Advertisement

‘ಲೈನ್‌ ಮ್ಯಾನ್‌’ ಚಿತ್ರಕ್ಕೆ ಮುಹೂರ್ತ

03:53 PM Aug 11, 2022 | Team Udayavani |

ಇತ್ತೀಚೆಗೆ “ಡಿಯರ್‌ ಸತ್ಯ’ ಚಿತ್ರ ನಿರ್ಮಾಣ ಮಾಡಿದ್ದ “ಪರ್ಪಲ್‌ ರಾಕ್‌’ ಸಂಸ್ಥೆ ಇದೀಗ ತನ್ನ ಸಂಸ್ಥೆಯ ಮೂರನೇ ಕಾಣಿಕೆಯಾಗಿ “ಲೈನ್‌ ಮ್ಯಾನ್‌’ ಚಿತ್ರವನ್ನು ಆರಂಭಿಸಿದೆ.

Advertisement

ಹಳ್ಳಿಯಲ್ಲಿ ದಿನವೂ ಬೀದಿ ದೀಪವನ್ನು ಹಾಕುವ ಹಾಗೂ ವಿದ್ಯುತ್‌ ತೊಂದರೆಗಳನ್ನು ಸರಿಪಡಿಸುವ ಊರಿನ ಓರ್ವ ಲೈನ್‌ಮ್ಯಾನ್‌ ಸುತ್ತ ಸಾಗುವ ಕಥೆಯನ್ನು ಹೊಂದಿರುವ ಚಿತ್ರ “ಲೈನ್‌ ಮ್ಯಾನ್‌’ ಆಗಿದೆ.

ಚಾಮರಾಜನಗರದ ಚಂದಕವಾಡಿಯಲ್ಲಿರುವ ಶ್ರೀಲಕ್ಷ್ಮಿ ದೇವಿ ದೇವಸ್ಥಾನದಲ್ಲಿ ಇತ್ತೀಚೆಗೆ “ಲೈನ್‌ಮ್ಯಾನ್‌’ ಚಿತ್ರದ ಮುಹೂರ್ತ ಸಮಾರಂಭ ನೇರವೇರಿದ್ದು, ಚಾಮರಾಜನಗರ ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಶಿವಕುಮಾರ್‌ ಆರಂಭ ಫ‌ಲಕ ತೋರುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು.

ಯತೀಶ್‌ ವೆಂಕಟೇಶ್‌, ಗಣೇಶ್‌ ಪಾಪಣ್ಣ, ಶ್ರೀನಿವಾಸ್‌ ಬಿಂಡಿಗನವಿಲೆ ಹಾಗೂ ಅಜಯ್‌ ಅಪರೂಪ್‌ ನಿರ್ಮಿಸುತ್ತಿದ್ದಾರೆ. ಈ ಹಿಂದೆ “ರನ್‌ ಆಂಟೊನಿ’ ಹಾಗೂ “ಟಕ್ಕರ್‌’ ಚಿತ್ರಗಳನ್ನು ನಿರ್ದೇಶಿಸಿದ್ದ, ರಘು ಶಾಸ್ತ್ರಿ ಲೈನ್‌ ಮ್ಯಾನ್‌ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಆರ್‌.ಜಿ.ವಿ ನಿರ್ದೇಶನದ ಕೊಂಡ ಚಿತ್ರ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿರುವ ತ್ರಿಗುಣ್‌ ಈ ಚಿತ್ರದ ನಾಯಕ ನಾಗಿ ಅಭಿನಯಿಸುತ್ತಿದ್ದಾರೆ. ಅವರಿಗೆ ಕನ್ನಡದಲ್ಲಿ ಇದು ಮೊದಲ ಚಿತ್ರವಾಗಿದೆ. ಚಿತ್ರದಲ್ಲಿ ತ್ರಿಗುಣ್‌ ಲೈನ್‌ ಮ್ಯಾನ್‌ ಪಾತ್ರದಲ್ಲಿ ಕಾಣಿಸಿ ಕೊಳ್ಳುತ್ತಿದ್ದಾರೆ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next