Advertisement

ಶಿರಸಿ: ಎರಡು ದಶಕಗಳಿಂದ ಬೇಡಿಕೆಯಾಗಿಗೆ ಉಳಿದ ಸಂಪರ್ಕ ಸೇತುವೆಯ ಕೂಗು

03:49 PM Nov 02, 2022 | Team Udayavani |

ಶಿರಸಿ: ಧಾರ್ಮಿಕ ಪ್ರಾಮುಖ್ಯತೆ ಹೊಂದಿರುವ ಬಂಡಲ ಗ್ರಾಮ ಪಂಚಾಯತ್ ವ್ಯಾಪ್ತಿಯ, ಗಿಲಗುಂಡಿ ಗ್ರಾಮಕ್ಕೆ ಕಳೆದ ಎರಡು ದಶಕದಿಂದ ಬೇಡಿಕೆಯಾದ ಸಂಪರ್ಕ ಸೇತುವೆ ಮಂಜೂರು ಮಾಡುವಂತೆ ಗ್ರಾಮಸ್ಥರಿಂದ ಕೇಳಿ ಬಂದಿದೆ.

Advertisement

ಮಂಜಗುಣಿಯ ವೆಂಕಟರಮಣ ದೇವರ ಉಗಮ ಸ್ಥಾನವಾಗಿರುವ ಗಿಲಗುಂಡಿ ಗ್ರಾಮವು ಧಾರ್ಮಿಕ ಕೇಂದ್ರ ಬಿಂದುವಾಗಿದ್ದು, ವರ್ಷಕ್ಕೆ ಒಮ್ಮೆ ಮಂಜಗುಣಿಯಿಂದ ವೆಂಕಟರಮಣ ದೇವರ ಪಲ್ಲಕ್ಕಿಯನ್ನ ನದಿಗೆ ಸೇತುವೆಯಿಲ್ಲದೆ ಗ್ರಾಮಸ್ಥರಿಂದ ನಿರ್ಮಿತಗೊಂಡ ತಾತ್ಕಾಲಿಕ ವ್ಯವಸ್ಥೆಯಿಂದಲೇ ದೇವರನ್ನ ಕರೆ ತರುವ ಪ್ರಕ್ರೀಯೆ ಜರಗುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ನದಿಗೆ ಪೂರ್ಣಪ್ರಮಾಣದ ಸೇತುವೆ ಮಂಜೂರು ಮಾಡುವಂತೆ ಗ್ರಾಮಸ್ಥರು ಸರಕಾರವನ್ನು ಆಗ್ರಹಿಸಿದ್ದಾರೆ.

ರೇವಣಕಟ್ಟಾ ಹೊಳೆಪುಟ್ಟದಮನೆ, ಕೊಡೆಗದ್ದೆ, ಸೋಮನಳ್ಳಿ, ತಪ್ಪಲತೋಟ, ಬಾಳೆಗದ್ದೆ, ಕಬ್ಬಿನಮನೆ, ಜಡ್ಲಮನೆ, ಭಾಗಿಮನೆ, ಗಿಲಗುಂಡಿ, ಐಗನಮನೆ, ಮಾಗೇತೋಟ ಮುಂತಾದ ಹಳ್ಳಿಗಳಿಂದ ಶಿರಸಿ-ಕುಮಟ ರಸ್ತೆಗೆ ಸಂಪರ್ಕಕ್ಕೆ ಸೇತುವೆ ಸಹಾಯವಾಗುವುದು. ಸುಮಾರು ೪೦೦ ಮನೆಗಳಿರುವ ಕುಟುಂಬಗಳಿಗೆ ಸೇತುವೆಯಾದರೆ ಕುಮಟಕ್ಕೆ ಹೋಗಲು 12 ಕೀ.ಮೀ ಅಂತರ ಕಡಿಮೆ ಆಗುವುದೆಂದು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಾವಿತ್ರಿ ನಾರಾಯಣ ಗೌಡ ಐಗನಮನೆ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಎರಡು ದಶಕದಿಂದ ಸೇತುವೆ ಸಂಪರ್ಕಕ್ಕೆ ಸರಕಾರದ ಗಮನ ಸೆಳೆದಾಗಲೂ ಸೇತುವೆ ಮಂಜೂರಿಯಾಗದೆ ಇರುವುದು ಖೇದಕರ. ಗ್ರಾಮಸ್ಥರ ಅಭಿವೃದ್ಧಿ ಮತ್ತು ಸಂಪರ್ಕದ ದಿಸೆಯಲ್ಲಿ ಗಿಲಗುಂಡಿ ಸೇತುವೆ ನಿರ್ಮಾಣ ಅವಶ್ಯವೆಂದು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ದೇವರಾಜ ಮರಾಠಿ ಸರಕಾರಕ್ಕೆ ಒತ್ತಾಯಿಸಿದ್ದಾರೆ.

ಜನಾಗ್ರಹದ ಒತ್ತಾಯ, ಜನ ಸಂಪರ್ಕಕ್ಕೆ ಹಾಗೂ ಧಾರ್ಮಿಕ ಪ್ರಾಮುಖ್ಯತೆ ಹೊಂದಿರುವ ಗಿಲಗುಂಡಿ ಭಾಗಕ್ಕೆ ಸಂಪರ್ಕ ಸೇತುವೆ ಮಂಜೂರಿ ಮಾಡುವಲ್ಲಿ ಸರಕಾರ ದಿಟ್ಟಕ್ರಮ ತೆಗೆದುಕೊಳ್ಳಬೇಕೆಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಒತ್ತಾಯಿಸಿದ್ದಾರೆ.

Advertisement

ಇದನ್ನೂ ಓದಿ : ಹರಪನಹಳ್ಳಿ: ಬಟ್ಟೆ ತೊಳೆಯಲು ಗೋಕಟ್ಟೆಗೆ ತೆರಳಿದ್ದ ನಾಲ್ವರು ನೀರಿನಲ್ಲಿ ಮುಳುಗಿ ಸಾವು

Advertisement

Udayavani is now on Telegram. Click here to join our channel and stay updated with the latest news.

Next