Advertisement
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ತ್ತೈಮಾಸಿಕ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭೂಮಾಪನ ಇಲಾಖೆಯಲ್ಲಿ ಮಿತಿಮೀರಿದ ಭ್ರಷ್ಟಾಚಾರದ ಬಗ್ಗೆ ಅಧಿಕಾರಿ, ಸಿಬ್ಬಂದಿ ವಿರುದ್ಧ ಹರಿಹಾಯ್ದರು. ಭೂಮಾಪನ ಇಲಾಖೆಯಲ್ಲಿ ಭಷ್ಟಾಚಾರ ಮಿತಿ ಮೀರಿದೆ. ಹಣ ಕೊಟ್ಟರೆ ಮಾತ್ರ ಕೆಲಸ ಎಂಬಂತಹ ಸ್ಥಿತಿ ಇದೆ. ರೈತರು ಜಮೀನು ಸರ್ವೇಗಾಗಿ ವರ್ಷಾನುಗಟ್ಟಲೇ ಕಚೇರಿ ಅಲೆದಾಡುವಂತಾಗಿದೆ. ಅದೇ ಕೆಲಸಕ್ಕೆ 30 ಸಾವಿರ ಲಂಚ ಕೊಟ್ಟರೆ ಕೆಲಸ ಬೇಗವಾಗುತ್ತೆ. ಈ ಬಗ್ಗೆ ಸಾಕಷ್ಟು ರೈತರಿಂದ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಐದಾರು ತಿಂಗಳ ಹಿಂದೆ ಸಭೆ ನಡೆಸಿದಾಗ ಲಂಚ ಪಡೆದರೆ ಸೂಕ್ತ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದೆ. ಆದರೂ ಇಲಾಖೆ ಸಿಬ್ಬಂದಿ, ಅಧಿಕಾರಿಗಳು ಗುಣಗಳನ್ನು ಬದಲಿಸಿಕೊಂಡಿಲ್ಲ. ದೇವರು ನಿಮಗೆ ನಾಚಿಕೆ ಕೊಟ್ಟಿಲ್ವಾ. ಇಷ್ಟೊತ್ಗೆ ಜನ ನಿಮಗೆ ಹೊಡೆಯಬೇಕಿತ್ತು. ಆದರೆ ಇಲ್ಲಿನ ಜನ ಮುಗ್ದರು, ನಿಮ್ಗೆ ಲಾಸ್ಟ್ ವಾರ್ನಿಂಗ್ ಕೊಡ್ತೀನಿ ಲಂಚ ಪಡೆಯದೇ ಎಲ್ಲ ಕೆಲಸಗಳನ್ನು ಸರ್ಕಾರಿ ನಿಯಮಗಳ ಪ್ರಕಾರ ಮಾಡಬೇಕು. ಇಲ್ಲವಾದಲ್ಲಿ ನಾನೇ ಖುದ್ದಾಗಿ ರೈತರನ್ನು ಕರೆದುಕೊಂಡು ಬಂದು ನಿಮ್ಮನ್ನು ಹೊಡೆಸ್ತಿನಿ. ಎಚ್ಚರದಿಂದ ಕೆಲಸ ಮಾಡೋದು ಕಲಿಯಿರಿ ಎಂದು ಭೂಮಾಪನ ಇಲಾಖೆ ಅಧಿಕಾರಿ ಭಲವಂತ ಅವರನ್ನು ಶಾಸಕರು ತರಾಟೆಗೆ ತೆಗೆದುಕೊಂಡರು.
Related Articles
Advertisement
ಕತ್ತಲಲ್ಲಿ ಇರುವವರಿಗೆ ಬೆಳಕು ನೀಡಬೇಕೆಂಬ ಉದ್ದೇಶದಿಂದ ಸರ್ಕಾರ ಅನುದಾನ ನೀಡುತ್ತಿದೆ. ಆದರೆ ನಿಮ್ಮ ನಿರ್ಲಕ್ಷ್ಯದ ಕೆಲಸದಿಂದಾಗಿ ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ಇದಲ್ಲದೇ ಕುಡಿಯುವ ನೀರಿನ ಯೋಜನೆಗಳ ವಿದ್ಯುತ್ ಸಂಪರ್ಕವನ್ನು ಯಾವುದೇ ಕಾರಣಕ್ಕೂ ಕಡಿತಗೊಳಿಸಬಾರದು ಎಂದು ಶಾಸಕರು ಜೆಸ್ಕಾಂ ಅಧಿಕಾರಿಗೆ ಸೂಚನೆ ನೀಡಿದರು.
ಅಂಕನಾಳ-ಉಪನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಯೋಜನೆ ಜಾರಿಯಾಗಿ ನಾಲ್ಕು ವರ್ಷ ಕಳೆದರೂ ಇನ್ನೂ ಮುಗಿದಿಲ್ಲ. ಹೊನ್ನಳ್ಳಿ ಕುಡಿಯುವ ನೀರಿನ ಯೋಜನೆ ನಿರ್ವಹಣೆ ಟೆಂಡರ್ ಪಡೆದ ಗುತ್ತಿಗೆದಾರರು ಇನ್ನೂ ಕೆಲಸ ಆರಂಭಿಸಿಲ್ಲ. ಕೂಡಲೇ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಗ್ರಾಮೀಣ ಕುಡಿಯುವ ನೀರು ಇಲಾಖೆ ಎಇಇ ಮಿಣಜಗಿ ಅವರಿಗೆ ಶಾಸಕರು ಸೂಚಿಸಿದರು.
ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಸನಗೌಡ ಕಂಬಳಿ, ತಾಪಂ ಅಧ್ಯಕ್ಷೆ ಶ್ವೇತಾ ಪಾಟೀಲ, ಜಿಪಂ ಸದಸ್ಯರಾದ ರೇಣುಕಾ ಚಂದ್ರಶೇಖರ, ಶರಣಬಸವ ಆನ್ವರಿ, ಸಂಗಣ್ಣ ದೇಸಾಯಿ, ಅಂಬಮ್ಮ, ತಾಪಂ ಇಒ ಪ್ರಕಾಶ, ತಹಶೀಲ್ದಾರ್ ಚಾಮರಾಜ ಪಾಟೀಲ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.