Advertisement

ಗೌಡರ ಕುಟುಂಬದಲ್ಲಿ 8 ಸ್ಟಾರ್‌ಗಳು

09:43 AM Apr 05, 2019 | mahesh |

ಬೆಂಗಳೂರು: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಜೆಡಿಎಸ್‌ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಎಂಟು ಮಂದಿ ಸೇರಿದಂತೆ 40 ಸ್ಟಾರ್‌ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದೆ. ಸ್ಟಾರ್‌ ಪ್ರಚಾರಕರಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಪ್ರಮುಖರು. ಇವರ ಜತೆಗೆ ಅನಿತಾ ಕುಮಾರಸ್ವಾಮಿ, ಭವಾನಿ ರೇವಣ್ಣ, ನಿಖೀಲ್‌ ಕುಮಾರಸ್ವಾಮಿ, ಪ್ರಜ್ವಲ್‌ ರೇವಣ್ಣ ಮತ್ತು ಸೂರಜ್‌ ರೇವಣ್ಣ ಕೂಡ ಪಟ್ಟಿಯಲ್ಲಿ ದ್ದು, ಜೆಡಿಎಸ್‌ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲಿದ್ದಾರೆ.

Advertisement

ಇವರಷ್ಟೇ ಅಲ್ಲ, ಗೌಡರ ಬೀಗ ಹಾಗೂ ಸಚಿವ ಡಿ.ಸಿ.ತಮ್ಮಣ್ಣ ಮತ್ತು ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿಯೂ ಆಗಿರುವ ಮತ್ತೂಬ್ಬ ಬೀಗ ಪ್ರೊ. ಕೆ.ಸಿ.ರಂಗಪ್ಪ ಕೂಡ ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿದ್ದಾರೆ. ಉಳಿದಂತೆ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌. ವಿಶ್ವನಾಥ್‌,
ಕುಮಾರಸ್ವಾಮಿ ಸರ್ಕಾರದಲ್ಲಿ ಸಚಿವರಾಗಿರುವ ಜಿ.ಟಿ.ದೇವೇಗೌಡ, ಬಂಡೆಪ್ಪ ಕಾಶೆಂಪೂರ, ಎಸ್‌.ಆರ್‌. ಶ್ರೀನಿವಾಸ್‌, ಸಿ.ಎಸ್‌.ಪುಟ್ಟರಾಜು, ವೆಂಕಟರಾವ್‌ ನಾಡಗೌಡ, ಸಾ.ರಾ.ಮಹೇಶ್‌, ಎಂ.ಸಿ.ಮನಗೂಳಿ ಸ್ಟಾರ್‌
ಪ್ರಚಾರಕರಾಗಿದ್ದಾರೆ.

ರಾಜ್ಯ ಸಭೆ ಸದಸ್ಯ ಕುಪೇಂದ್ರರೆಡ್ಡಿ, ಸಂಸದ ಎಲ್‌. ಆರ್‌. ಶಿವರಾಮೇಗೌಡ ಮಾಜಿ ಸಚಿವ ಬಸವರಾಜ ಹೊರಟ್ಟಿ, ಪಿ.ಜಿ.ಆರ್‌.ಸಿಂಧ್ಯಾ, ಶಾಸಕರಾದ ಜಿ.ಕೆ. ಕೃಷ್ಣಾರೆಡ್ಡಿ, ಡಾ.ಕೆ.ಅನ್ನದಾನಿ, ಪರಿಷತ್‌ ಸದಸ್ಯರಾದ ಟಿ.ಎ.ಶರವಣ, ಬೆಮೆಲ್‌ ಕಾಂತರಾಜ್‌, ಮರಿತಿಬ್ಬೇ ಗೌಡ, ಮಾಜಿ ಶಾಸಕರಾದ ವೈ.ಎಸ್‌.ವಿ.ದತ್ತಾ, ಬಿ.ಬಿ.ನಿಂಗಯ್ಯ, ಎನ್‌.ಎಚ್‌.ಕೋನರೆಡ್ಡಿ, ಕೆ.ಎಂ.ತಿಮ್ಮರಾಯಪ್ಪ, ರಮೇಶ್‌ ಬಾಬು, ಮುಖಂಡರಾದ ಎ.ಪಿ.ರಂಗನಾಥ್‌, ಸೈಯದ್‌ ಶವುಲ್ಲಾ, ಕೆ.ವಿ.
ಅಮರನಾಥ್‌, ಸೈಯದ್‌ ಮೊಯಿದ್ದೀನ್‌ ಅಲ್ತಾಫ್, ಮಹಮ್ಮದ್‌ ಜಫ್ರುಲ್ಲಾ ಖಾನ್‌, ಆರ್‌. ಪ್ರಕಾಶ್‌ ಜೆಡಿಎಸ್‌ ಸ್ಟಾರ್‌ ಪ್ರಚಾರಕರಾಗಿದ್ದಾರೆ.

ಎಚ್‌.ಡಿ.ದೇವೇಗೌಡರು, ಕುಮಾರಸ್ವಾಮಿ , ಎಚ್‌.ವಿಶ್ವನಾಥ್‌ ಅವರು ಕಾಂಗ್ರೆಸ್‌ ನಾಯಕರ ಜತೆ ಜಂಟಿ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಉಳಿದ ಸ್ಟಾರ್‌ ಪ್ರಚಾರಕರು ಜೆಡಿಎಸ್‌ ಸ್ಪರ್ಧೆ ಮಾಡಿರುವ ಏಳು ಕ್ಷೇತ್ರಗಳಲ್ಲದೆ ಕಾಂಗ್ರೆಸ್‌ ಅಭ್ಯರ್ಥಿಗಳು ಸ್ಪರ್ಧೆ ಮಾಡಿರುವ 21
ಕ್ಷೇತ್ರಗಳಲ್ಲೂ ಆಹ್ವಾನ ಬಂದರೆ ಪ್ರಚಾರಕ್ಕೆ ತೆರಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next