿಎಲ್‌ ನ ಫೈನಲ್‌ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಮನೀಶ್ ಪಾಂಡೆ 50 ಎಸೆತಗಳಲ್ಲಿ 94 ರನ್ ಗಳಿಸಿದ್ದು ಅನ್‌ಕ್ಯಾಪ್ಡ್‌ ಆಟಗಾರರ ಹಿಂದಿನ ಗರಿಷ್ಠ ಸ್ಕೋರ್ ಆಗಿತ್ತು.

Advertisement

ಇದನ್ನೂ ಓದಿ:ಏಷ್ಯನ್‌ ಕಪ್‌ ಹಾಕಿ: ಇಂಡೋನೇಶ್ಯ ಎದುರಾಳಿ: ಭರ್ಜರಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

ರಜತ್ 49 ಎಸೆತಗಳಲ್ಲಿ ತಮ್ಮ ಶತಕವನ್ನು ಗಳಿಸಿದರು. ಇದು ಐಪಿಎಲ್‌ ನ ಪ್ಲೇಆಫ್‌ ಗಳು ಅಥವಾ ನಾಕೌಟ್‌ಗಳಲ್ಲಿ ಆಡಿದ ಯಾವುದೇ ಜಂಟಿ ವೇಗದ ಶತಕವಾಗಿದೆ. 2014ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ 55 ಎಸೆತಗಳಲ್ಲಿ 115 ರನ್ ಗಳಿಸಿದ್ದ ವೃದ್ಧಿಮಾನ್ ಸಹಾ ಅವರ ದಾಖಲೆಯನ್ನು ಪಾಟೀದಾರ್ ಸರಿಗಟ್ಟಿದರು.

ರಜತ್ ಪಾಟೀದಾರ್ ಅವರ 49 ಬಾಲ್ ಶತಕ ಈ ಬಾರಿಯ ಐಪಿಎಲ್ ನಲ್ಲಿ ಯಾವುದೇ ಆಟಗಾರನ ಅತೀ ವೇಗದ ಶತಕವಾಗಿದೆ.

ಇದು ಐಪಿಎಲ್‌ ನಲ್ಲಿ ಅನ್‌ಕ್ಯಾಪ್ಡ್ ಆಟಗಾರನ ಮೂರನೇ ಅತಿ ಹೆಚ್ಚು ಸ್ಕೋರ್ ಆಗಿದೆ. ಕಳೆದ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್ಸಿಬಿ ಪರ ದೇವದತ್ ಪಡಿಕ್ಕಲ್ ಗಳಿಸಿದ ಅಜೇಯ 101 ರನ್ ಸಾಧನೆಯನ್ನು ಪಾಟೀದಾರ್ ದಾಟಿದರು. ಮನೀಷ್ ಪಾಂಡೆ (114) ಎರಡನೇ ಸ್ಥಾನದಲ್ಲಿದ್ದರೆ, ಪಾಲ್ ವಾಲ್ತಾಟಿ (120 ರನ್) ಅಗ್ರಸ್ಥಾನದಲ್ಲಿದ್ದಾರೆ.

ಇದು ಐಪಿಎಲ್ ಪಂದ್ಯಾವಳಿಯ ಪ್ಲೇಆಫ್/ನಾಕೌಟ್‌ ಗಳಲ್ಲಿ ಶತಕ ಗಳಿಸಿದ ಆಟಗಾರನ ಐದನೇ ನಿದರ್ಶನವಾಗಿದೆ. ಪಾಟೀದಾರ್ ಔಟಾಗದೆ 112 ರನ್ ಗಳಿಸಿದ್ದು ಪ್ಲೇಆಫ್‌ನಲ್ಲಿ ಇದುವರೆಗಿನ ನಾಲ್ಕನೇ ಗರಿಷ್ಠ ಸ್ಕೋರ್ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next