Advertisement
ಒಂದು ತಗೊಂಡ್ರೆ ಇನ್ನೊಂದು ಪುಗಸಟ್ಟೆ.. ಇದೂ ಒಂದು ವ್ಯಾಪಾರಿ ತಂತ್ರ. ಖರೀದಿಸಿ ಉಳಿತಾಯ ಮಾಡಿ ಎಂಬ ಮೂರ್ಖತನದ ರೀತಿಯಲಿ ಖರೀದಿಸಿ ಉಳಿತಾಯ ಮಾಡೋದು ಹೇಗೆ ಎಂದು ಯೋಚಿಸಿ ಸ್ವಲ್ಪ ಉಪಾಯ ಇಲ್ಲಿದೆ. ಕೆಲವು ನಿದರ್ಶನ ಗಮನಿಸಿ.
- ಅತಿಯಾದ ಯೋಚನೆ – ಯೋಚನೆ ಬಿಡಿ ಕಾರ್ಯ ಮಗ್ನರಾಗಿ.
- ಅತಿಯಾದ ಚಿಂತೆ- ಚಿಂತೆಯು ಚಿತೆಗೆ ದೂಡಬಹುದು ಆದ್ದರಿಂದ ಚಿಂತೆಯಿಂದ ದೂರವಿರಿ.
- ಗತಿಸಿ ಹೋದ ಘಟನೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದು- ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಏನು ಪ್ರಯೋಜನ ಅಲ್ಲವೇ?
- ಪ್ರತಿಯೊಬ್ಬರನ್ನು ಸಂತೋಷಿಸಲು ಪ್ರಯತ್ನಿಸುವುದು- ಇದು ಅಸಾಧ್ಯದ ಮಾತು.
- ಸಂಶಯ- ಆತ್ಮ ವಿಶ್ವಾಸ ಕಡಿಮೆಯಾದಾಗ, ತಮ್ಮಲ್ಲಿ ಸಂಶಯ ಗುಣವಿದ್ದಾಗ ಇನ್ನೊಬ್ಬರನ್ನು ಹೇಗೆ ವಿಶ್ವಾಸಿಸಲು ಸಾಧ್ಯ?
Related Articles
Advertisement
– ಸೊಲೊಮನ್ ಸಾಲಿನ್ಸ್, ಬ್ರಹ್ಮಾವರ
ಸಹಾಯವೆಂದರೆ ಹಣವಲ್ಲ :
By heeping one person You can’t change the world But you can surely change his world ತುಂಬಾ ಅರ್ಥಪೂರ್ಣವಾದ ಈ ಸಂದೇಶವು ವಾಟ್ಸ್‌ಆ್ಯಪ್‌ನಲ್ಲಿ ಬಂದಿತ್ತು. ನೀಡುವ ಕೈಗಳಿಗಿಂತ ಬೇಡುವ ಕೈಗಳು ಬಹಳ. ಮನುಷ್ಯ ಮನೆ ಮನೆಯ ಲ್ಲಿಯೂ ಜನಿಸುತ್ತಾನೆ. ಆದರೆ ಮನುಷ್ಯತ್ವ ಎಂಬುದು ಕೆಲವರಲ್ಲಿ ಮಾತ್ರ. ಮಾನವೀಯತೆ, ಮನುಷ್ಯತ್ವ ಈ ಎಲ್ಲ ಶಬ್ದಗಳು ಕೇಳಲು ತುಂಬಾ ಹಿತವಾಗಿರುತ್ತದೆ. ಪಾಲಿಸುವುದು ಕಷ್ಟವೇ ಸರಿ. ಒಬ್ಬರು ಕಷ್ಟ ಅಥವಾ ಯಾವುದೇ ತೊಂದರೆಯಲ್ಲಿ ಸಿಲುಕಿದ್ದಾಗ ಸಹಾಯ ಮಾಡುತ್ತೇವೆ. ಇದರಿಂದ ನಾವು ಇಡೀ ಪ್ರಪಂಚವನ್ನು ಬದಲಾಯಿಸಲು ಸಾಧ್ಯವಿಲ್ಲ . ಆದರೆ ಅವನ ಕುಟುಂಬವೆಂಬ ಚಿಕ್ಕ ಪ್ರಪಂಚವನ್ನು ಬದಲಾಯಿಸಬಹುದು. ಬರೀ ಹಣದ ಸಹಾಯವನ್ನಲ್ಲದೇ ಮನುಷ್ಯ ಬೇರೊಬ್ಬರಿಗೆ ಮಾನಸಿಕವಾಗಿ, ದೈಹಿಕವಾಗಿಯೂ ಅವನ ಕಷ್ಟದಲ್ಲಿ ಪಾಲ್ಗೊಂಡು ತಮ್ಮಿಂದಾಗುವ ಸೇವೆಯನ್ನು ಮಾಡಬಹುದು. – ಆಶಾ, ನಾರಾವಿ
ಹಿತಮಿತವಾಗಿರಲಿ ಮಾತು : 95% Problems of life are due to the tone of voice. It’s not what we Say, It’s how we say, Just change the tone and See the changes in life… ಮಾತು ಬೆಳ್ಳಿ , ಮೌನ ಬಂಗಾರ.. ಮಾತು ಮನೆ ಮುರಿಯಿತು, ತೂತು ಒಲೆ ಕೆಡಿಸಿತು.. ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ . ಈ ಗಾದೆ ಮಾತುಗಳು ಮಾತಿಗೆ ಸಂಬಂಧಿಸಿರುವಂಥದ್ದು. ನಾವು ಮಾತನಾಡುವ ರೀತಿ ನಮ್ಮ ಗುಣ, ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಮಾತನ್ನು ಎಲ್ಲಿ, ಹೇಗೆ, ಎಷ್ಟು ಯಾವ ಸಮಯ, ಪರಿಸ್ಥಿತಿಯಲ್ಲಿ ಯಾವ ರೀತಿ ಮಾತನಾಡಬೇಕು ಎಂಬುದು ತುಂಬಾ ಮುಖ್ಯ. ಜೀವನದಲ್ಲಿ ಶೇ.95ರಷ್ಟು ಸಮಸ್ಯೆ ಉಂಟಾಗುವುದು ಮಾತಿನ ಧಾಟಿಯಿಂದಲೇ ಎಂದರೆ ತಪ್ಪಾಗಲಾರದು. ನುಡಿದರೆ ಮುತ್ತಿನ ಹಾರದಂತಿರಬೇಕು ಎಂದು ಬಸವಣ್ಣನವರು ಹೇಳಿದ ಹಾಗೆ ಬೇರೆಯವರ ಮನ ನೋಯದ ಹಾಗೆ ಅವರಿಗೆ ಅರ್ಥವಾಗುವ ರೀತಿ ಶಾಂತಿ ಸಮಾಧಾನದಿಂದ ಮಾತನಾಡಿ ತಿಳಿ ಹೇಳಿದಾಗ ಯಾವ ಸಮಸ್ಯೆಯೂ ಎದುರಾಗುವುದಿಲ್ಲ. ಮಾತನಾಡುವ ರೀತಿಯನ್ನು ಬದಲಿಸಿಕೊಂಡರೆ ಖಂಡಿತ ಯಾವ ಸಂಬಂಧದಲ್ಲೂ ಬಿರುಕು ಬೀಳುವುದಿಲ್ಲ. ಯಾರಿಗೂ ಬೇಸರವಾಗುವುದಿಲ್ಲ. ಒಮ್ಮೆ ಮಾತನಾಡುವ ಶೈಲಿಯನ್ನು ಬದಲಿಸಿ ನೋಡಿ. ಜೀವನದಲ್ಲಿ ಒಳ್ಳೆಯ ಬದಲಾವಣೆ ಕಾಣಬಹುದು.- ಜ್ಯೋತಿ ಕಿಣಿ, ಮುಂಬಯಿ
ಸಾಮಾಜಿಕ ಮಾಧ್ಯಮಗಳು ನಮ್ಮ ಇಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿವೆ. ದಿನಕ್ಕೆ ನೂರಾರು, ಸಾವಿರಾರು ಸಂದೇಶಗಳು ವಾಟ್ಸ್‌ಆ್ಯಪ್, ನಮ್ಮ ಫೇಸ್‌ಬುಕ್ ವಾಲ್‌ಗಳಲ್ಲಿ ಹರಿದಾಡುತ್ತವೆ. ನೀವು ನಿಮಗೆ ಖುಷಿಕೊಟ್ಟ ಮೆಸೇಜ್‌ಗಳನ್ನು 76187 74529 ಈ ಸಂಖ್ಯೆಗೆ ವಾಟ್ಸ್ ಆ್ಯಪ್ ಮಾಡಿ. ಸೂಕ್ತ ಬರಹಗಳನ್ನು ಪ್ರಕಟಿಸುತ್ತೇವೆ.