Advertisement
ರಾಜ್ಯ ಕಂದಾಯ ಇಲಾಖೆಯ ವಿಪತ್ತು ನಿರ್ವಹಣ ವಿಭಾಗದಡಿ ಜಿಲ್ಲಾಡಳಿತಗಳು ಮಿಂಚು ಪ್ರತಿಬಂಧಕ ಅಳವಡಿಸಲು ಮುಂಜೂರಾತಿ ನೀಡುತ್ತಿದ್ದು ಪ್ರತೀ ವರ್ಷ ಸಿಡಿಲಿನ ಆಘಾತದಿಂದ ಹಾನಿ ಪ್ರಮಾಣ ಆಧರಿಸಿ ಸ್ಥಳ ಗುರುತಿಸಲಾಗುತ್ತದೆ.
Related Articles
Advertisement
ಎತ್ತರದ ಸ್ಥಳದಲ್ಲಿ ಟವರ್ ನಿರ್ಮಾಣ ಮಾಡಿ ಮಿಂಚು ಪ್ರತಿಬಂಧಕ ಅಳವಡಿಸಿ ಸಿಡಿಲಿನ ಹೊಡೆತ ತಪ್ಪಿಸಲು ಈ ಸಾಧನ ಬಳಸಲಾಗುತ್ತದೆ. 15 ಮೀ.ಗಿಂತ ಹೆಚ್ಚು ಎತ್ತರವಿರುವ ಗೋಪುರಗಳು, ಖಾಸಗಿ ಕಟ್ಟಡಗಳು, ಶ್ರದ್ಧಾ ಕೇಂದ್ರಗಳು, ಇನ್ನಿತರ ಕಟ್ಟಡಗಳಲ್ಲಿ ಮಿಂಚು ಬಂಧಕ ಅಳವಡಿಸುವುದು ಕಡ್ಡಾಯ. ಸಾಮರ್ಥ್ಯದ ಮೇಲೆ ಅದರ ವೆಚ್ಚ ನಿಗದಿಯಾಗುತ್ತದೆ.
ಮಿಂಚು ಬಂಧಕದ ಅನುಕೂಲತೆ :
ಮಿಂಚು ಮತ್ತು ಸಿಡಿಲಿನ ಹೊಡೆತಗಳು 30 ಸಾವಿರ ಫ್ಯಾರನ್ ಹೀಟಿನಿಂದ 50 ಸಾವಿರ ಫ್ಯಾರನ್ ಹೀಟ್ ಉಷ್ಣಾಂಶವನ್ನು ಬಿಡುಗಡೆ ಮಾಡಬಲ್ಲವು. ಅಂದರೆ ಇದು ಸೂರ್ಯನ ಮೇಲ್ಮೆ„ ತಾಪಮಾನಕ್ಕಿಂತಲೂ ಹೆಚ್ಚಿರುತ್ತದೆ. ದೊಡ್ಡ ಕಟ್ಟಡಗಳನ್ನು ಈ ಸಿಡಿಲಿನ ಹೊಡೆತದಿಂದ ರಕ್ಷಿಸಲು ತ್ರಿಶೂಲಾಕಾರದ ಲೋಹದ ಸಲಾಕೆಯನ್ನು ಕಟ್ಟಡದ ಮೇಲೆ ನೆಟ್ಟು ಅದರ ಕೆಳತುದಿಯನ್ನು ಒಂದು ವಾಹಕದ ಮೂಲಕ ಭೂಮಿಗೆ ಸೇರಿಸುತ್ತಾರೆ. ಇದೇ ಮಿಂಚು ಬಂಧಕ. ಮೋಡದಿಂದ ಪ್ರೇರೇಪಿತಗೊಂಡ ವಿದ್ಯುತ್ ಅಂಶಗಳು ಮಿಂಚು ಬಂಧಕ ಹಾಗೂ ವಾಹಕಗಳ ಮೂಲಕ ಭೂಮಿಯನ್ನು ಸೇರಿ ಸಿಡಿಲಿನ ಅಪಾಯ ತಪ್ಪುತ್ತದೆ.
ತಾಲೂಕಿನಲ್ಲಿ ಕೆಯ್ಯೂರು, ನೆಲ್ಯಾಡಿಯಲ್ಲಿ ಮಿಂಚು ಪ್ರತಿಬಂಧಕ ಟವರ್ ಅಳವಡಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯು ಅಂತಿಮ ಹಂತದಲ್ಲಿದೆ. ಅನುದಾನ ದೊರೆತ ತತ್‌ಕ್ಷಣ ನಿರ್ಮಾಣ ಪ್ರಕ್ರಿಯೆ ಪ್ರಾರಂಭಿಸಲಾಗುವುದು. -ರಮೇಶ್ ಬಾಬು, ತಹಶೀಲ್ದಾರ್, ಪುತ್ತೂರು