Advertisement

ಮೊದಲ ಮಳೆಯಂತೆ …

08:11 PM Sep 09, 2019 | mahesh |

“ಹೊರಗೆ ವಿಪರೀತ ಮಳೆ, ಚಿಟಪಟ ಹನಿಯಲ್ಲೂ ಅದೇನು ಲಯ ? ಮೆಲ್ಲಗೆ ಚಳಿ ಅವರಿಸಿಕೊಳ್ಳುತ್ತಿರುವಂತೆ ನಿನ್ನ ನೆನಪು ದಿಢೀರನೆ ! ಯಾಕೋ ಆ ಕ್ಷಣ ನೋಡಬೇಕನ್ನಿಸಿತು, ನಿದ್ದೆ ಸುಳಿಯಲಿಲ್ಲ ನೋಡು, ಅದಕ್ಕೇ ನಿನ್ನ ನೆಚ್ಚಿನ ರೇಡಿಯೋ ನಿರೂಪಕಿಗೆ ಫೋನ್‌ ಹಾಕಿ -“ನನ್ನ ನಲ್ಲನಿಗೆ ಕೇಳಿಸಿದರೆ ಸಾಕು, ಅವನು ನಿಮ್ಮ ಕಾರ್ಯಕ್ರಮವನ್ನು ತಪ್ಪದೆ ಕೇಳ್ತಾನೆ’ ಅಂತ ನನ್ನ ಅಳಲನ್ನು ತೋಡಿಕೊಂಡೆ. ಕೆಲಸದ ಮೇಲೆ ನೀನು ನೂರಾರು ಮೈಲಿ ದೂರ… ಆದರೇನು? ಮನಸ್ಸಿಗೆ ತೀರಾ ಹತ್ತಿರ.

Advertisement

ನೀನೇ ಮೊದಲು ನೀನೇ ಕೊನೆ… ಹೌದು ಕಣೋ, ನನ್ನ ಹೃದಯದಲ್ಲಿ ಭದ್ರವಾಗಿ ಕುಳಿತುಬಿಟ್ಟಿದ್ದೀಯ, ಬೇರಾರಿಗೂ ಅವಕಾಶ ನೀಡದೆ… ಇಷ್ಟು ದಿನಗಳೇ ಕಾದಿದ್ದಾಯಿತು; ಇನ್ನೇನು ನಾಲ್ಕು ತಿಂಗಳಲ್ಲಿ ನಿನ್ನ ಪ್ರೊಬೇಷನ್‌ ಪಿರಿಯಡ್‌ ಮುಗಿಯುತ್ತೆ. ಆಮೇಲೆ ಇಲ್ಲಿಗೆ ಬರ್ತೀಯ ಅನ್ನೋದು ಗೊತ್ತು, ಆದರೂ ಈ ಮನವೆಂಬ ಮರ್ಕಟ ತನ್ನ ತುಂಟಾಟ ಆಡದೆ ಸುಮ್ಮನಿರೋಲ್ಲ ನೋಡು.

ಮೊದಲ ಮಳೆಯಂತೆ, ಎದೆಗೆ ಇಳಿದೆ ಮೆಲ್ಲಗೆ…
ಅರೆ, ರೇಡಿಯೋಲಿ ಈಗಷ್ಟೇ ನನ್ನ ವಾಯ್ಸ… ಮೆಸೇಜ್‌ ಬಂತು. ನೀನು ಖಂಡಿತ ಕೇಳಿರ್ತೀಯ ಅನ್ನೋ ನಂಬಿಕೆ, ನಿನ್ನನ್ನು ಯಾವಾಗ ನೋಡ್ತಿನೋ ಅನ್ನಿಸ್ತಿದೆ…’ ಡೈರಿಯಲ್ಲಿ ಮನದ ಮಾತುಗಳನ್ನು ದಾಖಲಿಸಿ ಅರ್ಧ ಗಂಟೆಯೂ ಕಳೆದಿಲ್ಲ. ರೇಡಿಯೋದಲ್ಲಿ ಅವಳನ್ನೇ ಉಲ್ಲೇಖೀಸಿದ್ದ ಅವನ ವಾಯ್ಸ… ಮೆಸೇಜ್‌ ಬಿತ್ತರವಾಯಿತು. “ನಿನಗೋಸ್ಕರ ಫ್ಲೆಟ್‌ ಹಿಡಿದು ಬರ್ತಿದ್ದೀನಿ, ತಡರಾತ್ರಿ ಆಗಬಹುದು, ಐ ಮಿಸ್‌ ಯು ಟೂ ‘

ಅವಳ ನಿದ್ದೆ ಹಾರಿತ್ತು, ಅವನ ನಿರೀಕ್ಷೆಯಲ್ಲಿ…

-ರಾಜಿ, ಬೆಂಗಳೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next