Advertisement

ಧಾರಾಕಾರ ಮಳೆ: ಗದ್ದೆಗಳು ಜಲಾವೃತ

05:53 PM Oct 20, 2018 | Team Udayavani |

ಕುರುಗೋಡು: ಪಟ್ಟಣದ ಸುತ್ತಮುತ್ತ ಬುಧವಾರ ತಡರಾತ್ರಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಭತ್ತದ ಗದ್ದೆಗಳು ಜಲಾವೃತಗೊಂಡು ಬೆಳೆ ಹಾನಿಯಾಗಿದೆ. ಧಾರಾಕಾರಾ ಸುರಿದ ಮಳೆಯಿಂದ ಹಳ್ಳ-ಕೋಳ್ಳಗಳು ತುಂಬಿ ಹರಿದು ಗದ್ದೆಗಳಿಗೆ ನೀರು ನುಗ್ಗಿ ಜಲವೃತಗೋಂಡಿವೆ. ಇನ್ನು ನದಿ ತೀರದ ಮಣ್ಣೂರು ಕ್ಯಾಂಪ್‌, ಮಣ್ಣೂರು, ಸೂಗೂರು, ರುದ್ರಪಾದ, ನಡವಿ, ಸಿರಿಗೇರಿ, ಗುಂಡಿಗೆನೂರು, ದಾಸಪುರ ಗ್ರಾಮಗಳಲ್ಲಿ ರೈತರು ನಾಟಿ ಮಾಡಿದ್ದ ಭತ್ತ ಕಾಳು ಕಟ್ಟಿ ಕಟಾವುಗೆ ಬಂದಿದ್ದವು. ಆದರೆ ಬುಧವಾರ ತಡರಾತ್ರಿ ಸುರಿದ ಮಳೆಯಿಂದಾಗಿ ಭತ್ತದ ಬೆಳೆಗಳು ಸಂಪೂರ್ಣ ನೆಲ ಕಚ್ಚಿದ್ದು, ಕಾಳುಗಳು ನೆಲಕ್ಕೆ ಉದುರಿ ರೈತರು ಅಪಾರ ಪ್ರಮಾಣದ ನಷ್ಟ ಎದುರಿಸುವಂತಾಗಿದೆ.

Advertisement

ಕಳೆದ ನಾಲ್ಕು ವರ್ಷಗಳಿಂದ ಮಳೆ, ಬೆಳೆ ಇಲ್ಲದೆ ರೈತರು ಬೆಳೆಗಳನ್ನು ಬೆಳೆಯಲಾಗದೆ ಸಂಕಷ್ಟಕ್ಕೆ ಸಿಲುಕಿ ಗುಳೆ ಹೋಗಿ ಜೀವನ ನಡಿಸುವಂತ ಪರಿಸ್ಥಿತಿ ನಿಮಾರ್ಣವಾಗಿತ್ತು. ಈ ಬಾರಿ ಅಲ್ಪ ಮಳೆಗೆ ಉತ್ತಮ ಬೆಳೆ ಬೆಳೆದು ಫಲವನ್ನು ಕೈಗೆ ಪಡಿದುಕೊಳ್ಳುವ ಹಂತದಲ್ಲಿದ್ದ ಹಲವು ರೈತರು ಮತ್ತೆ ವರುಣನ ಆರ್ಭಟಕ್ಕೆ ನಾಟಿ ಮಾಡಿದ ಬೆಳೆಗಳು ಎಲ್ಲಂದರಲ್ಲಿ ಜಲಾವೃತಗೊಂಡಿದ್ದು, ಕೆಲವು ರೈತರಿಗೆ ನುಂಗಲಾರದ ತುತ್ತಾಗಿ ಪರಿಣಾಮಿಸಿದೆ.

ನೀರಾವರಿ ಮತ್ತು ಮಳೆಯಾಶ್ರಿತ ಪ್ರದೇಶಗಳಲ್ಲಿ ಮುಂಗಾರು ಹಂಗಾಮಿನಲ್ಲಿ ಎಮ್ಮಿಗನೂರು, ಗುತ್ತಿಗೆನೂರು, ಒರಾಯಿ, ಪಟ್ಟಣ ಸೇರಗು ಸೋಮಲಾಪುರ ಭಾಗದಲ್ಲಿ ಹೈಬ್ರಿಡ್‌ ಜೋಳ, ಮೆಕ್ಕೆಜೋಳ, ಸಜ್ಜೆ, ಮೆಣಸಿನಕಾಯಿ ಇನ್ನಿತರೆ ಬೆಳೆಗಳು ಬಿತ್ತನೆ ಮಾಡಿದ ಮಡಿಗಳ ತುಂಬ ನೀರು ತುಂಬಿ ಎಲ್ಲಂದರಲ್ಲಿ ವಡ್ಡುಗಳು ಕಿತ್ತಿ ಹೋಗಿ ಉತ್ತಮ ಮಳೆ:

ರೈತರಲ್ಲಿ ಸಂತಸ ಕಂಪ್ಲಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದ ಸಂಜೆ ಮತ್ತು ರಾತ್ರಿ ಉತ್ತಮ ಮಳೆಯಿಂದಾಗಿ ರೈತರಲ್ಲಿ ಸಂತಸ ಮೂಡಿಸಿದೆ. ಕಳೆದ ಹಲವು ತಿಂಗಳಿಂದ ಕೈಕೊಟ್ಟಿದ್ದ ಮಳೆ ಕಂಪ್ಲಿ ಭಾಗದಲ್ಲಿ ಉತ್ತಮವಾಗಿ ಸುರಿದಿದೆ. ಕಳೆದ ಎರಡು ತಿಂಗಳಿಂದ ಹನಿ ಮಳೆ ಇಲ್ಲದೆ ಒಣಗುತ್ತಿದ್ದ ಬಿತ್ತನೆ ಮಾಡಿದ ಬೆಳೆಗಳಿಗೆ ಜೀವಕಳೆ ಬಂದಿದೆ. ಕಂಪ್ಲಿ ಪಟ್ಟಣದಲ್ಲಿ 37 ಮಿ.ಮೀ. ಅತ್ಯಧಿಕ ಮಳೆಯಾಗಿದ್ದರೆ, ಮೆಟ್ರಿಯಲ್ಲಿ ಅತೀ
ಕಡಿಮೆ 5 ಮಿ.ಮೀ. ಮಳೆಯಾಗಿದ್ದು, ಕಂಪ್ಲಿ ತಾಲೂಕಿನಲ್ಲಿ ಸರಾಸರಿ 20 ರಿಂದ 22 ಮಿ.ಮೀ.ನಷ್ಟು ಉತ್ತಮ ಮಳೆಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next