ಕೋಲಾರ: ಜಿಲ್ಲೆಯ ಮದ್ಯ ಮಾರಾಟ ಉದ್ಯಮಕ್ಕೆ ಸಂಬಂಧಿಸಿದ ಪ್ರಸ್ತುತ ಸಮಸ್ಯೆ, ಹಲವು ಬಗೆಯ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಆಗ್ರಹಿಸಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಅಪರ ಜಿಲ್ಲಾಧಿಕಾರಿ ಮೂಲಕ ಜಿಲ್ಲಾ ಮದ್ಯ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯ ಮದ್ಯ ಮಾರಾಟ ಸನ್ನದುದಾರರಿಗೆ ಅವರ ಉದ್ಯಮದಲ್ಲಿ ಅನೇಕ ತೊಂದರೆ, ಗಂಭೀರ ಸಮಸ್ಯೆಗಳಿದ್ದು, ನಮ್ಮ ಹಲವು ಬಗೆಯ ಬೇಡಿಕೆಗಳನ್ನು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಈ ವೇಳೆ ಜಿಲ್ಲಾ ಮದ್ಯ ಮಾರಾಟಗಾರರ ಕ್ಷೇಮಾ ಭಿವೃದ್ಧಿ ಸಂಘದ ಅಧ್ಯಕ್ಷ ವಿ.ಎ. ವೆಂಕಟಾಚಲಪತಿ ಮಾತನಾಡಿ, ಅಬಕಾರಿ ಇಲಾಖೆ ಅಧಿಕಾರಿಗಳು ಮಾಮೂಲಿ ಹಾಗೂ ಲಂಚಕ್ಕೆ ಕಿರುಕುಳ ನೀಡುವುದ್ದನ್ನು ನಿಲ್ಲಿಸಬೇಕು. ಹಲವಾರು ವರ್ಷಗಳಿಂದ ಒಂದೇ ಕಡೆ ನೌಕರಿ ಮಾಡುತ್ತಿರುವ ಅಧಿಕಾರಿಗಳನ್ನು ವರ್ಗಾಯಿಸಬೇಕು. ಪೊಲೀಸ್ ಇಲಾಖೆಯ ಹಸ್ತಕ್ಷೇಪ ಮತ್ತು ಅನಗತ್ಯ ಸನ್ನದುಗಳನ್ನು ಬಂದ್ ಮಾಡುವ ಕುರಿತು ಅಬಕಾರಿ ಕಾಯ್ದೆ 22(1) ಸಂಪೂರ್ಣ ವಾಗಿ ಅ ಧಿಕಾರಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಮದ್ಯ ಮಾರಾಟದ ಸನ್ನದುದಾರರು ಚಿಲ್ಲರೆ ಮದ್ಯ ಮಾರಾಟಗಾರರ ಸಮಸ್ಯೆ ಹಾಗೂ ಬೇಡಿಕೆಗಳಿಗೆ ಸಂಬಂಧಿಸಿದಂತೆ ಫೆಡರೇಷನ್ ಆಫ್ ವೈನ್ಸ್ ಮರ್ಚೆಂಟ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ಸಭೆಗಳನ್ನು ನಡೆಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿದ್ದರೂ ಪ್ರಯೋಜನವಾಗಿಲ್ಲವೆಂದು ತಿಳಿಸಿದರು.
ಗೊಂದಲ ಪರಿಹರಿಸಿ: ಆನ್‌ಲೆ„ನ್‌ನಲ್ಲಿ ಮದ್ಯ ಮಾರಾಟ ಮಾಡಬಾರದು, 5ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆವುಳ್ಳ ಗ್ರಾಪಂ ವ್ಯಾಪ್ತಿಯಲ್ಲಿ ಹಾದು ಹೋಗುವ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಸಿ.ಎಲ್-6ಎ ಹಾಗೂ ಸಿ.ಎಲ್-7 ಸನ್ನದುಗಳನ್ನು ಪ್ರಾರಂಭಿಸಲು ನೀಡಿರುವ ಆದೇಶವನ್ನು ರದ್ದುಗೊಳಿಸಬೇಕು, 2009ರಲ್ಲಿ ರಾಜ್ಯದಲ್ಲಿ ನವೀಕರಿಸದೆ ಸ್ಥಗಿತಗೊಂಡಿರುವ 463 ಸನ್ನದುಗಳನ್ನು ಎಂಎಸ್‌ಐಎಲ್ ಗೆ ಮಂಜೂರಾತಿ ಮಾಡಿರುವ ಸನ್ನದುಗಳನ್ನು ತೆರೆಯುವುದನ್ನು ತಡೆಹಿಡಿದು 2020-21 ನೇ ಸಾಲಿಗೆ ರದ್ದು ಮಾಡಬೇಕು ಹಾಗೂ ಉಚ್ಚ ನ್ಯಾಯಾಲಯದ ಆದೇಶದ ಬಗ್ಗೆ ಇರುವ ಗೊಂದಲಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ :ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಖ್ಯಾತ ಪಾಪ್ ತಾರೆ ರಿಹಾನಾ v/s ಕಂಗನಾ ?
ಲಾಭಾಂಶ ಹೆಚ್ಚಿಸಿ: ಕೋವಿಡ್-19ರ ಲಾಕ್‌ಡೌನ್ ಸಮಸ್ಯೆಯಿಂದ ಆಗಿರುವ ನಷ್ಟಕ್ಕೆ ಒಳಗಾಗಿರುವ ಉದ್ಯಮ ವಲಯಕ್ಕೆ ಪರಿಹಾರ ಘೋಷಿಸಬೇಕು, ಹೆಚ್ಚಳ ಮಾಡಿರುವ ಅಬಕಾರಿ ಶುಲ್ಕ ಕೈ ಬಿಡಬೇಕು,ಚಿಲ್ಲರೆ ಮದ್ಯ ಮಾರಾಟಗಾರರಿಗೆ 2009 ರ ಪೂರ್ವದಲ್ಲಿ ಶೇ.20 ರಷ್ಟು ನೀಡುತ್ತಿದ್ದ ಲಾಭಾಂಶವನ್ನು ಶೇ.10ಕ್ಕೆ ಇಳಿಸಿ ನಮ್ಮ ಖರ್ಚು ವೆಚ್ಚ ಅಧಿಕವಿದ್ದು, ಲಾಭಾಂಶವನ್ನು ಮತ್ತೆ ಶೇ.20ಕ್ಕೆ ಏರಿಸಬೇಕೆಂದು ಆಗ್ರಹಿಸಿದರು. ಜಿಲ್ಲಾ ಮದ್ಯ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಸನ್ನದುದಾರ ರಾದ ಕೆ.ಎನ್.ಜಯಣ್ಣ, ಗಿರೀಶ್, ಅಪ್ಪಿರೆಡ್ಡಿ, ಜಗದೀಶ್, ಬಿ.ರಮೇಶ್ ಕುಮಾರ್, ಅಭಿಲಾಷ್, ಚಂದ್ರಪ್ಪ, ಪ್ರಾಶಾಂತ್, ಹೇಮಂತ್ ಹಾಜರಿದ್ದರು.