ಇದು ಮೊದಲ ಸಲವೇನೂ ಅಲ್ಲ, ಇಂಥ ಬೋಗಿಗಳಲ್ಲಿನ ಪಯಣ.
Advertisement
ತಿರುವನಂತಪುರದಿಂದ ಮಂಗಳೂರಿಗೆ ದಿನವೂ ಬಂದು ಸೇರುವ ಮೂರು ರೈಲುಗಳ ಕಾದಿರಿಸದ ದರ್ಜೆಯ, ಅದರಲ್ಲೂ 7-8 ಗಂಟೆಗಳ ಪ್ರಯಾಣ ಅತ್ಯಂತ ತ್ರಾಸದಾಯಕ. ಮಾರ್ಗ ಮಧ್ಯದ ಯಾವುದೇ ಜಾಗದಿಂದ ಹತ್ತಿದರೂ ಸರಿ, ರೈಲು ಏರುವುದಲ್ಲ, ನುಗ್ಗುವುದು. ಕಾಲಿಡಲೂ ಆಗದಂತೆ ಜನರು. ನಾಲ್ಕು ಜನರ ಆಸನದಲ್ಲಿ ಆರು-ಏಳು ಜನರು. ಓಣಿಯಲ್ಲಿ, ಮೆಟ್ಟಿಲಲ್ಲಿ, ಶೌಚಾಲಯದ ಬಳಿ ಕೂತು-ನಿಂತ ಪ್ರಯಾಣಿಕರು. ಅದೆಷ್ಟೋ ಸಲ ತೇಲಿ ಬರುವ ದುರ್ವಾಸನೆ. ಕುಳಿತರೂ ಅರ್ಧಂಬರ್ಧ. ಮತ್ತೂಂದೆಡೆ ಕಣ್ಣೆಳೆದು ಬರುವ ನಿ¨ªೆ. ಬಹುಶಃ ದೇಶದ ಯಾವುದೇ ಭಾಗಗಳ ಎಲ್ಲ ರೈಲುಗಳಲ್ಲೂ ಇದೇ ಕತೆ.
ನೆಲದಲ್ಲಿ ಕುಳಿತ ಐದು-ಆರು ಜನ ಒಂದೇ ಕುಟುಂಬದವ ರಿರಬೇಕು. ಹೆಂಗಸರು, ಮಕ್ಕಳು. ಎಡಕ್ಕೆ ತಿರುಗಿ ನೋಡುತ್ತೇನೆ- ಕಿಟಿಕಿಯ ಬದಿಯ ಕೇವಲ ಒಬ್ಬೊಬ್ಬ ಪ್ರಯಾಣಿಕ ಆಚೆ-ಈಚೆ ಮುಖ ಮಾಡಿ ಕುಳಿತವರ ಮಧ್ಯದ ನೆಲದಲ್ಲಿ ಎಂಟು-ಹತ್ತು ವರ್ಷದ ಬಾಲಕಿಯೊಬ್ಬಳು ಕಣ್ಣು ಪಿಳಿಪಿಳಿ ಮಾಡುತ್ತ ಕುಳಿತಿ¨ªಾಳೆ! ಮಕ್ಕಳಂತೂ ಈಗಾಗಲೇ ಓಣಿಯÇÉೇ ಮಲಗಿ ಅರ್ಧ ನಿದ್ರಾವಸ್ಥೆಯಲ್ಲಿ¨ªಾರೆ ಹೆಂಗಸರಿಗೂ ತೂಕಡಿಕೆ. ನನ್ನಂತೆ ನಿಂತ ಇನ್ನೂ ಅನೇಕರು.
Related Articles
Advertisement
ಇಂಜಿನಿನ ನೇರ ಹಿಂದೆ ಮೊದಲ ಬೋಗಿ. ಭಡ-ಭಡ ಸದ್ದಿನ ನಡುವೆ ಕಳೆದುಹೋದ ಹಲವು ನಿಲ್ದಾಣಗಳು. ಅರೆಬರೆ ನಿ¨ªೆ ಕೆಲವರದು. ಒತ್ತೂತ್ತಾಗಿ ಕುಳಿತಿದ್ದರೂ ಇನ್ನೂ ಹಲವರಿಗೆ ಗಾಢನಿದ್ರೆ. ಪ್ರಖರವಾಗಿ ಉರಿಯುವ ಬೆಳಕು. ನಮ್ಮ ಸಾಮಾನು, ಚೀಲ ಕದಿಯುತ್ತಾರೆ ಎಂಬ ಭಯವಂತೂ ಇಲ್ಲ.
ನಾಲ್ಕು ವರ್ಷಗಳ ಹಿಂದಿನ ಇಂತಹುದೇ ಪ್ರಯಾಣದ ನೆನಪು ಬಂತು. ಅದು ಮಂಗಳೂರಿನಿಂದ ಕೇರಳದ ಕಣ್ಣೂರಿಗೆ ಹೊರಡುವ ಸಂಜೆ ನಾಲ್ಕೂವರೆಯ ಸಾಧಾರಣ ರೈಲು. ಪ್ರತಿ ನಿಲ್ದಾಣದಲ್ಲೂ ನಿಲುಗಡೆ. ಮಂಗಳೂರಿನ ಶಾಲೆ, ಕಾಲೇಜು, ಆಸ್ಪತ್ರೆಗಳ ಓಡಾಟಕ್ಕೆಂದೇ ಉತ್ತರ ಕೇರಳದವರಿಗೆ ಹೇಳಿ ಮಾಡಿಸಿದ ರೈಲು. ಕಾಸರಗೋಡಿನ ಸರಕಾರೀ ನೌಕರರಿಗೂ ಇದು ಅತೀ ಉಪಯುಕ್ತ. ಮೂರು-ನಾಲ್ಕು ತಿಂಗಳು ಇದರÇÉೇ ಹೋಗಿ ಬರುತ್ತಿ¨ªೆ. ದಟ್ಟಣೆ ಮಾತ್ರ ಇಷ್ಟಿಲ್ಲ. ಹೊರಡುವಾಗಲೇ ಆಸನಗಳು ಹೆಚ್ಚುಕಡಿಮೆ ಭರ್ತಿ. ಗುಂಪು ಗುಂಪಾಗಿ ಬರುವ ವಿದ್ಯಾರ್ಥಿಗಳು. ಆಸ್ಪತ್ರೆಗಳ ರಿಪೋರ್ಟ್ ಹಿಡಿದು ಬರುವ ರೋಗಿಗಳು, ಜೊತೆಯವರು. ಅನೇಕ ಸಲ ನೋಡುತ್ತಿ¨ªೆ, ಆಸ್ಪತ್ರೆಯಿಂದ ಬಂದ ಕುಟುಂಬಗಳು ಆಚೆ-ಈಚೆ ಕುಳಿತು ಹರಟುತ್ತಾರೆ. ಒಬ್ಬರು, “”ಈ ಆಸ್ಪತ್ರೆ, ಇಂಥ ವೈದ್ಯರು, ಇಂದು ಸ್ಕ್ಯಾನಿಂಗ್” ಎಂದೆಲ್ಲ ಹೇಳಿದರೆ ಮತ್ತೂಬ್ಬರು “”ನನ್ನ ಇಂಥವರಿಗೂ ಹೀಗೇ ಆಗಿತ್ತು. ಈಗ ಪರವಾಗಿಲ್ಲ” ಎನ್ನುತ್ತಿದ್ದರು. “ಓ… ಈ ರೋಗ ಗುಣವಾಗಲು ಹೀಗೂ ಮಾಡಬಹುದು” ಎಂದು ಇನ್ನೊಬ್ಬರು. ಆಪ್ತ ಸಲಹೆಯ ಯಾವುದೇ ತರಗತಿಗೆ ಹೋಗದವರು, ಗೊತ್ತಿರುವ ವಿವರಗಳು, ಅನುಭವದ ಗಟ್ಟಿತನ, ಕಳಕಳಿಯ ವಿನಿಮಯಗಳು. ಇಳಿದು ಹೋಗುವಾಗ ಅದೆಷ್ಟೋ ಸಲ ಅವರ ಹೆಸರೋ, ಮನೆಯೋ ಗೊತ್ತೇ ಇಲ್ಲ ! ಒಂದು ಸಲ ಒಬ್ಬರ ಕೈಯಿಂದ ಬಿಸಿ ಕಾಫಿ ಇನ್ನೊಬ್ಬ ವಿದ್ಯಾರ್ಥಿನಿಯ ಸಮವಸ್ತ್ರಕ್ಕೆ ಚೆಲ್ಲಿತ್ತು. “”ಅಯ್ಯೋ, ಸುಟ್ಟಿತೇ? ತಗೊಳ್ಳಿ, ಸ್ವಲ್ಪ ನೀರಿನಿಂದ ಒರೆಸಿ” ಆಕೆ ಹೇಳಿದ್ದಳು. “”ಅದೇನೂ ತೊಂದರೆ ಇಲ್ಲ. ಮನೆಗೆ ಹೋಗಿ ಒಗೆಯುತ್ತೇನೆ. ಇದೇನೂ ವಿಷಯವೇ ಅಲ್ಲ” ಎಂದು ಆ ವಿದ್ಯಾರ್ಥಿನಿ. “”ಇನ್ನೇನು ನನ್ನ ನಿಲ್ದಾಣ ಬಂತು. ನೀವು ಕೂರಿ” ಎಂದು ಆತ. “”ಕೊಡಿ, ನಿಮ್ಮ ಚೀಲ ನಾನು ಇಟ್ಟುಕೊಳ್ಳುತ್ತೇನೆ. ಹೇಗೂ ಕೂತೇ ಇದ್ದೇನಲ್ಲ” ಎಂದು ಈಕೆ ನಿಂತವರಿಗೆ ಹೇಳುತ್ತಾಳೆ. ಹೊರಗೆ ನೋಡುತ್ತಿ¨ªೆ-ಕಡುಗೆಂಪು ಸೂರ್ಯ ಕಡಲಲ್ಲಿ ಮುಳುಗುತ್ತಿದ್ದ. ಬಾನೆÇÉಾ ರಂಗು ರಂಗು. ಮೊನ್ನೆ ಬೆಂಗಳೂರಿಗೆ ಅಕ್ಕನ ಮನೆಗೆ ಹೋಗಿ¨ªೆ. ಸಂಬಂಧಿಕರ ಮನೆಗೆ ನಾವು ಹೋದದ್ದು ಟ್ಯಾಕ್ಸಿಯÇÉಾದರೂ ಹಿಂತಿರುಗಿದ್ದು ಮಹಾನಗರಪಾಲಿಕೆಯ ಸಾರಿಗೆ ಬಸ್ಸಿನಲ್ಲಿ. ನಿಂತೇ ಇ¨ªೆವು. ಐದು ನಿಮಿಷ ಕಳೆದಿಲ್ಲ, ಅಕ್ಕನ ನಾಲ್ಕನೆಯ ತರಗತಿಯ ಮಗ ಕಿರಿಕಿರಿ ಮಾಡತೊಡಗಿದ. ಅದೇನೋ ಇರುಸುಮುರುಸು. “”ನೋಡು, ಬದಿಯಲ್ಲಿ ಇವರ ಜೊತೆ ಕೂತುಕೋ” ಎಂದ ಅಕ್ಕ. ಇವನು ಹೋಗಲೇ ಇಲ್ಲ. ಇಪ್ಪತ್ತು ನಿಮಿಷದ ಅವಧಿಯ ಪ್ರಯಾಣದುದ್ದಕ್ಕೂ ಅವನ ಸ್ಥಿತಿ ಅದೇ ಇತ್ತು. ಮನೆಗೆ ನಡೆಯುತ್ತಿ¨ªಾಗ ಅಕ್ಕ ಹೇಳಿದಳು, “”ಅವನು ಜನ ಸೇರುವಲ್ಲಿ ಹಾಗೆಯೇ. ಕಿರಿಕಿರಿ ಮುಗಿಯದ್ದು”. ಆದರೆ, ಅವನು ಅತ್ಯಂತ ಬಹಿರ್ಮುಖ ವ್ಯಕ್ತಿತ್ವದ ಹುಡುಗ. ತುಂಬಾ ಸ್ನೇಹಿತರು. ಮನೆಯ ಹತ್ತಿರ ಬಂದಂತೆಯೇ ಈ ಹುಡುಗ ಅÇÉೇ ಆಟವಾಡುತ್ತಿದ್ದ ಹುಡುಗರಲ್ಲಿ ಒಬ್ಬನಾದ. ಅವನಿಗೆ ಶಾಲೆಗೆ ಹೋಗಲು ಶಾಲಾ ವಾಹನ, ಹೊರಗೆ ಹೋಗಲು ಕಾರು, ಊರಿಗೆ ಬರುವುದೂ ಕಾರÇÉೇ. ಸಾರ್ವಜನಿಕ ಸಾರಿಗೆಯ ಉಪಯೋಗವಂತೂ ಗೊತ್ತೇ ಇಲ್ಲ, ಬಹುಶಃ ಇದು ಮೊದಲ ಸಲವೋ ಏನೋ? ಕಲ್ಲಿಕೋಟೆ ನಿಲ್ದಾಣವರೆಗೂ ಹಾಗೇ ಕೂತಿ¨ªೆ. ಮೇಲಿನ ಬರ್ತಿನಿಂದ ಮಲಗಿದ್ದವನು ಇಳಿದು ಹೋದ. ಅಲ್ಲಿ ಹೋಗಿ ಮಲಗಿದ್ದೇ ತಡ, ಗಾಢ ನಿ¨ªೆ. ಒಂಬತ್ತು ಗಂಟೆಗೆ ಎದ್ದು ನೋಡುತ್ತೇನೆ, ರಾತ್ರಿಯ ಆ ಕುಟುಂಬ, ಪ್ರಯಾಣಿಕರು, ಮಕ್ಕಳು, ಆ ಪಿಳಿಪಿಳಿ ಕಣ್ಣಿನ ಹುಡುಗಿ ಎಲ್ಲರೂ ಇಳಿದು ಹೋಗಿ¨ªಾರೆ. ಬೋಗಿಯಲ್ಲಿ ಜನಸಂದಣಿ ಹೆಚ್ಚಿಲ್ಲ. ಈಗಷ್ಟೇ ಮನೆಯಿಂದ ಶುಭ್ರವಾಗಿ ಬಂದವರು. ರಾತ್ರಿಯ ಗಜಿಬಿಜಿ ಸಂಪೂರ್ಣ ಮಾಯವಾಗಿದೆ. ಬೋಗಿ ತುಂಬಾ ಬಿಸಿಲು.
ಈ ಬಸ್ಸು, ರೈಲುಗಳಲ್ಲಿ ಪ್ರಯಾಣಿಸುವ ಸಾಮಾನ್ಯರು ಸ್ಥಿತಿವಂತರಲ್ಲ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇವರೆಲ್ಲ ಸಮಾಜದ ನೋಟದಲ್ಲಿ ಯಶಸ್ವಿ ವ್ಯಕ್ತಿಗಳಲ್ಲ. ಎತ್ತರಕ್ಕೆ ಏರಿದವರೂ ಅಲ್ಲ. ಆದರೆ ಈ ಮುಗಿಯದ ಪ್ರಯಾಣಗಳು, ಬದುಕುವುದನ್ನು ಕಲಿಸಿದೆ. – ಕೃಷ್ಣಮೂರ್ತಿ ಪಿ. ಎಸ್.