Advertisement
ಅಪರೂಪಕ್ಕೆ ಅಪ್ಪ-ಅಮ್ಮ ರ ಜೊತೆ ಕಾಲೇಜು ಓದುವ ಮಕ್ಕಳ ಪ್ರವಾಸ ಮಾಡಿದರೆ ಹೇಗಿರುತ್ತೆ?ಅಪ್ಪ-ಅಮ್ಮ, ಮಕ್ಕಳನ್ನು ಒಟ್ಟಾಗಿ ಒಂದೇ ಪ್ರೇಂನಲ್ಲಿ ನೋಡಲೇನೋ ಚಂದ.ಆದರೆ, ಈಗಿನ ಮಕ್ಕಳಿಗೆ ಅಲ್ಲಿಯೂ ಮಾತುಕತೆಗೆ ಪುರುಸೊತ್ತೇ ಇರೋಲ್ಲ. ತಮ್ಮದೇ ಪ್ರಪಂಚದಲ್ಲಿ ಮಗ್ನರಾಗಿರುತ್ತಾರೆ. ಅದೇನು ಘನಾಂಧಾರಿ ಕೆಲಸವೇನಲ್ಲ. ಐಪ್ಯಾಡ್-ಮೊಬೈಲ್‌ನಲ್ಲಿ ತಲೆ ಬಗ್ಗಿಸಿ ನೋಡುವುದು, ಟೈಪ್ ಮಾಡುವುದಷ್ಟೇ. ಹಾಂ! ಆಗಾಗ್ಗೆ ಫೇಸ್‌ಬುಕ್- ಟ್ವಿಟ್ಟರ್‌ಗೆ ಹಾಕಲು ನಾನಾ ಭಂಗಿಯ ಸೆಲ್ಫಿಗಳನ್ನು ತೆಗೆಯುವುದು. ಒಮ್ಮೆ ವಾಟ್ಯಾಪ್, ಇನ್ನೊಮ್ಮೆ ಮೆಸೇಜ್, ಮತ್ತೂಮ್ಮೆ ಮೆಸೆಂಜರ್ ಹೀಗೆ ಸದಾಕಾಲ ಚಟುವಟಿಕೆ. ನೆಟ್‌ಇಲ್ಲ ಎಂದರೆ ಜೀವನವೇ ನೆಟ್ಟಗಿಲ್ಲ ಎಂಬ ಚಡಪಡಿಕೆ. ಇದು ಇಂದಿನ ಯುವಜನತೆಯ ಮನೋಭಾವಕ್ಕೆ ಹಿಡಿದ ಕೈಗನ್ನಡಿ!
Related Articles
ಸಾಮಾಜಿಕ ಮಾಧ್ಯಮಗಳಿಂದ ದೂರ ಇರಲಾರದೇ ಚಡಪಡಿಸುವವರಲ್ಲಿ ಕಂಡು ಬರುವ ಆತಂಕವನ್ನು ಫಿಯರ್‌ಆಫ್ ಮಿಸ್ಸಿಂಗ್ ಔಟ್(ತಪ್ಪಿಹೋಗುವ ಭಯ) ಎಂದು ಗುರುತಿಸಲಾಗಿದೆ. ಯಾವಾಗಲೂ ಎಲ್ಲವನ್ನೂ ಪೋಸ್ಟ್ ಮಾಡಿ ಸದಾ ಇತರರ ಗಮನ ಸೆಳೆಯಬೇಕು. ಸುತ್ತಮುತ್ತಲ ಜಗತ್ತಿನಲ್ಲಿ ಘಟಿಸುವ ಪ್ರತೀ ಸಂಗತಿಯನ್ನೂ ತಾನು ತಿಳಿಯಬೇಕು ಎನ್ನುವ ಹಂಬಲ ಅತಿಯಾಗಿರುತ್ತದೆ. ಒಂದು ಕ್ಷಣ ಫೇಸ್‌ಬುಕ್‌ನಿಂದ ದೂರವಿದ್ದರೂ, ಎಲ್ಲೋ, ಏನೋ ತುಂಬಾ ಮುಖ್ಯವಾದದ್ದು ತಪ್ಪಿ ಹೋಗುತ್ತದೆ ಎನ್ನುವ ಹೆದರಿಕೆ ಇವರನ್ನು ಕಾಡುತ್ತದೆ. ಹೀಗಾಗಿ ಪದೇ ಪದೇ ಫೋನ್‌ನಲ್ಲಿ ಟೈಪ್ ಮಾಡುವುದು, ಇತರರ ಸ್ಟೇಟಸ್ ನೋಡುವುದು ಮಾಡುತ್ತಲೇ ಇರುತ್ತಾರೆ. ಕೆಲವೊಮ್ಮೆ ಇದು ಅತಿಯಾಗಿ ರಾತ್ರಿಯೆಲ್ಲಾ ಆಗಾಗ್ಗೆ ಎದ್ದು ಹೊಸದೇನಿದೆ ಎಂದು ಚೆಕ್ ಮಾಡುವುದು, ಡ್ರೆçವ್ ಮಾಡುವಾಗಲೂ ಫೋನಿನತ್ತಲೇ ದೃಷ್ಟಿ ಹಾಯಿಸುವುದು… ಇವೆಲ್ಲಾ, ಫಿಯರ್ ಆಫ್ ಮಿಸ್ಸಿಂಗ್ ಔಟ್‌ನವರ ಸಾಮಾನ್ಯ ಪ್ರಕ್ರಿಯೆಗಳು.
Advertisement
ಮಂಗನ ಕೈಗೆ ಮಾಣಿಕ್ಯ!ಸೋಶಿಯಲ್ ಮೀಡಿಯಾ, ಇತ್ತೀಚಿನ ಟ್ರೆಂಡ್‌ಅಲ್ಲ. ಅದು ಲೈಫ್ ಸ್ಟೆçಲ್‌ಆಗಿಬಿಟ್ಟಿದೆ. ಸೋಶಿಯಲ್ ಮೀಡಿಯಾದಲ್ಲಿ ಇರುವುದನ್ನು ಪೂರ್ತಿ ತಪ್ಪು ಅನ್ನೋಕಾಗಲ್ಲ.ಆದ್ರೆ ಅದರ ಮೇಲೆ ಕಂಟ್ರೋಲ್‌ಇಲ್ವಲ್ಲಾ?ಬೇಕಾಗಿದ್ದು ಹತ್ತಾದರೆ ಬೇಡದ್ದು ಸಾವಿರಾರು ಬರುತ್ತೆ. ಅದೇ ಹೆಚ್ಚು ಆಕರ್ಷಣೆಯೂತ್‌ಗೆ! ಈ ಚಾಟಿಂಗ್, ಡೇಟಿಂಗ್‌ಎಲ್ಲಾ ಹಗಲೂ ರಾತ್ರಿ ನಡೆದರೆ ಹೇಗೆ? ಏರ್‌ಪೋರ್ಟು, ಮಾಲ್,ಕಾಲೇಜು, ದೇವಸ್ಥಾನ ಎಲ್ಲಾ ಕಡೆ ಹುಡುಗರುತಲೆ ಬಗ್ಗಿಸಿ ಮೊಬೈಲ್ ನೋಡೋದು, ಟೈಪ್-ಪೋಸ್ಟ್ ಮಾಡೋದೇ ಆಗಿಬಿಟ್ಟಿದೆ. ಮುಖ್ಯವಾದ ವಿಷಯ ಅಂದ್ರೆ ಪ್ರçವೆಸಿ ಇಲ್ಲವೇ ಇಲ್ಲ. ತಿಂದಿದ್ದು, ತಿರುಗಿದ್ದು, ಪ್ರೀತಿ ಮಾಡಿದ್ದು, ಜಗಳವಾಡಿದ್ದು ಎಲ್ಲಾ ತತ್‌ಕ್ಷಣವೇಖುಲ್ಲಂ ಖುಲ್ಲಾ. ಸಾಮಾಜಿಕ ಮಾಧ್ಯಮ ಮಾಣಿಕ್ಯವೇ ಇರಬಹುದು ಆದ್ರೆ ಮಂಗನ ಕೈಗೆ ಕೊಟ್ಟ ಹಾಗಾಗಿದೆ ಅಷ್ಟೇ! ಆಟೋ ಚಾಲಕ ರಾಜಶೇಖರ್ ಅವರ ಈ ಮಾತನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ. ಚಿತ್ರದಿಂದ ಕದಡುವ ಚಿತ್ತ!
ಹದಿ ಹರೆಯದಲ್ಲಿ ಪರಸ್ಪರರನ್ನು ಮೆಚ್ಚಿಸಬೇಕು, ತಾನು ಎಲ್ಲರ ಕೇಂದ್ರಬಿಂದುವಾಗಬೇಕು ಎಂಬ ಬಯಕೆ ಸಹಜ. ಹೀಗಾಗಿಯೇ, ಇತರರನ್ನು ಆಕರ್ಷಿಸುವ ಉದ್ದೇಶದಿಂದ ಸಾಮಾಜಿಕ ಜಾಲ ತಾಣಗಳಲ್ಲಿ ಯುವಜನರು ಅತ್ಯಂತ ಕ್ರಿಯಾಶೀಲರಾಗುತ್ತಾರೆ. ಆಗಾಗ್ಗೆ ತನ್ನ ಸೆಲ್ಫಿ, ನಾನಾ ಭಾವ ಭಂಗಿಗಳ ಚಿತ್ರ ಹಾಕಿ ಎಲ್ಲರನ್ನು ಮೆಚ್ಚಿಸುವ ಗುರಿಯೂ ಇರುತ್ತದೆ. ತಾವೇ ತೆಗೆದುಕೊಳ್ಳುವ ಸೆಲ್ಫಿ, ತಮಗೆ ಬೇಕಾದ ರೀತಿ ಕಾಣುವ ಅಧಿಕಾರ ನೀಡುತ್ತವೆ. ಮಾನವ ಸಂಬಂಧಗಳು ಸಂಕೀರ್ಣ – ಶಿಥಿಲವಾಗಿ ಸಂವಹನ ವಿರಳವಾಗಿರುವ ಈ ದಿನಗಳಲ್ಲಿ ಮೂಲೆಯೊಂದರಲ್ಲಿ ಕುಳಿತು ತಾವೇ ತೆಗೆದ ಚಿತ್ರವನ್ನು ತಂತ್ರಜ್ಞಾನ ಬಳಸಿ ಚೆಂದಗೊಳಿಸಿ ಹಾಕಿದರಂತೂ, ಕೆಲವೇ ಸೆಕೆಂಡುಗಳಲ್ಲಿ ಪರಿಚಿತರು – ಅಪರಿಚಿತರಿಂದ ಕಾಮೆಂಟುಗಳ ಸುರಿಮಳೆ ಆರಂಭವಾಗುತ್ತದೆ. ಹೀಗೆ ಬರುವ ಸಾವಿರಾರು ಪ್ರತಿಕ್ರಿಯೆಗಳು ಮನಸ್ಸಿಗೆ ಹಿತಾನುಭವ ನೀಡುತ್ತವೆ ಅನ್ನೋದೇನೋ ಸರಿ. ಹಾಗೆಯೇ, ಸಾಮಾಜಿಕ ಮಾಧ್ಯಮ ಕೆಲಮಟ್ಟಿಗೆ ಖುಷಿ ನೀಡಿ “ಇನ್‌ಸ್ಟಂಟ್ ಸೆಲೆಬ್ರಿಟಿ ಸ್ಟೇಟಸ್’ ಕೊಟ್ಟು ಆತ್ಮವಿಶ್ವಾಸ ಹೆಚ್ಚಿಸುತ್ತದೆ ಕೂಡ. ಆದರೆ, ಇದು ಇಲ್ಲಿಗೇ ಮುಗಿಯುವುದಿಲ್ಲ. ಲೈಕ್‌ಗಳು ಹೆಚ್ಚುತ್ತಾ ಹೋದಂತೆ ಮತ್ತಷ್ಟು ಲೈಕ್‌ಗಳಿಸುವ ಹಪಾಹಪಿ ಶುರುವಾಗುತ್ತದೆ. ಇತರರ ಗಮನ ಸೆಳೆಯುವ ಹಂಬಲ, ಸ್ವಪ್ರಶಂಸೆಯ ಪ್ರವೃತ್ತಿ ಅಲ್ಲಿಂದ ಆರಂಭಗೊಳ್ಳುತ್ತದೆ. ಇದರ ಪರಿಣಾಮ, ಒಂದರ ನಂತರ ಇನ್ನೊಂದು ಚಿತ್ರಗಳು ಲೈಕ್‌ಗಾಗಿ ಶುರುವಾಗಿ, ಲೈಫನ್ನೇ, ಆಕ್ರಮಿಸುತ್ತದೆ, ಅದುವರೆಗೂ ಹವ್ಯಾಸವಾಗಿದ್ದು ಕ್ರಮೇಣ ಗೀಳಾಗಿ ಬದಲಾಗುತ್ತದೆ. ಇದರೊಟ್ಟಿಗೇ ನಿರೀಕ್ಷಿಸಿದ ಮಟ್ಟದಲ್ಲಿ ಪ್ರತಿಕ್ರಿಯೆ ಸಿಗದಿದ್ದರೆ, ದುಃಖ- ಅಸಹನೆ. ಯಾರಾದರೂ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದರೆ, ಉರಿಯುವ ಅತೃಪ್ತ ಮನಸ್ಸಿಗೆ ಗಾಳಿ ಹಾಕುವ ಕೆಲಸ. ತನ್ನ ವ್ಯಕ್ತಿತ್ವವೆಂದರೆ ಸಾಮಾಜಿಕ ಮಾಧ್ಯಮದಲ್ಲಿ ಬಿಂಬಿಸಿದ್ದು ಎಂಬ ತಪ್ಪು ತೀರ್ಮಾನ. ತನ್ನ ಬಗ್ಗೆ ಅವಾಸ್ತವಿಕ ನಿರೀಕ್ಷೆಗಳಿಂದ ಕಡೆ ಕಡೆಗೆ ಬೇಸರ, ಇತರರ ದ್ವೇಷ ಅಸೂಯೆ. ಹೇಗಾದರೂ ಮಾಡಿ ಅದನ್ನೆಲ್ಲಾ ಮರೆಮಾಚುವ ಪ್ರಯತ್ನದಲ್ಲಿ ಪಾಠ-ಊಟ-ಆಟ-ಕುಟುಂಬ ಎಲ್ಲವನ್ನೂ ನಿರ್ಲಕ್ಷಿಸಿ ಸಾಮಾಜಿಕ ಮಾಧ್ಯಮದಲ್ಲೇ ಮನಸ್ಸುತಲ್ಲೀನರಾಗುತ್ತಾರೆ. ಚಟ, ಹಠವಾಗಿ, ಅದು ಸಾಧ್ಯವಾಗದೇ ಇದ್ದಾಗ ನಿರಾಶೆ-ಖನ್ನತೆ, ಕುಗ್ಗಿದ ಆತ್ಮಶ್ವಾಸದಿಂದ ಬದುಕಿನಲ್ಲಿ ಆಸಕ್ತಿಯೇ ಇಲ್ಲದಂತಾಗುತ್ತದೆ. ಒಟ್ಟಿನಲ್ಲಿ ಚಿತ್ರದಿಂದ, ಚಿತ್ತಕದಡಿದ ಕೊಳ! ಬದುಕಲ್ಲಿ ಸೋಶಿಯಲ್ ಮೀಡಿಯಾ ಅನಿವಾರ್ಯವಾದರೂ ಅದು ಕ್ರಿಯಾತ್ಮಕ, ಸೃಜನಾತ್ಮಕ ಮತ್ತು ಸಾಮಾಜಿಕ ಬೆಳವಣಿಗೆಗೆ ಅಡ್ಡಿಯಾಗಬಾರದು. ಇತರರ ಲೈಕು ಬೇಕು, ಆದರೆ ಅದೇ ಲೈಫಲ್ಲ ಎನ್ನುವ ಸರಳಸತ್ಯ ಅರಿವಾದರೆ ಸಾಕು! ಏಕೆ ಒಪ್ಕೋ ಬಾರದು?
ಹಿಂದೆ ಟಿವಿ,ರೇಡಿಯೋ, ಫೋನ್‌ಎಲ್ಲದಕ್ಕೂ ಮೊದಲು ವಿರೋಧವಿತ್ತು. ಈಗ ಅದಿಲ್ಲದೇ ಇರೋಕೇ ಸಾಧ್ಯವಿಲ್ಲ ಅನ್ನೋ ಹಾಗಾಗಿದೆ.ಯಾವುದೇ ಹೊಸ ವಿಷಯ ಬಂದಾಗ ಬೈತಾರೆ. ಹಾಗೆ ಮಾಡದೇಯಾಕೆ ಒಪ್ಕೋಬಾರದು? ಈ ಸೋಶಿಯಲ್ ಮೀಡಿಯಾ ಬಗ್ಗೆ ಸರಿ ಇಲ್ಲ ಅಂತಾ ಬೈತಾರಲ್ಲ; ಅದ್ರಿಂದ ಸಾಕಷ್ಟು ಪ್ರಯೋಜನ ಇದೆ. ನಂಗೆ ಹಳೆ ಫ್ರೆಂಡ್ಸ್ ಜೊತೆ ಕಾಂಟಾಕ್ಟ್ ಇಟ್ಟುಕೊಳ್ಳಲು, ಎಲ್ಲಿದ್ದರೂ ನ್ಯೂಸ್ ತಿಳಿಯಲು, ಹೊಸಬರನ್ನು ಪರಿಚಯ ಮಾಡಿಕೊಳ್ಳಲು ತುಂಬಾ ಹೆಲ್ಪ್ ಮಾಡುತ್ತೆ. ಕಾಲೇಜಿಗೆ ಹೋಗ್ತಾ ಬಸ್ಸಿನಲ್ಲೇ ಕುಳಿತು ಚಾಟ್ ಮಾಡ್ತೀನಿ. ಆದ್ರೆ ಅದೇ ಅಡಿಕ್ಷನ್ ಆಗಬಾರದು ಅನ್ನೋದು ಸರಿ ಅಂತಾರೆ ಅಮೃತಹಳ್ಳಿಯ ಮೊದಲ ಬಿಕಾಂ ವಿದ್ಯಾರ್ಥಿ ಅನೂಪ್ ಅಪಾಯಗಳು ಏನು?
1 ಹ್ಯಾಕಿಂಗ್- ಹಂಚಿಕೊಳ್ಳುವ ಭರದಲ್ಲಿ ವೈಯಕ್ತಿಕ ಮಾಹಿತಿ ನೀಡುವುದರಿಂದ ಆರ್ಥಿಕ ಪರಿಸ್ಥಿತಿ, ಸಂಬಂಧಗಳ ಬಗ್ಗೆ ಮೂರನೆಯವರು ಅದರ ದುರ್ಬಳಕೆ ಮಾಡಿಕೊಳ್ಳುವ ಅಪಾಯ ಇದೆ. 2 ಭಾಮಕ ಜಗತ್ತಿನಲ್ಲಿ ಇದ್ದು ನಿಜ ಪ್ರಪಂಚದ ಸಂಬಂಧಗಳನ್ನು ತಿರಸ್ಕರಿಸುವುದು ಚಟವಾಗಿ ಮಾರ್ಪಟ್ಟು ದುರ್ಬಲ ಸಾಮಾಜಿಕ ಸಂಬಂಧಗಳು, ಅನಾಸಕ್ತಿ, ಕಾಲಹರಣ ಸಂಗಾತಿ,ಸ್ನೇಹಿತರನ್ನು ಆಯ್ಕೆ ಮಾಡುವಾಗ ಮೋಸ ಹೋಗುವುದು . 3 ಸೈಬರ್ ಬುಲ್ಲಿಯಿಂಗ್- ಅನಾಮಧೇಯ ನಕಲಿ ಖಾತೆಯಿಂದ ತೊಂದರೆಗೊಳಗಾಗುವುದು, ಚಾರಿತ್ರ್ಯವಧೆ, ಗಾಸಿಪ್ 4 ದೈಹಿಕ ಸಮಸ್ಯೆಗಳು- ಕತ್ತು ನೋವು, ದೃಷ್ಟಿ ವ್ಯತ್ಯಾಸ, ಕೈಬೆರಳುಗಳಲ್ಲಿ ಉರಿ,ಬಾಗಿದ ಬೆನ್ನು, ಬೊಜ್ಜು, ನಿದ್ರಾಹೀನತೆ. ಮಾನಸಿಕ ಸಮಸ್ಯೆಗಳು- ಅಂತರ್ಮುಖೀ, ಖನ್ನತೆ, ಸಾಮಾಜಿಕವಾಗಿ ಬೆರೆಯದಿರುವುದು, ಸಿಟ್ಟು, ಏಕಾಗ್ರತೆ ಕೊರತೆ ಇತ್ಯಾದಿ ಹೀಗೆ ಬಳಕೆ ಮಾಡಿ
ಸಂಪರ್ಕಕ್ಕೆ ಪೂರಕ ಆದರೆ ಪರ್ಯಾಯವಲ್ಲ ಎಂದು ತಿಳಿದು ಇತಿ-ಮಿತಿಯಲ್ಲಿ ಅವಶ್ಯಕತೆ ಗನುಗುಣವಾಗಿ ಬಳಸುವುದು.
ಓದು, ಆಟ, ಕತೆ, ಸಂಗೀತ, ತಿರುಗಾಟ ಹೀಗೆ ಕ್ರಿಯಾಶೀಲ ಚಟುವಟಿಕೆಗಳತ್ತ ಆಸಕ್ತಿ ವಹಿಸುವುದು. ದಿನವೂ ನಿಗದಿತ ಸಮಯ ಮೀಸಲಿಡುವುದು, ಒಂದರಿಂ¨ ಎರಡು ಗಂಟೆ ವೀಕ್ಷಣಾ ಸಮಯ(ಟಿ.ವಿ, ಮೊಬೈಲ್,ಕಂಪ್ಯೂಟರ್‌ಎಲ್ಲಾಸೇರಿ)
ಮಲಗುವ ಮತು ¤ಊಟದ ಕೋಣೆಯಲ್ಲಿ. ಕಿ.ವಿ, ಮೊಬೈಲ್, ಕಂಪ್ಯೂಟರ್‌ಬೇಡ. ಶಿಕ್ಷಣ, ಸಂಪರ್ಕಮತ್ತು ಮಾಹಿತಿ ಸಂಗ್ರಹ ಮುಂತಾದ ವಿಷಯಗಳಿಗೆ ಮಾತ್ರ ಇರಲಿ ಸೋಶಿಯಲ್ ಮೀಡಿಯಾ. ಡಾ.ಕೆ.ಎಸ್.ಚೈತ್ರಾ