Advertisement

ಮದ್ಯ ನೀತಿ ಹಗರಣ: ಇಬ್ಬರಿಗೆ ಜಾಮೀನು

09:53 PM May 08, 2023 | Team Udayavani |

ನವದೆಹಲಿ: ದೆಹಲಿಯಲ್ಲಿ ಭಾರೀ ಸದ್ದು ಮಾಡಿರುವ ಮದ್ಯ ನೀತಿ ಹಗರಣದಲ್ಲಿ ಇಬ್ಬರು ಆರೋಪಿಗಳಿಗೆ ದೆಹಲಿ ಸ್ಥಳೀಯ ನ್ಯಾಯಾಲಯವೊಂದು ಜಾಮೀನು ನೀಡಿದೆ. ರಾಜೇಶ್‌ ಜೋಶಿ, ಗೌತಮ್‌ ಮಲ್ಹೋತ್ರರಿಂದ ತಲಾ 2 ಲಕ್ಷ ರೂ. ವೈಯಕ್ತಿಕ ಬಾಂಡ್‌ಗಳನ್ನು ಪಡೆದು ಜಾಮೀನು ನೀಡಲಾಗಿದೆ. ಈ ಇಬ್ಬರ ಮೇಲಿನ ಪ್ರಕರಣಗಳು ಮೇಲ್ನೋಟಕ್ಕೆ ಪ್ರಬಲವಾಗಿಲ್ಲ. ಆರೋಪಗಳನ್ನು ಸಾಬೀತು ಮಾಡಲು ಬೇಕಾದಂತಹ ಸಾಕ್ಷಿಗಳಿಲ್ಲ. ಇಬ್ಬರಿಗೂ ಜಾಮೀನು ನಿರಾಕರಿಸಲು ಬೇಕಾದ ಆಧಾರಗಳಿಲ್ಲ ಎಂದು ವಿಶೇಷ ನ್ಯಾಯಾಧೀಶ ಎಂ.ಕೆ.ನಾಗಪಾಲ್‌ ಹೇಳಿದ್ದಾರೆ. ವಿಶೇಷವೆಂದರೆ ಇದೇ ನ್ಯಾಯಾಧೀಶರು ಈ ಹಿಂದೆ ಇದೇ ಪ್ರಕರಣದಲ್ಲಿ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಷ್‌ ಸಿಸೋಡಿಯಗೆ ಜಾಮೀನು ನಿರಾಕರಿಸಿದ್ದರು.

Advertisement

ಇಬ್ಬರಿಗೆ ಜಾಮೀನು ನೀಡಿರುವ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, “ಮದ್ಯ ಹಗರಣ ಸಂಪೂರ್ಣವಾಗಿ ಒಂದು ನಕಲಿ ಪ್ರಕರಣ. ಇದನ್ನು ಆರಂಭದಿಂದಲೇ ಹೇಳುತ್ತಿದ್ದೇವೆ. ಈಗ ನ್ಯಾಯಾಲಯಗಳೂ ಅದನ್ನೇ ಹೇಳಲು ಆರಂಭಿಸಿವೆ. ಆಪ್‌ನಂತಹ ಪ್ರಾಮಾಣಿಕ ಪಕ್ಷವನ್ನು ದುರ್ಬಲಗೊಳಿಸಲು ಬಿಜೆಪಿ ಮಾಡುತ್ತಿರುವ ಹತಾಶ ಯತ್ನ ಇದು’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next