Advertisement

ಮೂವರಿಗೆ ಕೋವಿಡ್ ಸೋಂಕು ದೃಢ: ಕಟ್ಟೆಚ್ಚರ ವಹಿಸಲು ಸೂಚನೆ

07:00 PM Jun 03, 2020 | Naveen |

ಲಿಂಗಸುಗೂರು: ಪಟ್ಟಣ, ತಾಲೂಕಿನ ಸರ್ಜಾಪುರ ಹಾಗೂ ಮಸ್ಕಿಯ ತಲಾ ಒಬ್ಬರು ಸೇರಿ ಒಟ್ಟು ಸೇರಿ ಮೂವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಸೋಂಕು ಮತ್ತುಷ್ಟು ಹರಡದಂತೆ ಕಟ್ಟೆಚ್ಚರ ವಹಿಸುವಂತೆ ಲಿಂಗಸುಗೂರು ಸಹಾಯಕ ಆಯುಕ್ತ ರಾಜಶೇಖರ ಡಂಬಳ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದರು.

Advertisement

ಪಟ್ಟಣದ ಸಹಾಯಕ ಆಯುಕ್ತರ ಕಚೇರಿಯಲ್ಲಿ ರವಿವಾರ ಅಧಿಕಾರಿಗಳ ತುರ್ತು ಸಭೆ ನಡೆಸಿದ ಅವರು, ಲಿಂಗಸುಗೂರು ಪಟ್ಟಣ, ಸರ್ಜಾಪುರ, ಮಸ್ಕಿ ಪಟ್ಟಣದಲ್ಲಿ ತಲಾ ಒಂದು ಕೋವಿಡ್ ಸೋಂಕು ಪ್ರಕರಣ ಪತ್ತೆಯಾಗಿದೆ. ಹೀಗಾಗಿ ಟ್ರಾವೆಲ್‌ ಹಿಸ್ಟರಿ ಕಲೆ ಹಾಕಲಾಗುತ್ತಿದೆ. ಕೇರಳ ಮೂಲದ ವ್ಯಾಪಾರಿಯೊಬ್ಬರು ಲಿಂಗಸುಗೂರು ಪಟ್ಟಣದಲ್ಲಿ ವ್ಯಾಪಾರ ಮಾಡುತ್ತಿದ್ದಾನೆ. ಆತನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿರುವವರ ಬಗ್ಗೆ ಕಲೆ ಮಾಹಿತಿ ಹಾಕಲಾಗುತ್ತಿದೆ. ಸರ್ಜಾಪುರದ ಸೋಂಕಿತ ವ್ಯಕ್ತಿ ಬೆಂಗಳೂರಿನಿಂದ ಬಂದಿದ್ದ. ಆತ ತನ್ನ ತಾಯಿ ಮತ್ತು ಅಕ್ಕನ ಜತೆ ವಾಸವಾಗಿದ್ದ. ಈ ಹಿನ್ನೆಲೆಯಲ್ಲಿ ಆತನ ಮನೆಯವರು ಹಾಗೂ ಪಕ್ಕದ ಮನೆಯವರನ್ನು ಕ್ವಾರಂಟೈನ್‌ ಮಾಡಲಾಗಿದೆ. ಈತ ಡಯಾಬಿಟಿಸ್‌ ರೋಗಿಯಾಗಿದ್ದರಿಂದ ಕೋವಿಡ್ ವೈರಸ್‌ ಬಹುಬೇಗ ವ್ಯಾಪಿಸುತ್ತದೆ. ಆದ್ದರಿಂದ ಆತನ ಬಗ್ಗೆ ಹೆಚ್ಚಿನ ನಿಗಾವಹಿಸಲಾಗಿದೆ. ಈ ಇಬ್ಬರ ಪ್ರಾಥಮಿಕ ಸಂಪರ್ಕದಲ್ಲಿದ್ದ 34 ಜನರನ್ನು ಅಡವಿಭಾವಿ ಕ್ವಾರಂಟೈನ್‌ ನಲ್ಲಿ ಇರಿಸಲಾಗಿದೆ. ಅವರೆಲ್ಲರ ಗಂಟಲು ದ್ರವವನ್ನು ಲ್ಯಾಬ್‌ಗ ಕಳುಹಿಸಲಾಗಿದೆ. ಮಸ್ಕಿ ಔಷಧಿ ಅಂಗಡಿ ವರ್ತಕನಿಗೂ ಸೋಂಕು ದೃಢವಾಗಿದೆ. ಈ ಮೂವರು ವಾಸಿಸುವ ಪ್ರದೇಶಗಳನ್ನು ಕಂಟೇನ್ಮೆಂಟ್‌ ಝೂನ್‌ ಆಗಿ ಮಾಡಲಾಗಿದೆ. ಇಲ್ಲಿ ವಾಸಿಸುವವರಿಗೆ ಅಗತ್ಯ ವಸ್ತುಗಳಿಗಾಗಿ ಪುರಸಭೆ, ಗ್ರಾಪಂಗಳಿಗೆ ಕರೆ ಮಾಡಿದರೆ ಅಗತ್ಯ ವಸ್ತುಗಳು ಮನೆಗೆ ಸರಬರಾಜು ಮಾಡಲಾಗುತ್ತಿದೆ. ಹೆಚ್ಚಿನ ಕಾಳಜಿ ವಹಿಸುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ಆಶಾ ಕಾರ್ಯಕರ್ತೆಯರ ತಂಡ ರಚಿಸಿ ಕಂಟೇನ್ಮೆಂಟ್‌ ಝೂನ್‌ಗಳಲ್ಲಿ ಪ್ರತಿ ಮನೆ ಸಮೀಕ್ಷೆ ನಡೆಸುವಂತೆ ತಾಲೂಕು ಆರೋಗ್ಯಾಧಿಕಾರಿ ಡಾ| ರುದ್ರಗೌಡ ಅವರಿಗೆ ಸೂಚಿಸಿದರು. ಡಿವೈಎಸ್‌ಪಿ ಎಸ್‌.ಎಸ್‌. ಹುಲ್ಲೂರು, ತಹಶೀಲ್ದಾರ್‌ ಚಾಮರಾಜ ಪಾಟೀಲ, ಪಿಎಸ್‌ಐ ಪ್ರಕಾಶ ಡಂಬಳ, ಪುರಸಭೆ ಮುಖ್ಯಾಧಿಕಾರಿ ಮುತ್ತಪ್ಪ, ಸಿಡಿಪಿಒ ಲಿಂಗನಗೌಡ್ರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next