Advertisement
ಆ ದಿನ ರಾಜ ಆಸ್ಥಾನ ವಿದ್ವಾಂಸರ ಎದುರು ತನ್ನ ಆಲೋಚನೆಯನ್ನು ಮಂಡಿಸಿದ. ಅವರೆಲ್ಲರೂ ತತ್‌ಕ್ಷಣ ಒಪ್ಪಿದರು. ಅನೇಕ ರಾಜರು ಕೆಡುವುದು ಇಂತಹ ವಿದ್ವಾಂಸರು, ಮಂತ್ರಿಗಳಿಂದ. ರಾಜ ಏನು ಹೇಳುತ್ತಾನೆಯೋ ಅದನ್ನು ಹಿಂದೆಮುಂದೆ ನೋಡದೆ ಒಪ್ಪಿಕೊಳ್ಳು ವುದು, ಎಲ್ಲದಕ್ಕೂ ಉಘೇ ಉಘೇ ಎನ್ನು ವುದು ಇಂಥವರ ಹವ್ಯಾಸ. ನಿಜವಾದ ಮೇಧಾವಿಗಳು, ಮುತ್ಸದ್ದಿಗಳು, ಹಿತ ಚಿಂತಕರು ಯಾವುದು ಹಿತವೋ ಅದನ್ನು ಮಾತ್ರ ಬೆಂಬಲಿಸಬೇಕು, ಅಹಿತವಾದವು ಗಳನ್ನು ನಿರಾಕರಿಸಬೇಕು. ದುರದೃಷ್ಟವ ಶಾತ್ ನಮ್ಮ ಕಥಾನಾಯಕ ರಾಜನ ಆಸ್ಥಾನದ ವಿದ್ವಾಂಸರು, ಮಂತ್ರಿಗಳು ಹೊಗಳುಭಟರಷ್ಟೇ ಆಗಿದ್ದರು. ರಾಜನ ಆಲೋಚನೆಗೆ ಅವರೆಲ್ಲರಿಂದಲೂ ತತ್‌ಕ್ಷಣದ ಬೆಂಬಲ ಸಿಕ್ಕಿತು.
Related Articles
Advertisement
ಎಲ್ಲರಿಗೂ ಆಶ್ಚರ್ಯವಾಯಿತು. “ಏನಯ್ನಾ ಹೀಗೆ ಹೇಳುತ್ತಿದ್ದೀ’ ಎಂದು ಪ್ರಶ್ನಿಸಿದರು. “ನಾನೇ ನಾಳೆ ಮೊದಲ ನೆಯ ಸುಳ್ಳು ಹೇಳುತ್ತೇನೆ ಮತ್ತು ಅದಕ್ಕಾಗಿ ನಿಮ್ಮಿಂದ ವಧಿಸಲ್ಪಡುವ ಮೊದಲ ವ್ಯಕ್ತಿ ಆಗಿರುತ್ತೇನೆ’ ವಿದೂಷಕ ಪ್ರತ್ಯುತ್ತರಿಸಿದ.
“ಅರೆ ಹುಚ್ಚು ತಗಲಿ ದೆಯೇನಯ್ಯ’ ಎಂದು ಎಲ್ಲರೂ ಒಕ್ಕೊರಲಾಗಿ ಕೇಳಿದರು. “ಅದೇನೋ ನನಗೆ ಗೊತ್ತಿಲ್ಲ. ನಾಳೆ ಬೆಳಗ್ಗೆ ನೇಣುಗಂಬ ಮಾತ್ರ ಸಿದ್ಧವಾಗಿರಲಿ’ ಎಂದು ಹೇಳಿ ವಿದೂಷಕ ಹೊರಟುಹೋದ.
ಮರುದಿನ ಬೆಳಗಾಯಿತು. ಎಲ್ಲರೂ ಬೇಗನೆ ಎದ್ದು ಇದೇನು ವಿಚಿತ್ರ ನಡೆಯಲಿದೆ, ನೋಡಿಯೇ ಬಿಡೋಣ ಎಂದು ಪೇಟೆಯ ಮಧ್ಯದಲ್ಲಿ ಹಾಜ ರಾದರು. ನೇಣುಗಂಬ ಸಿದ್ಧವಾಗಿತ್ತು. ಊರಿನ ಹೆಬ್ಟಾಗಿಲು ತೆರೆದಾಗ ವಿದೂಷಕ ಒಂದು ಕತ್ತೆಯ ಮೇಲೇರಿ ಒಳಗೆ ಬಂದ. “ಎಲ್ಲಿಗೆ ಹೋಗುತ್ತಿದ್ದೀಯಯ್ಯ’ ಎಂದು ಅರಸ ಪ್ರಶ್ನಿಸಿದ.
“ನಾನು ನೇಣುಗಂಬದತ್ತ ಹೋಗುತ್ತಿ ದ್ದೇನೆ’ ಎಂದ ವಿದೂಷಕ.
ಎಲ್ಲರೂ ಅವಾಕ್ಕಾದರು. ವಿದೂಷಕ ವಿಚಿತ್ರ ಸಮಸ್ಯೆಯೊಂದನ್ನು ಸೃಷ್ಟಿಸಿದ್ದ. “ನಾನು ನೇಣುಗಂಬದತ್ತ ಹೋಗುತ್ತೇನೆ. ನನ್ನನ್ನು ನೇಣಿಗೇರಿಸಿ’ ಎನ್ನುವ ಅವನ ಮಾತು ನಿಜ. ಅವನನ್ನು ನೇಣಿಗೇರಿಸಿದರೆ ಸತ್ಯ ಹೇಳಿದ್ದಕ್ಕಾಗಿ ಕೊಂದಂತೆ ಆಗುತ್ತದೆ. ಕೊಲ್ಲದೆ ಇದ್ದರೆ ಅವನಾಡಿದ ಮಾತು ಸುಳ್ಳಾಗುತ್ತದೆ, ಸುಳ್ಳಾಡಿದವನಿಗೆ ಶಿಕ್ಷೆ ಕೊಡದ ಹಾಗಾಗುತ್ತದೆ!
ಅರಸನಿಂದಾದಿಯಾಗಿ ಎಲ್ಲೆಲ್ಲೂ ಮೌನ ತಾಂಡವವಾಡಿತು. ಈ ಸಮಸ್ಯೆಗೆ ಪರಿಹಾರ ಏನು ಎಂಬುದು ಹೊಳೆಯದೆ ಎಲ್ಲರೂ ನಿಬ್ಬೆರಗಾದರು. ವಾಸ್ತವದ ಚಾಟಿಯೇಟಿಗೆ ಅಸಹಾಯರಾದರು. ಈಗ ವಿದೂಷಕ ಗಹಗಹಿಸಿ ನಕ್ಕ. “ನೀವೆಲ್ಲರೂ ಮೂರ್ಖರು. ಸುಳ್ಳು, ಕಪಟ ಎಲ್ಲವೂ ಬದುಕಿನ ಅವಿಭಾಜ್ಯ ಅಂಗಗಳು. ಸತ್ಯ ಮತ್ತು ಸುಳ್ಳು ಒಂದೇ ನಾಣ್ಯದ ಎರಡು ಮುಖಗಳು’ ಎಂದು ಎಲ್ಲರ ಕಣ್ತೆರೆಸಿದ.
(ಸಾರ ಸಂಗ್ರಹ)