Advertisement

ಬಾರ್ಸಿಲೋನಾಗೆ ಮೆಸ್ಸಿ ಭಾವುಕ ವಿದಾಯ

09:19 PM Aug 08, 2021 | Team Udayavani |

ಮ್ಯಾಡ್ರಿಡ್‌: ಫ‌ುಟ್‌ಬಾಲ್‌ ಸೂಪರ್‌ಸ್ಟಾರ್‌ ಲಯೋನೆಲ್‌ ಮೆಸ್ಸಿ ಮತ್ತು ಬಾರ್ಸಿಲೋನಾ ಕ್ಲಬ್‌ ನಡುವಿನ 21 ವರ್ಷಗಳ ಸುದೀರ್ಘ‌ ನಂಟು ಕೊನೆಗೊಂಡಿದೆ. ಮೆಸ್ಸಿ ಕಣ್ಣೀರು ಸುರಿಸುತ್ತಲೇ ತಮ್ಮ ವಿದಾಯವನ್ನು ಸಾರಿದರು.

Advertisement

ಸಮಕಾಲೀನ ಜಗತ್ತಿನ ಶ್ರೇಷ್ಠರಲ್ಲೊಬ್ಬರಾಗಿರುವ ಮೆಸ್ಸಿ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆ ಇಲ್ಲ ಎಂದು ಗುರುವಾರವೇ ಬಾರ್ಸಿಲೋನಾ ಕ್ಲಬ್‌ ಪ್ರಕಟಿಸಿತ್ತು. ಭಾರೀ ನಷ್ಟದಲ್ಲಿರುವ ಈ ಕ್ಲಬ್‌ ಮೆಸ್ಸಿಯಂಥ ತಾರಾ ಆಟಗಾರನಿಗೆ ದೊಡ್ಡ ಮೊತ್ತ ನೀಡುವ ಸ್ಥಿತಿಯಲ್ಲಿಲ್ಲ ಎಂದೂ ಸೂಕ್ಷ್ಮವಾಗಿ ತಿಳಿಸಿತ್ತು. ಆದರೆ 2019-20ರ ಋತು ಮುಗಿದೊಡನೆ ಮೆಸ್ಸಿ ಅವರನ್ನು ಬಿಟ್ಟುಹೋಗುವಂತೆ ಸ್ವತಃ ಬಾರ್ಸಿಲೋನಾ ಕ್ಲಬ್‌ ಸೂಚಿಸಿತ್ತು ಎಂಬ ವರದಿಯನ್ನು ನಿರಾಕರಿಸಿತು.

“ನನ್ನ ಬದುಕನ್ನೇ ಇಲ್ಲಿ ಕಳೆದಿದ್ದೇನೆ. ಇದನ್ನು ಬಿಟ್ಟು ಹೋಗುವುದು ನನ್ನ ಬದುಕಿನಲ್ಲೇ ಅತ್ಯಂತ ಕಠಿನ ನಿರ್ಧಾರ. ಇದಕ್ಕೆ ನಾನಿನ್ನೂ ಮಾನಸಿಕವಾಗಿ ಸಜ್ಜುಗೊಂಡಿಲ್ಲ’ ಎಂದು ಮೆಸ್ಸಿ ಕಣ್ಣೀರು ಸುರಿಸುತ್ತಲೇ ಹೇಳಿದರು. ಬಾರ್ಸಿಲೋನಾ ಪರ ಸರ್ವಾಧಿಕ 682 ಗೋಲು ಬಾರಿಸಿದ ದಾಖಲೆಯನ್ನು ಮೆಸ್ಸಿ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next