ಚಾಮರಾಜನಗರ: ಕೌಶಲ್ಯ ತರಬೇತಿಗಳು ಜೀವನಕ್ಕೆ ದಾರಿ ದೀಪವಾಗಲಿದ್ದು ಸಂಘ ಸಂಸ್ಥೆ ಹಾಗೂ ಸರ್ಕಾರಗಳು ನೀಡುವ ತರಬೇತಿ ಪಡೆದರೆ ಸ್ವಂತ ಜೀವನ ರೂಪಿಸಿಕೊಳ್ಳ ಬಹುದು ಎಂದು ಜಿಪಂ ಸಿಇಒ ಕೆ.ಎಂ.ಗಾಯತ್ರಿ ತಿಳಿಸಿದರು.
ತಾಲೂಕಿನ ಇರಸವಾಡಿಯ ಉಪ್ಪಾರಸಮುದಾಯ ಭವನದಲ್ಲಿ ನಡೆದ ಜೀವನಾಧಾರಿತ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಾವುದೇ ತರಬೇತಿ ಜೀವನಕ್ಕೆ ದಾರಿಯಾಗಲಿದೆ. ತರಬೇತಿಯಲ್ಲಿ ಭಾಗವಹಿಸಿಹೆಚ್ಚಿನ ಮಾಹಿತಿ ತಿಳಿದುಕೊಳ್ಳ ಬಹುದು. ಗ್ರಾಮಿಣ ಮಟ್ಟದಲ್ಲಿ ಹಲವಾರು ಪ್ರತಿಭೆವುಳ್ಳ ಹೆಣ್ಣು ಮಕ್ಕಳು ಇದ್ದು ಅವರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಿ ಅವರು ಜೀವನಕ್ಕೆ ಆಧಾರವಾಗಿ ನಿಂತುಕೊಳ್ಳಲುಒಡಿಪಿ ಸಂಸ್ಥೆ ತರಬೇತಿ ನೀಡುತ್ತಿದೆ. ಇದರಲ್ಲಿತರಬೇತಿ ಪಡೆದ ಹೆಣ್ಣು ಮಕ್ಕಳು ಸ್ವಂತ ಉದ್ಯಮ ನಡೆಸುತ್ತಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮೈಸೂರು ಒಡಿಪಿ ಸಂಸ್ಥೆಯ ನಿರ್ದೇಶಕ ಅಲೆಕ್ಸ್ ಪ್ರಶಾಂತ್ ಸಿಕ್ವೆರಾ ಮಾತನಾಡಿ,ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಿಜೀವನ ನಡೆಸಲು ಕೌಶಲ್ಯ ಅಭಿವೃದ್ಧಿ ತರಬೇತಿ ಬಹಳ ಮುಖ್ಯ ಎಂದು ತಿಳಿಸಿದರು.
ಸ್ವಯಂ ಉದ್ಯೋಗವಿರಲಿ: ಚಾಮರಾಜನಗರನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕಿ ಹಿತಾ ಸುವರ್ಣ ಮಾತನಾಡಿ, ಮಹಿಳೆಯರುನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು. ಸರ್ಕಾರನೀಡುವ ಸೌಲಭ್ಯ ಪಡೆದುಕೊಂಡು ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳಬೇಕೆಂದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಶ್ರೀಕಾಂತ್,ಅಂಬೇಡ್ಕರ್ ನಿಗಮದ ವ್ಯವಸ್ಥಾಪಕ ಸಿ.ರಾಜು,ಕಾರ್ಯಕ್ರಮ ಸಂಯೋಜಕ ಸುರೇಶ್, ಗ್ರಾಪಂಅಧ್ಯಕ್ಷೆ ರಾಜೇಶ್ವರಿ, ಸದಸ್ಯ ರಂಗಸ್ವಾಮಿ, ಪಿಡಿಒನಾಗರಾಜು, ಒಡಿಪಿ ಸಂಯೋಜಕರಾದ ಸುನೀತಾ,ಲಲಿತಾ, ವಲಯ ಸಂಯೋಜಕ ಸಿದ್ದರಾಜು, ಕಾರ್ಯಕರ್ತೆ ಸರೋಜಾ ಮತ್ತಿತರರಿದ್ದರು.