Advertisement
ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಬಸವ ಕೇಂದ್ರ ಹುಬ್ಬಳ್ಳಿ ಆಶ್ರಯದಲ್ಲಿ ನಡೆದ ವಚನ ಶ್ರಾವಣ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
Related Articles
Advertisement
ಜಾಗತಿಕ ಲಿಂಗಾಯತ ಮಹಾಸಭಾದಿಂದ ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ನಡೆಸಿ ಅದಕ್ಕೆ ಬೇಕಾದ ಎಲ್ಲ ರೀತಿಯ ನೆರವು ನೀಡಲಾಗುವುದು. ಧಾರವಾಡ ಜಿಲ್ಲೆಯಲ್ಲಿ ಮುರಘಾಮಠ ಹಾಗೂ ಮೂರುಸಾವಿರಮಠದ ಶ್ರೀಗಳು ಬಸವತತ್ವ ವಿಚಾರದಲ್ಲಿ ಗಟ್ಟಿಯಾಗಿ ನಿಲ್ಲಲಿದ್ದು, ಅವರಿಗೆ ನಾವೆಲ್ಲರೂ ಬೆನ್ನೆಲುಬಾಗಿ ನಿಲ್ಲಬೇಕು ಎಂದರು.
ಮೂರುಸಾವಿರಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಪುರಾಣ-ಪ್ರವಚನ ಎಂದರೆ ತಾತ್ಸಾರ ಮನೋಭಾವ ಬೆಳೆಯುತ್ತಿದೆ. ಲಿಂಗ ಕಟ್ಟಿಕೊಳ್ಳಿ ಎಂದರೆ ಒಲ್ಲೆ ಎನ್ನುತ್ತಾರೆ. ಇಂದಿನ ಯುವ ಪೀಳಿಗೆಗೆ ಲಿಂಗದ ಮಹತ್ವ ತಿಳಿಸಿ ಜಾಗೃತಿ ಮೂಡಿಸಬೇಕಿದೆ. ಬಸವಾದಿ ಶರಣರ ಸಾಹಿತ್ಯ, ವಚನಗಳ ಕುರಿತು ಚಿಂತನೆ ನಡೆಯಬೇಕಿದೆ. ಕೇವಲ ಊಹೆ, ಕಲ್ಪನೆಗಳಿಂದ ಏನೂ ಸಾಧ್ಯವಿಲ್ಲ. ವಾಸ್ತವಿಕತೆ ಅವಶ್ಯವಿದ್ದು, ಅದರಿಂದಲೇ ಎಲ್ಲವನ್ನು ತಿಳಿಯಲು ಸಾಧ್ಯ ಎಂದರು.
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ವಿ.ಗೊಂಗಡಶೆಟ್ಟಿ ಪ್ರಾಸ್ತಾವಿಕ ಮಾತನಾಡಿ, ಎಲ್ಲ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಹಾಕಬೇಕು, ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಸವೇಶ್ವರರ ಹೆಸರಿಡಬೇಕು. ಈ ಹಿಂದೆ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿದಂತೆ ಉಣಕಲ್ಲ ಕೆರೆಗೆ ಬಸವಸಾಗರ ಎಂದು ನಾಮಕರಣ ಮಾಡಬೇಕೆಂದು ಒತ್ತಾಯಿಸಿದರು.
ಬೆಳಗಾವಿ ಕೆಎಲ್ಇ ಜೆಎನ್ ಮೆಡಿಕಲ್ ಕಾಲೇಜಿನ ಡಾ| ಅವಿನಾಶ ಕವಿ ವಚನದ ಅನುಭಾವ ನೀಡಿದರು. ಲೋಕೇಶ ಕೊರವಿ, ಡಾ|ಬಿ.ವಿ.ಶಿರೂರ, ಪ್ರೊ|ಎಸ್. ವಿ.ಪಟ್ಟಣಶೆಟ್ಟಿ ಇನ್ನಿತರರಿದ್ದರು.