ಅಹಮದಾಬಾದ್: ಎರಡು ತಿಂಗಳು, 12 ಕ್ರೀಡಾಂಗಣಗಳು, 75 ಪಂದ್ಯಗಳ ಬಳಿಕ 2023ರ ಐಪಿಎಲ್ ಕೂಟ ಅಭೂತಪೂರ್ವ ಅಂತ್ಯ ಕಂಡಿದೆ. ಚಾಂಪಿಯನ್ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐದನೇ ಬಾರಿಗೆ ಟ್ರೋಫಿ ಗೆದ್ದು ಬೀಗಿದೆ. ಸತತ ಟ್ರೋಫಿ ಗೆಲ್ಲುವ ಗುಜರಾತ್ ಟೈಟಾನ್ಸ್ ಕನಸು ನುಚ್ಚುನೂರಾಗಿದೆ.
ಈ ಬಾರಿಯ ಐಪಿಎಲ್ ಕೂಟವು ಹಲವು ವಿಶೇಷತೆಗಳನ್ನು ಹೊಂದಿತ್ತು. ಸ್ಟಾರ್ ಆಟಗಾರರಿಗಿಂತ ದೇಶಿಯ ಆಟಗಾರರು ಈ ಬಾರಿ ಹೆಚ್ಚು ಮಿಂಚಿದರು. ಐಪಿಎಲ್ ಫೈನಲ್ ಪಂದ್ಯದ ಬಳಿಕ ಹಲವು ಪ್ರಶಸ್ತಿಗಳನ್ನು ನೀಡಲಾಯಿತು. ಅದರ ವಿವರ ಇಲ್ಲಿದೆ.
ವಿಜೇತರು: ಚೆನ್ನೈ ಸೂಪರ್ ಕಿಂಗ್ಸ್
ರನ್ನರ್ ಅಪ್: ಗುಜರಾತ್ ಟೈಟಾನ್ಸ್
Related Articles
ಮೂರನೇ ಸ್ಥಾನ: ಮುಂಬೈ ಇಂಡಿಯನ್ಸ್
ನಾಲ್ಕನೇ ಸ್ಥಾನ: ಲಕ್ನೋ ಸೂಪರ್ ಜೈಂಟ್ಸ್
ಋತುವಿನ ಅತ್ಯುತ್ತಮ ಕ್ರೀಡಾಂಗಣಗಳು: ಈಡನ್ ಗಾರ್ಡನ್ಸ್ ಮತ್ತು ವಾಂಖೆಡೆ ಸ್ಟೇಡಿಯಂ
ಐಪಿಎಲ್ ಫೇರ್ ಪ್ಲೇ ಪ್ರಶಸ್ತಿ: ಡೆಲ್ಲಿ ಕ್ಯಾಪಿಟಲ್ಸ್
ಆರೆಂಜ್ ಕ್ಯಾಪ್ (ಅತಿ ಹೆಚ್ಚು ರನ್ ಸ್ಕೋರರ್): ಶುಭಮನ್ ಗಿಲ್ (ಗುಜರಾತ್) 890 ರನ್
ಪರ್ಪಲ್ ಕ್ಯಾಪ್ (ಪ್ರಮುಖ ವಿಕೆಟ್ ಟೇಕರ್): ಮೊಹಮ್ಮದ್ ಶಮಿ (ಗುಜರಾತ್) 28 ವಿಕೆಟ್
ಟೂರ್ನಮೆಂಟ್ ನ ಸೂಪರ್ ಸ್ಟ್ರೈಕರ್: ಗ್ಲೆನ್ ಮ್ಯಾಕ್ಸ್‌ವೆಲ್
ಗೇಮ್ ಟೂರ್ನಮೆಂಟ್ ಚೇಂಜರ್: ಶುಭಮನ್ ಗಿಲ್
ಪಂದ್ಯಾವಳಿಯ ವಾಲ್ಯೂಯೇಬಲ್ ಅಸೆಟ್: ಶುಭಮನ್ ಗಿಲ್
ಹೆಚ್ಚು ಬೌಂಡರಿಗಳ ಪ್ರಶಸ್ತಿ: ಶುಭಮನ್ ಗಿಲ್
ಅತೀ ಉದ್ದದ ಸಿಕ್ಸ್ ಪ್ರಶಸ್ತಿ: ಫಾಫ್ ಡು ಪ್ಲೆಸಿಸ್ (115 ಮೀ)
ಕ್ಯಾಚ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ: ರಶೀದ್ ಖಾನ್
ಋತುವಿನ ಉದಯೋನ್ಮುಖ ಆಟಗಾರ: ಯಶಸ್ವಿ ಜೈಸ್ವಾಲ್