Advertisement
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಒಂದು ತಿಂಗಳು ರಾಜ್ಯಾದ್ಯಂತ “ಮತ್ತೆ ಕಲ್ಯಾಣ’ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇವೆ. ಮುಂದಿನ ತಿಂಗಳು ಪೇಜಾವರ ಶ್ರೀಗಳಿಗೆ ಸಾಣೆಹಳ್ಳಿಗೆ ಬರುವಂತೆ ತಿಳಿಸುವುದಾಗಿ ಹೇಳಿದರು.
ಲಿಂಗಾಯತ ಧರ್ಮ ಮತ್ತು ವೀರಶೈವ ಧರ್ಮ ಒಂದೇ ಅಲ್ಲ. ಒಂದು ಕಾಲಕ್ಕೆ ಅವು ಒಂದೇ ಎಂಬ ಭಾವನೆ ಇತ್ತು. ಶಿವನನ್ನು ಪೂಜಿಸು ವವರೆಲ್ಲ ಲಿಂಗಾಯತರು ಎಂಬ ಪೇಜಾವರ ಶ್ರೀಗಳ ಮಾತು ಒಪ್ಪಲು ಸಾಧ್ಯವಿಲ್ಲ. ಕೆಲವರು ಸ್ಥಾವರ ಶಿವನನ್ನು ಪೂಜಿಸುತ್ತಾರೆ. ಆದರೆ ಲಿಂಗಾಯತರು ಜಂಗಮ ಶಿವನನ್ನು ಇಷ್ಟಲಿಂಗದ ರೂಪದಲ್ಲಿ ತಾವೇ ಮುಟ್ಟಿ ಪೂಜಿಸುತ್ತಾರೆ ಎಂದರು. ನೀಲಾ ವಂಚನೆ
ಉಡುಪಿಯ “ಮತ್ತೆ ಕಲ್ಯಾಣ’ ಕಾರ್ಯಕ್ರಮದಲ್ಲಿ ಚಿಂತಕಿ ಕೆ. ನೀಲಾ ಭಾಗವಹಿಸದೆ ಇರುವುದಕ್ಕೆ ಡಾ| ಮೋಹನ್ ಆಳ್ವ ಮತ್ತು ಶಾಸಕ ರಘುಪತಿ ಭಟ್ ಭಾಗವಹಿಸುತ್ತಿರುವುದು ಕಾರಣ ಅಲ್ಲ. ಬೇರೆ ಕಾರ್ಯಕ್ರಮ ಇದ್ದು, ಬರುವುದಕ್ಕಾಗುವುದಿಲ್ಲ ಎಂದು ಮೊದಲೇ ಹೇಳಿದ್ದರು. ಈಗ ಮೋಹನ್ ಆಳ್ವ, ರಘುಪತಿ ಭಟ್ ಅವರನ್ನು ಆಹ್ವಾನಿಸಿರುವ ಕಾರಣ ಹೇಳುತ್ತಿದ್ದಾರೆ . ಈ ರೀತಿ ವಂಚನೆ ಸರಿಯಲ್ಲ. ಬಸವ ತಣ್ತೀವನ್ನು ಒಪ್ಪುವ, ಜನಪ್ರಿಯರಾದವರನ್ನು ಆಹ್ವಾನಿಸುವಂತೆ ನಾವು ತಿಳಿಸಿದ್ದೆವು; ಭಟ್, ಡಾ| ಆಳ್ವ ಅವರನ್ನು ನಾವು ಆಹ್ವಾನಿಸಿದ್ದಲ್ಲ ಎಂದು ಸ್ವಾಮೀಜಿ ಹೇಳಿದರು.
Related Articles
ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ, “ಯಡಿಯೂರಪ್ಪ ಲಿಂಗಾಯತ ಅಂತ ಯಾರು ಹೇಳಿದ್ದು?’ ಎಂದು ಮರುಪ್ರಶ್ನಿಸಿದ ಸ್ವಾಮೀಜಿ, ಯಾರು ಲಿಂಗಾಯತ ಧರ್ಮವನ್ನು ಪಾಲಿಸುತ್ತಾನೋ ಅವನೇ ನಿಜವಾದ ಲಿಂಗಾಯತ. ಲಿಂಗಾಯತ ಎಂಬುದು ಒಂದು ತತ್ವ ಸಿದ್ಧಾಂತವೇ ವಿನಾ ಒಂದುಜಾತಿಗೆ ಸೀಮಿತ ಅಲ್ಲ. ಹಾಗಾಗಿ ಯಡಿಯೂರಪ್ಪ ಲಿಂಗಾಯತರಲ್ಲ ಎಂದರು.
Advertisement
“ಬಿಎಸ್‌ವೈ ದಾರಿಯಲ್ಲಿ ಸಿದ್ದು, ಎಚ್‌ಡಿಕೆ’ರಾಜ್ಯ ಸರಕಾರ ಮಠಗಳಿಗೆ ನೀಡುವ ಹಣವನ್ನು ನಾವು ಸ್ವೀಕಾರ ಮಾಡುವುದಿಲ್ಲ. ಯಾವುದಾದರೂ ಯೋಜನೆ ಹಾಕಿಕೊಂಡು ಅದಕ್ಕೆ ಪೂರಕವಾಗಿ ಅನುದಾನ ನೀಡಬೇಕು. ಅದು ಬಿಟ್ಟು ನೇರವಾಗಿ ಮಠಕ್ಕೆ ಹಣ ನೀಡಿದರೆ ನಾವು ತೆಗೆದುಕೊಳ್ಳುವುದಿಲ್ಲ. ಮೊದಲು ಮಠಗಳಿಗೆ ಹಣ ನೀಡಿದ ಯಡಿಯೂರಪ್ಪರನ್ನು ಟೀಕೆ ಮಾಡಿದ ಸಿದ್ದರಾಮಯ್ಯ, ಕುಮಾರಸ್ವಾಮಿ ಕೂಡ ಮುಂದೆ ಅದೇ ಕೆಲಸ ಮುಂದುವರಿಸಿದರು ಎಂದು ಸ್ವಾಮೀಜಿ ಟೀಕಿಸಿದರು.