Advertisement
ಅವಮಾನ, ಹತಾಶೆ, ಸೋಲು, ಖಿನ್ನತೆ ಮನುಷ್ಯನಿಗೆ ಮಾನಸಿಕವಾಗಿ ಕಾಡುತ್ತದೆ ಇವುಗಳಿಂದ ಆತ ದುರ್ಬಲನಾಗುತ್ತಾನೆ. ಇಂಥ ಸಮಯದಲ್ಲಿ ಮನುಷ್ಯನಿಗೆ ಆತನ ಯೋಚನೆಯೇ ಆತನ ಬದುಕು ರೂಪಿಸಲು ಸಹಕಾರಿಯಾಗುತ್ತದೆ.
Related Articles
Advertisement
ಥೋಮಸ್ ಬೆಳೆಯುತ್ತಾ ಹೋದ ಹಾಗೆ ಆತನ ವರ್ತನೆ, ನಡವಳಿಕೆಯಲ್ಲಿ ಹೆಣ್ಣು ಸ್ವಭಾವ ಕಾಣಿಸಿಕೊಳ್ಳುತ್ತದೆ. ಆತನ ರುಚಿ, ಅಭಿರುಚಿ, ಆಯ್ಕೆ, ಆದ್ಯತೆಯೆಲ್ಲಲ್ಲಾ ಹೆಣ್ಣಿನ ವರ್ತನೆ ತುಂಬಿಕೊಳ್ಳುತ್ತದೆ. ದಿನಕಳೆದು , ವರ್ಷಗಳು ಉರುಳಿದಾಗ, ಥೋಮಸ್ ಗೆ ತಾನು ಬೇರೆ ಹುಡುಗರ ಥರ ಇಲ್ಲ ಎನ್ನುವುದು ತಿಳಿಯುತ್ತದೆ. ಆದರೆ ಅಮ್ಮನಿಗೆ ಹೇಳದೇ ಭಯದಿಂದಲೇ ಬೆಳೆಯುತ್ತಾನೆ.
ಥೋಮಸ್ ಬೇಕರಿಗೆ ಕೆಲಸಕ್ಕೆ ಹೋಗುತ್ತಿದ್ದ ದಿನಗಳವು. ಅದೊಂದು ದಿನ ಸಲ್ಮಾ ಎನ್ನುವ ಮಂಗಳಮುಖಿವೊಬ್ಬರು ಥೋಮಸ್ ಗೆ ಪರಿಚಯವಾಗುತ್ತಾರೆ. ಈ ಪರಿಚಯವೇ ಮುಂದೆ ಜೋಯಾ ಥೋಮಸ್ ಲೋಬೋ ಆಗಿ ಪರಿವರ್ತನೆಯಾಗಲು ಕಾರಣವಾಗುತ್ತದೆ.
ಥೋಮಸ್ ಜೋಯಾಳಾಗುತ್ತಾಳೆ. ಮಂಗಳಮುಖಿ ಸಮುದಾಯ ಆತನನ್ನು, ಆಕೆಯೆಂದು ಒಪ್ಪಿಕೊಂಡು,ಅವರ ಹಾಗೆ, ಚಪ್ಪಳೆ,ನಡಿಗೆ,ವರ್ತನೆ,ಸಂಪ್ರದಾಯವನ್ನು, ಉಡುಗೆ-ತೊಡಗೆಯನ್ನು ಕಲಿಸುತ್ತಾರೆ. ಮುಂದೆ ಥೋಮಸ್ ಈ ವಿಷ್ಯವನ್ನು ಅಮ್ಮನ ಬಳಿ ಹೇಳಿದಾಗ, ಅಮ್ಮ ಅವಳನ್ನು ಮೂರು ತಿಂಗಳು ಮನೆಯೊಳಗೆ ಸೇರಿಸಿರಲಿಲ್ಲ.
ಮೊದಲ ಬಾರಿ ಜೋಯಾ ರೈಲಿನಲ್ಲಿ ಭಿಕ್ಷೆ (magthi) ಬೇಡಲು ಹೋದಾಗ,ಅವಳು ದಾರಿ ತಪ್ಪಿ ಮೈ ಮಾರಿಕೊಳ್ಳಬಹುದೆನ್ನುವ ಭಯದಿಂದ ಜೋಯಾಳ ಅಮ್ಮ ಅವಳು ರೈಲಿನಲ್ಲಿ ಹೋದಾಗ ಅವಳನ್ನು ತೀಕ್ಷ್ಣವಾಗಿ ಗಮನಿಸುತ್ತಾರೆ.
2016 ರಲ್ಲಿ ಜೋಯಾಳ ತಾಯಿ ತೀರಿ ಹೋದ ಮೇಲೆ, ಜೋಯಾ ಮತ್ತೆ ರೈಲಿನಲ್ಲಿ ಭಿಕ್ಷೆ ಬೇಡುವುದನ್ನು ಮುಂದುವರೆಸುತ್ತಾರೆ. ಬೇರೆ ಬೇರೆ ರೈಲಿನಲ್ಲಿ ಹೋಗಿ ಭಿಕ್ಷೆ ಬೇಡುತ್ತಾರೆ. ದಿನಕ್ಕೆ ಕಮ್ಮಿಯಂದ್ರೆ 500- 600 ರೂಪಾಯಿಯನ್ನು ಭಿಕ್ಷೆಯ ಮೂಲಕ ದುಡಿದು ಒಟ್ಟು ಮಾಡುತ್ತಾರೆ.
ಫೋಟೋಗ್ರಾಫಿಯ ಬಗ್ಗೆ ಆಸಕ್ತಿ ಹೊಂದಿದ್ದ ಜೋಯಾ, ಹತ್ತು ವರ್ಷದಿಂದ ಒಟ್ಟು ಮಾಡಿದ ಹಣದಿಂದ ಒಂದು ಸೆಕೆಂಡ್ ಹ್ಯಾಂಡ್ ಕ್ಯಾಮಾರಾ ಖರೀದಿಸುತ್ತಾರೆ. ಪ್ರತಿನಿತ್ಯ ಏನಾದರೂ ಕ್ಲಿಕ್ಕಿಸುತ್ತಾ ಇರುತ್ತಾರೆ.
ಅದು 2020 ರ ಲಾಕ್ ಡೌನ್ ಸಮಯ. ಭಿಕ್ಷೆ ಬೇಡುವುದು ಬಿಡಿ. ಜೋಯಾಳಂಥವರಿಗೆ ಸರಿಯಾದ ಊಟವೂ ಸಿಗದಂಥ ಕ್ರೂರಿ ಕೋವಿಡ್ ನ ಕರಾಳ ಕಾಲವದು. ಅದೊಂದು ದಿನ ಜೋಯಾ ಬಾಂದ್ರಾ ನಿಲ್ದಾಣದ ಬಳಿ ಸಾವಿರಾರು ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದನ್ನು ನೋಡುತ್ತಾರೆ. ಕಾರ್ಮಿಕರ ಹಸಿವಿನ ಹರಸಾಹಸವನ್ನು, ಆಕ್ರೋಶವನ್ನು ಕ್ಯಾಮಾರದಲ್ಲಿ ಸರೆ ಹಿಡಿಯಲು ಮನೆಗೆ ಓಡಿ ಕ್ಯಾಮಾರವನ್ನು ಹಿಡಿದು ಆ ಚಿತ್ರಣವನ್ನು ಸೆರೆ ಹಿಡಿಯುತ್ತಾರೆ. ಅದನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಮಾಡುತ್ತಾರೆ.
ಇದಾದ ಕೆಲವೇ ಕ್ಷಣಗಳಲ್ಲಿ ಜೋಯಾ ಅವರ ಪೋಟೋಗಳು ವೈರಲ್ ಆಗುತ್ತವೆ. ಮರುದಿನ ಮುಂಬಯಿ ಮಿರರ್, ಹಿಂದೂಸ್ತಾನ್ ಟೈಮ್ಸ್ ನಂಥ ಹಲವು ಜನಪ್ರಿಯ ಪತ್ರಿಕೆಗಳಲ್ಲಿ ವೈಬ್ ಸೈಟ್ ನಲ್ಲಿ ಜೋಯಾ ಅವರ ಹೆಸರಿಗೆ ಕೃಪೆ ನೀಡುತ್ತಾ ಪೋಟೋಗಳು ಪ್ರಕಟಗೊಳ್ಳುತ್ತವೆ. ಇದಾದ ಬಳಿಕವೂ ಜೋಯಾ ತಮ್ಮ ಭಿಕ್ಷೆಯ ವೃತ್ತಿಯನ್ನು ಮುಂದುವರೆಸುತ್ತಾರೆ.