ಸಿಂಧನೂರು: ದ್ವೇಷ, ಅಸೂಯೆ ಅಳಿಸಿ ಪರಸ್ಪರ ಪ್ರೀತಿ, ಸ್ನೇಹ, ವಿಶ್ವಾಸ ಹೆಚ್ಚಿಸುವ ಕೆಲಸದಲ್ಲಿ ಸ್ಕೌಟ್ಸ್- ಗೈಡ್ಸ್ ಸಂಸ್ಥೆಯ ಪಾತ್ರ ಹಿರಿದಾಗಿದೆ ಎಂದು ಗೈಡ್ಸ್ ವಿಭಾಗದ ಜಿಲ್ಲಾ ಸಹಾಯಕ ಆಯುಕ್ತೆ ಸೀಮಾ ಜೆ. ಹೇಳಿದರು.
ನಗರದ ಉಪ್ಪಾರವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಭಾರತ್ ಸ್ಕೌಟ್ಸ್-ಗೈಡ್ಸ್ ಸ್ಥಳೀಯ ಸಂಸ್ಥೆ ಕಾರ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಲಾರ್ಡ್ ಬೆಡನ್ ಪವೆಲ್ ಜನ್ಮದಿನ ನಿಮಿತ್ತ “ವಿಶ್ವ ಚಿಂತನಾ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.
ಪ್ರತಿಯೊಂದಕ್ಕೂ ನಾವು ಸದಾ ಸಿದ್ಧ ಎಂಬ ಸ್ಪಧಾತ್ಮಕ ಮನೋಭಾವ ಗೈಡ್ಸ್ ನಲ್ಲಿ ಕಲಿಸಲಾಗುತ್ತಿದೆ ಎಂದರು.
ಸಂಸ್ಥೆ ಉಪಾಧ್ಯಕ್ಷ ಆರ್.ಸಿ. ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದ ಸೇವಾ ಸಂಸ್ಥೆಯಲ್ಲಿ ನಾವೆಲ್ಲ ಭಾಗವಹಿಸಿ ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣ ಹಾಗೂ ಅವರಿಗೆ ಸಾಮಾಜಿಕ ಜೀವನದ ಉತ್ತಮ ಮೌಲ್ಯ ತಿಳಿಸುತ್ತಿದ್ದು, ಇದೊಂದು ಒಳ್ಳೆಯ ಕಾರ್ಯ ಎಂದರು.
ಮುಖ್ಯ ಶಿಕ್ಷಕ ಅಂಬಣ್ಣ, ಸ್ಕೌಟ್ಸ್ ವಿಭಾಗದ ಜಿಲ್ಲಾ ಸಹಾಯಕ ಆಯುಕ್ತ ಬೀರಪ್ಪ ಶಂಭೋಜಿ, ಕೋಶಾಧ್ಯಕ್ಷ ಎನ್.ಬಿ. ಜೋಶಿ, ಸ್ಕೌಟ್ಸ್ ಮಾಸ್ಟರ್ ಶಂಕರದೇವರು ಹಿರೇಮಠ, ದುರುಗಪ್ಪ ಗುಡದೂರು, ಶಿಕ್ಷಕಿ ಕವಿತಾ ಹೊಳಿಯಪ್ಪ ಇದ್ದರು.