Advertisement
ಶರಾವತಿ ಕೊಳ್ಳದ ಐದು ಜಲ ವಿದ್ಯುದಾಗಾರಗಳಿಂದ ರಾಜ್ಯದ ಬೇಡಿಕೆಯ ಶೇ.25ರಷ್ಟು ವಿದ್ಯುತ್ ಅನ್ನು ಪೂರೈಸಬಹುದು. ಉಷ್ಣ ವಿದ್ಯುತ್ ಸ್ಥಾವರಗಳು ಕೈಕೊಟ್ಟಾಗಲೆಲ್ಲ ಜಲ ವಿದ್ಯುತ್ ಘಟಕಗಳಿಗೆ ಹೆಚ್ಚಿನ ಲೋಡ್ ನೀಡಲಾಗಿದೆ. ಎಂಥ ಕಠಿನ ಸಂದರ್ಭಗಳಲ್ಲೂ ಬೇಡಿಕೆಗೆ ತಕ್ಕಷ್ಟು ವಿದ್ಯುತ್ ಪೂರೈಸಿದ ಹೆಗ್ಗಳಿಕೆ ಶರಾವತಿ ಕೊಳ್ಳದ ನಾಲ್ಕು ವಿದ್ಯುದಾಗಾರಗಳಿಗಿವೆ. ಆದರೆ ಈ ಬಾರಿ ಮಳೆ ಕೊರತೆಯಿಂದ ಲಿಂಗನಮಕ್ಕಿ ಜಲಾಶಯ ಶೇ.50ರಷ್ಟು ಮಾತ್ರ ಭರ್ತಿಯಾಗಿದೆ. ಮುಂಗಾರು ಅವಧಿ ಮುಕ್ತಾಯಗೊಂಡಿರುವುದರಿಂದ ಜಲಾಶಯಕ್ಕೆ ನೀರು ಬರುವುದೇ ಅನುಮಾನ. ಈಗ ಪ್ರತಿದಿನ 2-3 ಸಾವಿರ ಕ್ಯುಸೆಕ್ ನೀರು ಬರುತ್ತಿದ್ದು, ಕೆಲವೇ ದಿನಗಳಲ್ಲಿ ಒಳಹರಿವು ಬತ್ತಿಹೋಗಲಿದೆ.
Related Articles
Advertisement
ಒತ್ತಡ ಕಡಿಮೆಯಾಗಲಿ
ಲಿಂಗನಮಕ್ಕಿ ಜಲಾಶಯದ ಮಟ್ಟ ಕುಸಿಯುತ್ತಿದ್ದಂತೆ ದ್ವೀಪದ ಜನರಿಗೆ, ಸಿಗಂದೂರು ದೇವಸ್ಥಾನಕ್ಕೆ ಹೋಗುವ ಭಕ್ತರಿಗೆ ಲಾಂಚ್‌ಗಳು ಸೇವೆ ನಿಲ್ಲಿಸಲಿವೆ. ಈ ವರ್ಷ ಜೂನ್ ತಿಂಗಳಲ್ಲಿ ಕೆಲವು ದಿನಗಳ ಕಾಲ ಲಾಂಚ್ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಹಿನ್ನೀರಿನ ಸಾವಿರಾರು ಜನರ ಬದುಕಿಗೆ ತೊಂದರೆಯಾಗಿತ್ತು. ಲಿಂಗನಮಕ್ಕಿ ಮೇಲೆ ಹೆಚ್ಚಿನ ಒತ್ತಡ ಹಾಕದೆ ಲಭ್ಯವಿರುವ ನೀರನ್ನು ಮುಂದಿನ ಮಳೆಗಾಲದ ಅವಧಿಯವರೆಗೂ ಬಳಸಿದರೆ ಸ್ಥಳೀಯರಿಗೆ ಅನುಕೂಲವಾಗಲಿದೆ.
ಸಂಜೆ ವೇಳೆಗೆ ನಮಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಬೇಡಿಕೆ ಬಂದಷ್ಟು ನಾವು ಉತ್ಪಾದನೆ ಮಾಡಬೇಕಾಗುತ್ತದೆ. ಇಲ್ಲ ಎನ್ನಲೂ ಆಗುವುದಿಲ್ಲ. ಈಗಿರುವ ನೀರನ್ನು ಅಂದಾಜು 150 ದಿನ ಬಳಸಬಹುದು. ಹೆಚ್ಚು ಬಳಸಿದರೆ ಬೇಗ ಖಾಲಿ ಆಗಬಹುದು. ಪ್ರತಿ ದಿನ 25 ಮಿಲಿಯನ್ ಯುನಿಟ್ ವಿದ್ಯುತ್ ಪೂರೈಸುವ ಶಕ್ತಿ ಇದೆ.– ಉದಯ್ ನಾಯ್ಕ, ಮುಖ್ಯ ಎಂಜಿನಿಯರ್, ಕೆಪಿಸಿ, ಜೋಗ್‌ಫಾಲ್ಸ್
ಶರತ್ ಭದ್ರಾವತಿ