Advertisement
ಗುರುವಾರ ಬೆಳಗ್ಗೆ 9.45ರ ಸುಮಾರಿಗೆ ಕಲಬುರಗಿ ಕಡೆಯಿಂದ ಬಂದ ವಿಮಾನ ಜಲಾಶಯದಿಂದ ಕೇವಲ 100 ಮೀಟರ್ ಎತ್ತರದಲ್ಲಿ ಹಿನ್ನೀರಿನ ಮಾರ್ಗವಾಗಿ ಸಾಗಿ, ಅಲ್ಲಿ ತಿರುವು ಪಡೆದು ಮರಳಿದೆ. ಆಲಮಟ್ಟಿ ಶಾಸ್ತ್ರೀಜಿ ಜಲಾಶಯದ ಮೇಲೆ ಹಾರಾಡುವ ಮುನ್ನ ನಾರಾಯಣಪುರ ಬಳಿ ಬಸವಸಾಗರ ಜಲಾಶಯದ ಮೇಲೂ ಈ ವಿಮಾನ ಹಾರಾಟ ಮಾಡಿದೆ ಎನ್ನಲಾಗಿದೆ. ಈ ವಿಷಯ ತಿಳಿಯುತ್ತಲೇ ಆಲಮಟ್ಟಿ ಶಾಸ್ತ್ರೀಜಿ ಸ್ಥಳೀಯ ಜಲಾಶಯದ ಭದ್ರತೆಗೆ ಪ್ರತ್ಯೇಕವಾಗಿ ನಿಯೋಜಿಸಿರುವ ಪೊಲೀಸ್ ತಂಡ ಹಾಗೂ ಕರ್ನಾಟಕ ರಾಜ್ಯ ಕೈಗಾರಿಕೆ ಭದ್ರತಾ ಪಡೆ ಅಧಿಧಿಕಾರಿಗಳು ಆತಂಕಕ್ಕೀಡಾಗಿದ್ದಾರೆ.
ಎಸ್ಪಿ ಸಿದ್ಧರಾಮಪ್ಪ ಬೀದರ ನಗರದಲ್ಲಿರುವ ಸೈನಿಕ ವಿಮಾನ ತರಬೇತಿ ಕೇಂದ್ರದ ಅಧಿಧಿಕಾರಿಗಳನ್ನು ಸಂಪರ್ಕಿಸಿದ್ದು, ತಮ್ಮ ಕೇಂದ್ರದಲ್ಲಿರುವ ತರಬೇತಿ ಲಘು ವಿಮಾನ ಕೃಷ್ಣಾ ತೀರದ ಮಾರ್ಗದಲ್ಲಿ ಹಾರಾಟ ಮಾಡಿದ್ದಾಗಿ ಅಧಿಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಜಿಲ್ಲಾಧಿಧಿಕಾರಿ ಶಿವಕುಮಾರ ಉದಯವಾಣಿಗೆ ಮಾತನಾಡಿ, ಲಘು ವಿಮಾನ ಬೀದರ ಸೈನಿಕ ವಿಮಾನ ಹಾರಾಟ ತರಬೇತಿ ಕೇಂದ್ರಕ್ಕೆ ಸೇರಿದ್ದು ಎಂದು ಎಸ್ಪಿ ಅವರು ಮಾಹಿತಿ ಸಂಗ್ರಹಿಸಿದ್ದಾರೆ. ಈ ಕುರಿತು ಬೀದರ ಸೇನಾ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದು, ಸ್ಥಳೀಯರು ಈ ವಿಮಾನ ಹಾರಾಟದ ಕುರಿತು ಆತಂಕ ಪಡುವ ಅಗತ್ಯವಿಲ್ಲವೆಂದು ಸ್ಪಷ್ಟಪಡಿಸಿದರು.