ಬಸವಕಲ್ಯಾಣ: ಲಿಂಗಾಯತ ಧರ್ಮ ಸೃಷ್ಟಿಯ ಬೀಜರೂಪದ ಧರ್ಮವಾಗಿದೆ. ಸೃಷ್ಟಿಯ ಎಲ್ಲ ಮೌಲ್ಯಗಳು, ಗುಣಗಳು ಹೊತ್ತುಕೊಂಡು ಬಂದ ಧರ್ಮವಾಗಿದೆ. ಇದರಲ್ಲಿ ಯಾವುದೇ ಅನೈಸರ್ಗಿಕವಾದುದಿಲ್ಲ. ಮನುಷ್ಯ ಮನೋತ್ಪತ್ತಿಯ ಯಾವುದೇ ಕಲ್ಮಶ ಇದರಲಿಲ್ಲ. ಇದು ಅತ್ಯಂತ ವೈಜ್ಞಾನಿಕವಾಗಿದೆ ಎಂದು ಡಾ| ಗಂಗಾಂಬಿಕಾ ಅಕ್ಕ ನುಡಿದರು.
ನಗರದ ಹರಳಯ್ಯನವರ ಗವಿಯಲ್ಲಿ ಅಂತಾರಾಷ್ಟ್ರೀಯ ಲಿಂಗಾಯತ ಧರ್ಮ ಕ್ಷೇದ್ರದ ವತಿಯಿಂದ ನಡೆದ ಲಿಂಗಾಯತ ಧರ್ಮೋದಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ವಿಜ್ಞಾನ ಏನು ಹೇಳುತ್ತದೆ ಅಂದರೆ ವಿಶ್ವ ಅನ್ ಡಿಜೈನ್‌ಆಗಿದೆ. ಅಂದರೆ ಯಾರು ವಿನ್ಯಾಸ ಮಾಡಲಾರದೆ ಹುಟ್ಟಿದೆ. ಡಿಜೈನ್ ಮಾಡುವದು ಅಂದರೆ ಪರಮಾತ್ಮ ಮೇಲೆ ಎಲ್ಲೊ ಕುಳಿತಿದ್ದಾನೆ. ಅವನು ಇದನ್ನು ನಿರ್ಮಾಣ ಮಾಡುತ್ತಿದ್ದಾನೆ ಎಂದು ಕೆಲವು ಧರ್ಮಗಳು ಹೇಳುತ್ತಿವೆ. ಆದರೆ, ವಿಜ್ಞಾನ ಏನು ಹೇಳುತ್ತದೆ ಅಂದರೆ ಸೃಷ್ಟಿ ಸ್ವಯಂ ನಿರ್ಮಿತ ಸ್ವಯಂ ಸಿದ್ಧ ಅದಕ್ಕೆ ಯಾರು ಡಿಜೈನ್ ಮಾಡಿಲ್ಲ. ಹಾಗೆ ಮನುಷ್ಯನು ಸೃಷ್ಟಿಯ ಅಂಗವೇ ಇದ್ದಾನೆ. ಅವನು ಸೃಷ್ಟಿಯ ಹಾಗೆ ಸ್ವಯಂ ನಿರ್ಮಿತ ಇದ್ದಾನೆ. ಅವನಿಗೆ ಯಾರು ನಿರ್ಮಾಣ ಮಾಡಿಲ್ಲ. ಅದಕ್ಕೆ ಬಸವಣ್ಣನವರು ಕೊಟ್ಟ ಧರ್ಮ ಮಾನವ ಆಧಾರಿತ ಧರ್ಮವಾಗಿದೆ. ಶೂನ್ಯ ಸ್ವರೂಪಿ ಪರಮಾತ್ಮ ಎಲ್ಲರೊಳಗೆ ಇದ್ದಾನೆ. ಅದಕ್ಕೆ ನಿನ್ನೊಳಗಿನ ಶಕ್ತಿ ನಿನ್ನ ಪರಮಾತ್ಮ. ಅದನ್ನೇ ನೀನು ಆರಾಧಿಸಬೇಕು ಎಂದರು.
ಶ್ರೀ ಸತ್ಯಕ್ಕತಾಯಿ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ಬಸವತತ್ವ ಪ್ರಸಾರ ಕೇಂದ್ರದ ಅಧ್ಯಕ್ಷ ಶಂಕ್ರಣ್ಣ ಕೊಳಕೂರ, ಜಗನ್ನಾಥ ಕುಶನೂರೆ, ಗಣಪತಿ ಕಾಸ್ತೆ, ಇಂದುಮತಿ ಅಬ್ದಗಿರೆ ಸೇರಿದಂತೆ ಮತ್ತಿತರರು ಇದ್ದರು.