Advertisement

ಇಬ್ಬರು ಕೊಲೆ ಅಪರಾಧಿಗಳಿಗೆ ಜೀವಾವಧಿ, ತಲಾ 2,000 ದಂಡ

12:03 PM Jan 31, 2018 | udayavani editorial |

ಮುಜಫ‌ರನಗರ : ಮುಜಫ‌ರನಗರ ಜಿಲ್ಲೆಯಲ್ಲಿ 2010ರಲ್ಲಿ ಹಣದ ವಿವಾದದಲ್ಲಿ ಅಂಗಡಿ ಮಾಲಕ ತೇಜ್‌ಪಾಲ್‌ ಎಂಬವರನ್ನು  ಕೊಂದಿದ್ದ ಇಬ್ಬರು ಕೊಲೆ ಆರೋಪಿಗಳಿಗೆ ಕ್ಷಿಪ್ರ ವಿಚಾರಣೆ ನ್ಯಾಯಾಲಯ ಜೀವಾವಧಿ ಜೈಲು ಶಿಕ್ಷೆಯನ್ನು ವಿಧಿಸಿದೆ.

Advertisement

ಕೊಲೆ ಅಪರಾಧಿಗಳಾದ ಅಖೀಲೇಶ್‌ ಮತ್ತು ಕಮಲ್‌ ಎಂಬೀರ್ವರಿಗೆ ನ್ಯಾಯಾಧೀಶೆ ಪೂನಂ ರಜಪೂತ್‌ ಅವರು ತಲಾ 2,000 ರೂ.ದಂಡವನ್ನೂ ವಿಧಿಸಿ ತೀರ್ಪು ನೀಡಿದರು. 

ಇದೇ ಕೊಲೆ ಪ್ರಕರಣದ ಇನ್ನೋರ್ವ ಆರೋಪಿ ಯೋಗೀಶ್‌ ಎಂಬಾತ ಈ ವರೆಗೂ ತಲೆಮರೆಸಿಕೊಂಡಿದ್ದಾನೆ. ಆತನಿಗೆ ನ್ಯಾಯಾಲಯ ಜಾಮೀನು ರಹಿತ ವಾರೆಂಟ್‌ ಜಾರಿ ಮಾಡಿತು.

Advertisement

Udayavani is now on Telegram. Click here to join our channel and stay updated with the latest news.

Next