ಚಿಂಚೋಳಿ: ತಾಲೂಕಿನ ಚಂದನಕೇರಾ-ಸಾಸರಗಾಂವ ರಾಜ್ಯ ಹೆದ್ದಾರಿ ಮಾರ್ಗದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ ಅವರಿಂದ 1.13 ಲಕ್ಷ ರೂ. ಮದ್ಯ ವಶಪಡಿಸಿಕೊಂಡು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ತಾಲೂಕು ಅಬಕಾರಿ ಇಲಾಖೆ ಸಬ್ ಇನ್ಸಪೆಕ್ಟರ್ ಮಂಜುನಾಥ ಶಿರಹಟ್ಟಿ ತಿಳಿಸಿದ್ದಾರೆ.
ಚಂದನಕೇರಾ ಗ್ರಾಮದ ಕಾಶಿನಾಥ ಪೂಜಾರಿ, ರೇವಣಸಿದ್ಧಪ್ಪ ಮೊಗದಂಪೂರ, ಪ್ರಕಾಶಿ ನಾಶಿ ಅವರನ್ನು ಬಂಧಿಸಲಾಗಿದೆ. 8640 ಲೀಟರ್ ಮದ್ಯ ಮತ್ತು ಒಂದು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.
ಬೀದರ ಮತ್ತು ಕಲಬುರಗಿ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿ ಆಗಿರುವುದರಿಂದ ಅಬಕಾರಿ ಇಲಾಖೆ ತೆಲಂಗಾಣ ಗಡಿಭಾಗಕ್ಕೆ ಹೊಂದಿಕೊಂಡಿರುವ ಕುಂಚಾವರಂ, ಮಿರಿಯಾಣ ಗ್ರಾಮದ ಚೆಕ್‌ಪೋಸ್ಟ್ ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.
ಕಳೆದ ಒಂದು ವಾರದಿಂದ ಇಲ್ಲಿಯ ವರೆಗೆ 72,080 ಲೀಟರ್ ಅಕ್ರಮ ಮದ್ಯ ವಶಪಡಿಸಕೊಳ್ಳಲಾಗಿದೆ. ಅಬಕಾರಿ
ಇಲಾಖೆಯಲ್ಲಿ ಇದುವರೆಗೆ ಮೂರು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.