Advertisement

ಸಿಡಿಲು ಬಡಿದು ಐದು ಜನರು, 23 ಕುರಿಗಳ ಸಾವು!

12:37 PM Aug 07, 2022 | Team Udayavani |

ರಾಯ್ಪುರ: ಸಿಡಿಲು ಬಡಿದು ಐದು ಜನರು ಮತ್ತು 23 ಕುರಿಗಳು ಸಾವನ್ನಪ್ಪಿದ ಘಟನೆ ಛತ್ತೀಸ್‌ಗಢದ ಜಾಂಜ್‌ಗಿರ್-ಚಂಪಾ ಜಿಲ್ಲೆಯಲ್ಲಿ ಶನಿವಾರ ನಡೆದಿದೆ. ಇದರೊಂದಿಗೆ ಜಿಲ್ಲೆಯ ಐದು ಗ್ರಾಮಗಳಲ್ಲಿ ಸಂಭವಿಸಿದ ಈ ಘಟನೆಗಳಲ್ಲಿ ನಾಲ್ವರು ಗಾಯಗೊಂಡಿದ್ದಾರೆ

Advertisement

ಕಿಯಾರಿ ಗ್ರಾಮದ ಶ್ಯಾಮ್ ಕುಮಾರಿ (18) ಮತ್ತು ಅದೇ ಗ್ರಾಮದ ಅನಿಲ್ ಯಾದವ್ (30) ಮೃತಪಟ್ಟಿದ್ದಾರೆ.

ಅಕಲ್ತಾರಾ ಪ್ರದೇಶದ ಮಧುವಾ ಗ್ರಾಮದ ನಿವಾಸಿ ಮಹೇಶ್ ಡೋಂಗ್ರೆ (56) ಅವರು ಮಳೆಯ ನಡುವೆ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.

ಚೋರಭಟ್ಟಿ ಗ್ರಾಮದಲ್ಲಿ 50 ವರ್ಷದ ದಿಲೀಪ್ ಯಾದವ್ ಅವರು ತಮ್ಮ ಮಗನೊಂದಿಗೆ ಮನೆಗೆ ಮರಳುತ್ತಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:ಮುಂಬೈ-ಅಹಮದಾಬಾದ್ ನಡುವೆ ಸಂಚಾರ ಆರಂಭಿಸಿದ ಆಕಾಶ ಏರ್ ನ ಮೊದಲ ವಿಮಾನ

Advertisement

ಚಂಪಾ ಪ್ರದೇಶದ ಸಮೀಪದ ಸಿಯೋನಿ ಗ್ರಾಮದ ವಿಜಯ್ ರಾಥೋಡ್ ಕೂಡಾ ಸಿಡಿಲಾಘಾತಕ್ಕೆ ಬಲಿಯಾಗಿದ್ದಾರೆ.

ಇದೇ ವೇಳೆ ಪಾಮ್‌ಗಢ ಪ್ರದೇಶದ ಸೆಮರಿಯಾ ಗ್ರಾಮದಲ್ಲಿ ಸಂಜೆ ಸಿಡಿಲು ಬಡಿದು 23 ಕುರಿಗಳು ಸಾವನ್ನಪ್ಪಿವೆ ಎಂದು ವರದಿ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next