Advertisement

ದಡ್ಡನೆಂದು ಹಿಂದಡಿ ಇಡುವುದು ದೊಡ್ಡ ತಪ್ಪು

10:23 PM Sep 02, 2021 | Team Udayavani |

ಇಲ್ಲಿ ಯಾರೂ ದಡ್ಡರಲ್ಲ, ಹಾಗೆಯೇ ಹಣ, ಆಸ್ತಿ ಹೊಂದಿದ ಮಾತ್ರಕ್ಕೆ ದೊಡ್ಡ ವರು ಆಗುವುದಿಲ್ಲ. ಪ್ರಸ್ತುತ ದುಡ್ಡಿದ್ದ ವರೇ ದೊಡ್ಡವರೆಂದು ಬಡಾಯಿ ಕೊಚ್ಚಿಕೊಳ್ಳುವವರ ಕಾಲ ಇದಾಗಿದೆ. ಅದು ಬೇರೆ ವಿಚಾರ. ಜಗತ್ತಿನಲ್ಲಿ ಯಾರಿಂ ದಲೂ ಕದಿಯಲಾಗದ ಮತ್ತು ಎಲ್ಲರೂ ಬೆಲೆ ಕೊಡುವ ಅತ್ಯಮೂಲ್ಯ ಆಸ್ತಿ ಎಂದರೆ ಅದು ಜ್ಞಾನ. ಯಾರು ಜ್ಞಾನ ಗಳಿಸಿರುತ್ತಾರೋ ಜಗತ್ತಿನಲ್ಲಿ ಅವರೇ ದೊಡ್ಡವರು. ಜ್ಞಾನದ ಮುಂದೆ ಉಳಿದೆಲ್ಲವೂ ನಗಣ್ಯ.

Advertisement

ಈ ಮಾನವ ದೇಹ, ದೇವರ ಅದ್ಭುತ ಕೊಡುಗೆ. ದೈವ ನಿರ್ಮಿಸಿದ ದೇಹಕೆ ಏನಾದರೂ ವ್ಯಾಧಿ ತಗಲಿದರೆ ಸರಿ ಪಡಿಸಲೆಂದೇ ಸಾವಿರಾರು ವರ್ಷಗಳಿಂದ ಸಂಶೋಧನೆ, ಆವಿಷ್ಕಾರಗಳು ನಡೆದಿವೆ.

ಇಲ್ಲಿಯವರೆಗೆ ಯಾವುದೇ ಶಾಶ್ವತ ಪರಿಹಾರ ಕಂಡುಕೊಳ್ಳಲು ಆಗಿಲ್ಲ. ತಾತ್ಕಾ ಲಿಕ ಪರಿಹಾರಗಳಿಗೆ ಬರವಿಲ್ಲ. ಇನ್ನೂ ಮಾನವ ಪರಿಹಾರ ಕಂಡುಕೊಳ್ಳುವು ದರಲ್ಲಿಯೇ ನಿರತನಾಗಿದ್ದಾನೆ. ಸೃಷ್ಟಿಕರ್ತ ಪ್ರತಿಯೊಬ್ಬರಿಗೂ ಕೂಡ  ಇಂದ್ರಿಯ ಗಳನ್ನು ಸಮಾನವಾಗಿ, ಸುಸಂಬದ್ಧವಾಗಿ, ಸುವ್ಯವಸ್ಥಿತವಾಗಿ ನೀಡಿದ್ದಾನೆ. ದಡ್ಡನೆನಿಸಿ ಕೊಳ್ಳುವವನಿಗೆ ಅರ್ಧಂಬರ್ಧ ಮೆದುಳು ಕೊಟ್ಟು, ಬುದ್ಧಿವಂತನಿಗೆ ಸಂಪೂರ್ಣ ಮೆದುಳು ಏನಾದರೂ ನೀಡಿದ್ದಾನೆಯೇ?  ಇಲ್ಲವಲ್ಲ; ದಡ್ಡನಿಗೂ, ದೊಡ್ಡವನಿಗೂ ಇರುವುದೊಂದೇ ತಲೆ. ಆದರೆ ಅದನ್ನು ನಾವು ಹೇಗೆ ಉಪಯೋಗ ಮಾಡಿಕೊಳ್ಳುತ್ತೇವೆ ಎಂಬುದನ್ನು ಅವ ಲಂಬಿಸಿದೆ. ಸರ್ವರೂ ಸರ್ವಸ್ವವನ್ನೂ ಸಾಧಿಸಲು ಸಮರ್ಥರಿದ್ದಾರೆ. ಅವರು ಇಂದ್ರಿಯಗಳನ್ನು ನಿಗ್ರಹಿಸಿಕೊಂಡು ಕಾರ್ಯ ಪ್ರವೃತ್ತರಾಗದಿರುವುದೇ ಹಿಂದು ಳಿಯಲು ಕಾರಣ. ಧೈರ್ಯದಿಂದ ಶ್ರದ್ಧೆ ಬೆಳೆಸಿಕೊಂಡು ಒಂದು ವೇಳೆ ಕಾರ್ಯ ನಿರತರಾದರೆಂದರೆ ಇಡೀ ಜಗತ್ತೇ ಅವರ ವಿರುದ್ಧ  ತಿರುಗಿ ಬಿದ್ದರೂ ಏನೂ ಮಾಡಲಾಗುವುದಿಲ್ಲ. ಅಂತಹ ಅಖಂಡ ಶಕ್ತಿ ನಮ್ಮಲ್ಲಡಗಿದೆ.

ಬೀದಿ ಬದಿಯಲ್ಲಿ ಭಿಕ್ಷೆ ಬೇಡುವವ ನಿಂದ ಹಿಡಿದು ರಾಷ್ಟ್ರದ ಮೊದಲ ಪ್ರಜೆ ರಾಷ್ಟ್ರಪತಿಯವರೆಗೆ ಒಂದಲ್ಲ ಒಂದು ಕಲೆ, ಜಾಣತನವಿರುತ್ತದೆ. ಅಧಿಕಾರದ ಆಧಾರದ ಮೇಲೆ ತಾರತಮ್ಯ ಮಾಡಿ, ಅವಮಾನ ಮಾಡುವವರ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗಬಾರದು. ಉನ್ನತ ಅಧಿಕಾರಿಗಳಿಗೆ ಉತ್ತಮ ಯೋಚನೆ ಇರುತ್ತವೆ, ಅಧೀನ ಸಿಬಂದಿಗೆ ಅವುಗಳ ಯಾವುದೇ ಪರಿವೆಯೇ ಇರುವುದಿಲ್ಲ ವೆಂದಲ್ಲ. ಮನಸ್ಸಿನ ಹಂದರದಲ್ಲಿ ಯಾವ ವಿಚಾರಗಳಿಗೆ ಬೆಳೆಯಲು ಅವಕಾಶ ನೀಡುತ್ತೇವೆಯೋ ಅಂಥ ಮನೋಭಾವನೆಗಳು ರೂಪುಗೊಂಡು ಕಾರ್ಯ ರೂಪಕ್ಕೆ ಇಳಿಸುವವರೆಗೂ ಗುಪ್ತವಾಗಿರು ತ್ತವೆ. ಯಾವಾಗ ಆಚರಣೆಗೆ ತರಲು ಮುಂದಾಗುತ್ತೇವೆಯೋ ಆಗ ನಮ್ಮ ಸಾಮಥ್ಯ ಇತರರಿಗೆ ತಿಳಿಯುತ್ತದೆ.

“ವಿಚಾರಗಳು ಇಡೀ ಜಗತ್ತನ್ನೇ ಆಳು ತ್ತವೆ’. ಆಳುವ ವಿಚಾರಗಳಿದ್ದರೆ ಸರಿ; ಹಾಳು ಮಾಡುವ ವಿಚಾರಗಳಿದ್ದರೆ, ಎಂಥ ಉನ್ನತ ಅಧಿಕಾರಿಗಳು ಇದ್ದರೂ ವಿಶ್ವಕ್ಕೆ ಮಾರಕ ವಾಗುವುದರಲ್ಲಿ ಎರಡು ಮಾತಿಲ್ಲ.  ಎಲ್ಲ ಇದ್ದು ಏನು ಇರದಂತೆಯೇ ಇರುವ ನಮಗೆ ನಾವು ದಡ್ಡನೆಂದು ಯಾವಾಗ ಅಂದುಕೊಳ್ಳುತ್ತೇವೆಯೋ ಆಗ ಜಗತ್ತಿನಲ್ಲಿ ಇದಕ್ಕಿಂತ ಪಾಪ ಬೇರೊಂದಿಲ್ಲ. ಅವಿರತ ಶ್ರಮವಹಿಸಿ, ಅಸೀಮವಾದುದನ್ನು ಸಾಧಿಸಲು ತೊಡೆ ತಟ್ಟಿ ನಿಲ್ಲಬೇಕು. ಇಲ್ಲ, ಸಾಧ್ಯವಿಲ್ಲ, ಓದಲು ನನ್ನಿಂದಾಗದು; ಮೈ ಮುರಿದು ದುಡಿಯಲು ಸಾಧ್ಯವಾಗದೆಂದು ಹಗಲಿ ರುಳು ಹಲುಬುತ್ತ ಕುಳಿತುಕೊಂಡರೆ ಎಲ್ಲರ ದೃಷ್ಟಿಯಲ್ಲಿ ಯಾವ ಕೆಲಸಕ್ಕೂ ಸಲ್ಲದವರಾಗುತ್ತೇವೆ. ಪ್ರಮುಖವಾಗಿ ನಮ್ಮ ಆಪ್ತರೆನಿಸಿಕೊಂಡವರೆ ನಮ್ಮನ್ನು ತಿರಸ್ಕರಿಸಿ ಬಿಡುತ್ತಾರೆ. ಒಂದು ಬಾರಿ ಆಲಸ್ಯತನ, ಸೋಮಾರಿತನಕ್ಕೆ ಒಳಗಾಗಿ ಬಿಟ್ಟೆವು ಎಂದರೆ ಅನ್ಯ ಮಾರ್ಗದ ಹಾದಿಯಲ್ಲಿ  ಸಾಗಿಬಿಡುತ್ತೇವೆ. ಹೊಟ್ಟೆಪಾಡಿಗಾಗಿ ಸಮಾಜಘಾತಕ ಚಟುವಟಿಕೆಯಲ್ಲಿ ತೊಡಗಿಕೊಂಡು ನಮ್ಮ ಜೀವನಕ್ಕೆ ನಾವೇ ಸಂಚಕಾರ ತಂದುಕೊಳ್ಳುತ್ತೇವೆ. ಮನಸ್ಸು ನಮ್ಮ ಗುಲಾಮರಾಗಬೇಕೇ ಹೊರತು ನಾವು ಅದರ ಗುಲಾಮರಾಗಬಾರದು.

Advertisement

ಎಲ್ಲ ಸೌಕರ್ಯವಿದ್ದರೂ ನಾವು ಕೈಯಲ್ಲಿ ಆಗದೆಂದು ಕೈ ಕಟ್ಟಿಕೊಂಡು ಕುಳಿತುಕೊಳ್ಳುತ್ತೇವೆಯಲ್ಲ ಯಾಕೆ? ಇರುವ ಸೌಲಭ್ಯಗಳನ್ನೇ ಸದುಪಯೋಗ ಪಡಿಸಿಕೊಂಡು ಏನಾದರೂ ಕಾರ್ಯ ಮಾಡಲು ಮುಂದಾಗೋಣ. ಸಾವಿರ ಜನ ಸಾವಿರ ಮಾತನಾಡಿದರೂ ಕಿವಿಗೊಡದಿರೋಣ. ನಮ್ಮೊಳಗಿನ ಆತ್ಮದ ಮಾತಿಗೆ ದನಿಗೂಡಿಸಿ, ಆತ್ಮವಿಶ್ವಾಸ ಇಮ್ಮಡಿ ಗೊಳಿಸಿ ಕೊಂಡು ಕಾರ್ಯ ನಿರ್ವಹಿಸೋಣ.

- ಬಿ. ಪ್ರಕಾಶ್‌, ವಜ್ಜಲ್

Advertisement

Udayavani is now on Telegram. Click here to join our channel and stay updated with the latest news.

Next