Advertisement
ನೆನಪಿನ ಹೆಜ್ಜೆಗಳನ್ನು ಜಾಸ್ತಿ ಬೇಡ, ಹದಿನೈದು ವರ್ಷದ ಹಿಂದಕ್ಕೆ ಇಡಿ. ಆಗೆಲ್ಲಾ ಕಾರಲ್ಲಿ ಓಡಾಡುವುದು, 70-80ಸಾವಿರದ ಬೈಕು ಕೊಳ್ಳುವುದೇ ಲಗುÕರಿಯಾಗಿತ್ತು. ಬಿಡಪ್ಪ, ಅವನು ಕಾರು ಇಟ್ಟಿದ್ದಾನೆ, ಕಾರಲ್ಲೇ ಓಡಾಡುತ್ತಾನೆ ಅನ್ನೋ ಶ್ರೀಮಂತ ಮಾತುಗಳನ್ನು ಆಡುತ್ತಿದ್ದರು. ನಿಜ, ಕಾರು ಕೊಂಡು, ಡ್ರೈವರ್‌ನ ಇಟ್ಟು, ತಿಂಗಳಿಗೆ ಅದರ ಪೆಟ್ರೋಲಿಗೆ 10ಸಾವಿರ ಖರ್ಚು ಮಾಡುವುದು ಶ್ರೀಮಂತಿಕೆಯ ಸಂಕೇತ ಅಲ್ಲವೇ? ಬಸ್ಸು, ಆಟೋದಲ್ಲಿ ಓಡಾಡುವುದು ಆಗೆಲ್ಲಾ ಮಧ್ಯಮವರ್ಗಕ್ಕೆ ಸೇರಿದ್ದೇವೆ ಅನ್ನೋದರ ಸಂಕೇತವಾಗಿತ್ತು.
Related Articles
ಲಗ್ಸುರಿ ಅನ್ನೋ ಹಣೆ ಪಟ್ಟಿ ಯಾವಾಗಲೂ ಹಾಗೇ ಇರುತ್ತದೆ ಅಂತ ಹೇಳ್ಳೋಕ್ಕಾಗಲ್ಲ. ಇವತ್ತು, ಉಳಿತಾಯ ಅನ್ನೋದು ಇಂಥ ಲಗ್ಸುರಿ ವಸ್ತುಗಳನ್ನು ಕೊಳ್ಳುವ ವಿಚಾರದಲ್ಲೂ ಇದೆ. ಹಣ ಒಳ ಹರಿವು ಅಥವಾ ಆದಾಯ ಹೆಚ್ಚಾದಾಗ ನಮ್ಮ ಆರ್ಥಿಕ ಹಿಡಿತ ಸಡಿಲವಾಗುತ್ತದೆ. ಆಗ ಆಸೆಗಳನ್ನು, ಅಗತ್ಯಗಳನ್ನು ಪೂರೈಸಿಕೊಳ್ಳುವ ನಿಟ್ಟಿನಲ್ಲಿ ಹಣವನ್ನು ಹರಿಬಿಡುತ್ತೇವೆ. ಇವತ್ತಿನ ಬ್ಯುಸಿನೆಸ್ ಹೇಗಿದೆ ಎಂದರೆ ನಿಮ್ಮಲ್ಲಿರುವ ಆಸೆಗಳನ್ನು ಹೆಚ್ಚು ಹೆಚ್ಚು ಮಾಡಿ, ಮಾಲ್‌ಗಳಿಗೋ, ಮಲ್ಟಿಪ್ಲೆಕ್ಸ್‌ಗಳಿಗೋ ಬರುವಂತೆ ಮಾಡುವುದೂ ವ್ಯವಹಾರದ ಪ್ರಮುಖ ಭಾಗ.
Advertisement
ಉದಾಹರಣೆಗೆ- ನೀವು ಕುಕ್ಕರ್ ಕೊಳ್ಳಬೇಕು ಅಂತಿಟ್ಟುಕೊಳ್ಳಿ. ಎಲ್ಲಿ ಕಡಿಮೆಗೆ ಸಿಗುತ್ತದೆ ಅನ್ನುವ ಹುಡುಕಾಟದಲ್ಲೇ ನಿಮಲ್ಲಿ ಮತ್ತೂಂದು ಆಸೆಯನ್ನು ಜಾಹೀರಾತುಗಳು ಮೊಳೆಸುತ್ತವೆ. ನೀವು ಈ ಬಜಾರ್‌ನಲ್ಲಿ ಕಡಿಮೆಗೆ ಸಿಗಬಹುದು ಅಂತ ಹೋದರೆ, ಅಲ್ಲೊಂದು ವ್ಯವಹಾರದ ಚಕ್ರವ್ಯೂಹವಿರುತ್ತದೆ. ನಿಮ್¾ ಕುಕ್ಕರ್ ನಾಲ್ಕನೇ ಫ್ಲೋರ್ ಇರುತ್ತದೆ. ಅದನ್ನು ಕೊಳ್ಳುವ ಮೊದಲು ಬಟ್ಟೆಗಳು, ಶೂಗಳು, ಕಾಸೆ¾ಟಿಕ್‌ಗಳು ಎಲ್ಲವನ್ನೂ ಬೇಡದೇ ಇದ್ದರೂ, ನೋಡಿಕೊಂಡು ಹೋಗಿ, ಕೊನೆಯ ಫ್ಲೋರ್‌ನ ಕುಕ್ಕರ್ ಅನ್ನು ಕೊಳ್ಳಬೇಕು. ಬರುವಾಗ ಮತ್ತೆ ಇದೇ ಹಾದಿಯಲ್ಲಿ ಬರುವ ಹೊತ್ತಿಗೆ ನಿಮ್ಮ ಮನಸ್ಸಲ್ಲಿ ಕುಕ್ಕರ್ ಜೊತೆಗೆ ಮಿಕ್ಸ್ ಕೊಳ್ಳುವ ಆಸೆಯೂ ಚಿಗುರಿ, ಸಾಲವೋ, ಸೋಲವೋ ಏನಾದರೂ ಮಾಡಿ ಅದನ್ನು ಕೊಳ್ಳುತ್ತೀರಿ. ಅಂದರೆ, ಕುಕ್ಕರ್ ಕೊಳ್ಳಲು ಬಂದವರನ್ನು ಮಿಕ್ಸಿ ಕೊಳ್ಳುವಂತೆ ಮಾಡುವ ಮಾಲ್‌ಗಳು ಬ್ಯುಸಿನೆಸ್ ತಂತ್ರ ಗೆಲ್ಲುತ್ತದೆ.
ಇವತ್ತು ವೀಕೆಂಡ್‌ಗಳಲ್ಲಿ ನಗರ ಪ್ರದೇಶದ ಮಾಲ್‌ಗಳಿಗೆ ಹೋಗಿ ನೋಡಿ. ಭರ್ತಿ ಜನ. ಇವರಲ್ಲಿ ಶೇ. 80ರಷ್ಟು ಮಂದಿ ಇಂಥ ಆಸೆಗಳನ್ನು ಬೆನ್ನಟ್ಟಿಕೊಂಡು ಬಂದವರೇ ಆಗಿರುತ್ತಾರೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ನೋಡಲು ಬರುವವರ ಆರ್ಥಿಕ ಅಂತಸ್ತು, ಮಾನಸಿಕ ಸ್ಥಿತಿಯನ್ನು ಗಮನಿಸಿಯೇ ಸುತ್ತುಮುತ್ತಲಿನ ಅಂಗಡಿಗಳನ್ನು ತೆರೆಯುತ್ತಾರೆ. ಇದೂ ಕೂಡ ಬ್ಯುಸಿನೆಸ್‌ನ ಒಂದು ತಂತ್ರವೇ.
ವರ್ಷಕ್ಕೆ ಶೇ.30ರಷ್ಟು ಏರಿಕೆಒಂದು ಮೂಲದ ಪ್ರಕಾರ, ಪ್ರತಿ ವರ್ಷ ನಮಗೆ ಬೇಕೋ, ಬೇಡವೋ ಕಾಸ್ಟ್‌ಆಫ್ ಲೀವಿಂಗ್‌ನಲ್ಲಿ ಶೇ. 10ರಿಂದ 30ರಷ್ಟು ಕನಿಷ್ಠ ಏರಿಕೆ ಆಗುತ್ತಿರುತ್ತದೆ. ಕೆಲವುಸಲ ಇದು ಶೇ.50ಕ್ಕೂ ಏರಬಹುದು. ಉದಾಹರಣೆಗೆ, ತೋಗರಿಬೇಳೆಯ ಬೆಲೆ ಕಳೆದ ವರ್ಷ ಹೆಚ್ಚಾ ಕಡಿಮೆ ಶೇ. 150ರಷ್ಟು ಏರಿದೆ. ಇದೂ ಕೂಡ ನಮ್ಮ ಬದುಕಿನ ಅವಿಭಾಜ್ಯವಾಗಿರುವುದರಿಂದ ಇಂಥ ಏರಿಕೆಗಳನ್ನು ಗಣನೆಗೆ ತೆಗೆದು ಕೊಂಡರೆ ವರ್ಷಕ್ಕೆ ನಮ್ಮ ಆದಾಯದಲ್ಲಿ ಕನಿಷ್ಠ ಶೇ.20ರಷ್ಟು ಏರಿಕೆ ಕಾಣಬೇಕು. ಹೀಗಿರಬೇಕಾದರೆ, ನಮ್ಮ ಆದಾಯದ ಹರಿವನ್ನು ನೋಡಿಕೊಂಡು ಖರ್ಚನ್ನು ನಿಗದಿ ಮಾಡಬೇಕಾಗುತ್ತದೆ. ವರ್ಷದ ಏರಿಕೆ ಶೇ.10ರಷ್ಟಿದ್ದು, ವರ್ಷದ ಖರ್ಚಿನಲ್ಲಿ ಶೇ. 50ರಷ್ಟು ಹೆಚ್ಚಿದರೆ ಉಳಿತಾಯ, ಹೂಡಿಕೆ ಅನ್ನೋದೆಲ್ಲ ಹಗಲು ಗನಸಾಗುತ್ತದೆ. ಇಂಥ ಲೆಕ್ಕಾಚಾರದ ದಿನಗಳಲ್ಲಿ, ನಿಗದಿತ ಸಂಬಳ ಪಡೆಯುವವರ ಪಾಡು ಹೇಳತೀರದು. ಆಸೆ, ಆದಾಯ ಇವುಗಳ ಮಧ್ಯೆಯೇ ಅವರು ಬದುಕನ್ನು ಸವೆಸಬೇಕು. ಒಂದು ಅಂದಾಜಿನ ಪ್ರಕಾರ ಕೆಳವರ್ಗಕ್ಕೆ ವರ್ಷಕ್ಕೆ ಶೇ.5ರಷ್ಟು, ಮಧ್ಯವರ್ಗಕ್ಕೆ ಶೇ.8-10ರಷ್ಟು, ಮೇಲ್ವರ್ಗಕ್ಕೆ ಶೇ.20-25ರಷ್ಟು ವಾರ್ಷಿಕ ಆದಾಯ ಏರಿಕೆಯಾಗುತ್ತಿದೆಯಂತೆ. ಅಂದರೆ, ಒಬ್ಬ ವ್ಯಕ್ತಿಗೆ 30 ಸಾವಿರ ಸಂಬಳವಿದೆ ಎಂದರೆ, ಒಂದೂವರೆಸಾವಿರ ಏರುತ್ತದೆ ಅಂತಿಟ್ಟುಕೊಂಡರೂ ತಮ್ಮೊಳಗಿನ ಆಸೆಗಳೂ, ಜಾಹೀರಾತು ಹುಟ್ಟಿಸುವ ಆಸೆಗಳು, ಅನಿವಾರ್ಯಗಳು ಎಲ್ಲವನ್ನೂ ಸಂಭಾಳಿಸುವುದು ಇಂದಿನ ಅನಿವಾರ್ಯವೇ ಆಗಿದೆ. “ಇಲಿÅà, ಇವತ್ತು ಎಲ್ಲರನ್ನೂ ಅಮರಿಕೊಂಡಿರುವ ಬಿಪಿ. ಶುಗರ್‌ಗೆ ಕಂಪೆನಿಗಳ ಜಾಹೀರಾತುಗಳೂ ಕಾರಣ. ಅವು ಹುಟ್ಟಿಸುವ ಆಸೆಗಳ ಹಿಂದೆ ಜನ ಬಿದ್ದು ಹಣವನ್ನು ವ್ಯಯಿಸುತ್ತಾರೆ. ಮತ್ತೆ ಆಸೆ ಹೊತ್ತು ಹೆಚ್ಚು ಸಂಪಾದನೆ ಮಾಡಲು ದುಡಿಯಲು ಹೋಗಿ ನೆಮ್ಮದಿ ಕಳೆದುಕೊಳ್ಳುತ್ತಾರೆ. ನಗರ ಪ್ರದೇಶಗಳಲ್ಲಿ ಇಂಥ ಚಕ್ರ ತಿರುಗುತ್ತಲೇ ಇರುವುದರಿಂದ ಸೈಕಾಲಜಿಕಲ್ ಇಂಬ್ಯಾಲೆನ್ಸ್ ಆಗುತ್ತದೆ’ ಎನ್ನುತ್ತಾರೆ ವೈದ್ಯ ಜಿ. ಹತ್ವಾರ್. ಇದು ಕೆ.ಆರ್.ಎಸ್ ಡ್ಯಾಂ
ಆರ್ಥಿಕತೆ ಅನ್ನೋದು ಒಂದು ರೀತಿ ಕೆಆರ್‌ಎಸ್ ಡ್ಯಾಮ್ ಇದ್ದ ಹಾಗೆ. ನಮ್ಮ ಆದಾಯ ಎಂಬ ಜಲಾಶಯದಲ್ಲಿ ಎಷ್ಟು ನೀರಿ ಕಾಯ್ದಿರಿಸಿಕೊಂಡಿರುತ್ತೇವೆ, ಅದನ್ನು ಕಷ್ಟ, ಅನಿವಾರ್ಯ ಕಾಲಕ್ಕೆ ಹೇಗೆ ಬಳಸುತ್ತೇವೆ ಅನ್ನೋದರ ಮೇಲೆ ನಮ್ಮ ಸುರಕ್ಷಿತ ಬದುಕು ನಿಂತಿರುತ್ತದೆ. ಬೇಸಿಗೆ ಬರುವುದೇನೋ ಖರೆ. ಹೀಗೆ ಗೊತ್ತಿದ್ದರೂ ಮಳೆಗಾಲದಲ್ಲಿ ನೀರನ್ನು ಶೇಖರಿಸದೇ ಇರುವುದು ಮೂರ್ಖತನ. ಆದಾಯ ಹೆಚ್ಚಿಗೆ ಬಂದಾಗ ಕೈ ಮುಂದಾಗುತ್ತದೆ. ಬಂದಾಗ ಕೂಡಿಟ್ಟು, ಇಲ್ಲದಾಗ ಬಳಸುವುದು ಇದೆಯಲ,É ಅದೇ ನಮ್ಮನ್ನು ಕಷ್ಟಕಾಲದಲ್ಲಿ ಕಲ್ಲವಿಲ್ಲ ಗೊಳಿಸುವುದಿಲ್ಲ. ಹಾಗಾಗಿ ಮಾಡಬೇಕಾದ ಮೊದಲ ಕೆಲಸ ಏನೆಂದರೆ, ಜೇಬು ಎಂಬ ಡ್ಯಾಮು, ಕಣ್ಣ ಮುಂದಿನ ಅಗತ್ಯ ತುಲನೆ ಮಾಡಿ. ಅಗತ್ಯ ಎನಿಸಿದ ವಸ್ತುಗಳನ್ನು ಮಾತ್ರ ಕೊಳ್ಳುವುದು. ಉದಾಹರಣೆಗೆ- ದ್ವಿಚಕ್ರವಾಹನ ಅಥವಾ ಕಾರು ಎಂದಿಟ್ಟುಕೊಳ್ಳಿ. ಕಾರು ಬೇಕು, ಎಲ್ಲಿಂದ ಎಲ್ಲಿಗೆ ಹೋಗಲಿಕ್ಕೆ? ಆಫೀಸಿನಿಂದ ಮನೆಗೆ, ಕೊಂಡರೆ ದಿನದ ಖರ್ಚು ಬೀಳುತ್ತದೆ ಎಂಬುದನ್ನು ಎಷ್ಟು ಪಟ್ಟಿಮಾಡಿ. ಆನಂತರ ಅದರಲ್ಲಿ ಹೆಚ್ಚು ಮೈಲೇಜು ಕೊಡುವ, ಕಡಿಮೆ ಬೆಲೆಯ ಕಾರಿದೆಯಾ ನೋಡಿ. ನಿಮ್ಮ ಬಜೆಟ್ ಕೇವಲ ಒಂದು, ಎರಡು ಲಕ್ಷವಾದರೆ ಚಿಂತೆ ಇಲ್ಲ. ಸೆಕೆಂಡ್ ಹ್ಯಾಂಡ್‌ನ ಒಳ್ಳೆಯ ಕಾರು ಖರೀದಿಸುವುದೇ ಬೆಟರ್. ದ್ವಿಚಕ್ರವಾಹನ ವಿಚಾರದಲ್ಲಿ ಇದು ಸರಿಯೇ. ಏಕೆಂದರೆ, ಹೊಸ ವಾಹನ ಖರೀದಿಸಿದ ಆರಂಭದ ನಾಲ್ಕು ತಿಂಗಳು ಮೈಲೇಜು ಬರೋಲ್ಲ. ಆಗ ಪೆಟ್ರೋಲ್‌ನ್ನು ಹೆಚ್ಚು ಕುಡಿಯುತ್ತದೆ. ಆನಂತರವೇ ಮೈಲೇಜು ಶುರು. ಆ ಹೊತ್ತಿಗೆ ನಮ್ಮ ಕೈಯಿಂದ ಹೆಚ್ಚು ಕಡಿಮೆ 8-10 ಸಾವಿರ ಕೈ ಬಿಟ್ಟಿರುತ್ತದೆ. ಅದಕ್ಕೇ ಒಳ್ಳೆ ಮೈಲೇಜ್ ಕೊಡುವ ಸೆಕೆಂಡ್ ಹ್ಯಾಂಡ್ ವಾಹನ ಏಕೆ ಕೊಳ್ಳಬಾರದು? ಆಗ ನಮಗೆ ಏಕಾ ಏಕಿ ಲೀಟರ್‌ಗೆ 45 ಕಿ.ಮೀ ಸಿಕ್ಕರೂ ಸಾಕಲ್ಲವೇ? ಲೆಕ್ಕ ಹೀಗಿರಲಿ
ಅನಗತ್ಯ ತಿರುಗಾಟ, ಪ್ರವಾಸಗಳನ್ನು ಮಾಡುವ ಮುಂಚೆ ಇದು ಅಗತ್ಯವಿದೆಯಾ ಅಂತ ಯೋಚಿಸುವುದು ಒಳಿತು. ಪ್ರವಾಸ ಅನ್ನೋದು ನಮ್ಮ ಕೈಯಲ್ಲಿರುತ್ತದೆ. ದಿಢೀರ್ ಅಂತ ಪ್ರವಾಸಗಳನ್ನು ಅನಿಯೋಜಿತವಾಗಿ ಹಮ್ಮಿ ಕೊಂಡಿದ್ದೇ ಆದರೆ ಊಹಿಸುವುದಕ್ಕಿಂತ ಶೇ. 30-40ರಷ್ಟು ಹೆಚ್ಚಿಗೆ ಖರ್ಚು ಆಗಬಹುದು. ಈ ಕಾರಣಕ್ಕೆ ಪ್ರವಾಸ ಅನ್ನೋದು ಸಂತೋಷದ, ಕಾಲಹರಣ ಕೂಟ. ಈ ಕಾರಣಕ್ಕಾಗಿ ಒಂದಷ್ಟು ಹಣವನ್ನು ಎತ್ತಿಡುವುದು ಒಳಿತು. ತಿಂಗಳ ಆದಾಯದ ಶೇ. 10ರಷ್ಟನ್ನು ಪ್ರವಾಸಕ್ಕೆಂದು ಎತ್ತಿಟ್ಟು, ಆರು ತಿಂಗಳಿಗೋ, ವರ್ಷಕ್ಕೋ ಒಂದಾವರ್ತಿ ಪ್ರವಾಸಕ್ಕೆ ಹೋದರೆ ಒಳಿತು. ನೀವು ಖಾಸಗಿ ಕಂಪೆನಿಯಲ್ಲಿದ್ದರೆ ಎಲ್ಟಿಇ ಇರುತ್ತದೆ. ಇಲ್ಲವಾದರೆ ಚಿಂತೆ ಇಲ್ಲ. ಪ್ರವಾಸಕ್ಕೆಂದೇ ಚೂರು ದುಡ್ಡು ಎತ್ತಿಡಿ. ಬಳಸದೇ ಇದ್ದರೂ ವೈಫೈ ಆನ್ ಮಾಡಿರೋದು, ಅಡುಗೆ ಮನೆ ಲೈಟು ಉರಿಸುವುದು, ಬೆಡ್‌ರೂಮಿನ ಫ್ಯಾನು ಹಾಕಿ ಆಫ್ ಮಾಡಲು ಮರೆಯುವುದು, ಬೇರೆಯವರನ್ನು ಮೆಚ್ಚಿಸುವುದಕ್ಕೆ ದುಭಾರಿ ಶೂ, ಧಿರಿಸುಗಳನ್ನು ಕೊಳ್ಳುವುದು. ಇದೆಲ್ಲಾ… ಅನಿವಾರ್ಯವಲ್ಲ. ಪ್ರಸಿcàಜ್ ತೋರಿಸಲು ಬೇಕಾಗುತ್ತದೆ. ಪ್ರಸಿcàಜ್ ನಮ್ಮ ಆದಾಯದ ಹರಿವು ಜಾಸ್ತಿ ಇದ್ದಾಗ, ಅದನ್ನು ಖರ್ಚು ಮಾಡಲು ದಾರಿಯೇ ಇಲ್ಲದಾಗ ಮಾಡುವ ಕ್ರಿಯೆ. ಇಂಥ ಸಣ್ಣ ಬುದ್ಧಿವಂತಿಕೆಗಳಿಂದ ತಿಂಗಳಾವರ್ತಿ ಆದಾಯದಲ್ಲಿ ಶೇ.5,10ರಷ್ಟು ಉಳಿತಾಯ ಮಾಡಬಹುದೇನೋ. ನಗರದವರು ಹೀಗೆ
ಇವತ್ತು ನಗರ ಪ್ರದೇಶಗಳಲ್ಲಿ ವಾಸಿಸುವವರ ಆದಾಯದಲ್ಲಿ ಶೇ.30ರಷ್ಟು ಮೊತ್ತವನ್ನು ಬದಲಾಗುವ ಲೈಫ್ಸ್ಟೈಲೇ ತಿಂದು ಹಾಕಿಬಿಡುತ್ತಿದೆ. ಲೈಫ್ಸ್ಟೈಲ್ ಹೇಗಿರಬೇಕು? ಯಾವ ರೀತಿ ಅಪ್‌ಗೆÅàಡ್ ಆಗಿರಬೇಕು? ಎಲ್ಲವೂ ನಮ್ಮ ಕೈಯಲ್ಲಿದ್ದರೂ, ಜಾಹೀರಾತುಗಳು ಅವುಗಳನ್ನು ನಿಯಂತ್ರಿಸುತ್ತಿರುತ್ತದೆ. ಹೀಗಾಗಿ, ಆರ್ಥಿಕ ಸ್ಥಿತಿ ಹಳಿತಪ್ಪದ ಹಾಗೆ ನೋಡಿಕೊಳ್ಳುವುದೂ ಹಾಗೂ ಲೈಫ್ಸ್ಟೈಲ್‌ಗೆ ಹೊಂದಿಕೊಳ್ಳುವುದೂ ಈ ಎರಡೂ ಕೆಲಸ ಏಕಕಾಲಕ್ಕೆ ಆಗುತ್ತಿರಬೇಕಾದ ಅನಿವಾರ್ಯವಿದೆ. ಇದೊಂಥರಾ ಕಂಬಿಯ ಮೇಲಿನ ನಡಿಗೆಯೇ. ಹಾಗಾಗಿ, ಮೊದಲು ಇಡೀ ಕುಟುಂಬದ ಖರ್ಚಿನ ಬಗ್ಗೆ ಪ್ಲಾನು ಮಾಡಬೇಕು. ಅತ್ಯಗತ್ಯಗಳು, ಖರ್ಚು, ಉಳಿತಾಯ ಎಲ್ಲವನ್ನೂ ಲೆಕ್ಕ ಹಾಕಿ, ಉಳಿದಿದ್ದರಲ್ಲಿ ಕೊಂಡುಬಾಕರಾಗುವುದರಲ್ಲಿ ತಪ್ಪಿಲ್ಲ. ಲೈಫ್ಸ್ಟೈಲ್‌ಗೆ ತಕ್ಕಂತೆ ಬದಲಾಗುವುದೂ ತಪ್ಪೇನಲ್ಲ. ಆದರೆ ನಮ್ಮ ಆದಾಯಕ್ಕೆ ತಕ್ಕಂತ ಲೈಫ್ಸ್ಟೈಲ್ ಹೊಂದಿಸಿಕೊಳ್ಳುವುದು ಬುದ್ಧಿವಂತತನ. ಗುಲಾಮಗಿರಿ
ಬ್ಯಾಂಕ್‌ಗಳ ಸಾಲದ ಪ್ರಮಾಣ ದಿಗಿಲು ಹುಟ್ಟಿಸುತ್ತದೆ. ಏಕೆಂದರೆ, ಪೊರಕೆ, ಡಸ್ಟ್‌ಬಿನ್‌ನಿಂದ ಹಿಡಿದು ಟೂ ವ್ಹೀಲರ್, ಫೋರ್ ವೀØಲರ್ ಕೊನೆಗೆ ಮನೆ ಕೊಳ್ಳುವ ತನಕವೂ ಸಾಲ ಸಿಗುತ್ತಿದೆ. ಒಂದು ಮೂಲದ ಪ್ರಕಾರ, ಬ್ಯಾಂಕಿನ ಶೇ. 40ರಷ್ಟು ಸಾಲಗಳನ್ನು ಇಂಥವಕ್ಕೇ ನೀಡುತ್ತಿವೆಯಂತೆ. ಅಂದರೆ ಅದನ್ನು ಕನ್ಸೂಮರ್ ಲೋನ್ ಅಂತಾರೆ. ಆರ್ಥಿಕತೆಯ ದೃಷ್ಟಿಯಿಂದ ಇದು ಅಪಾಯ ಎನ್ನುವ ಮಾತೂ ಇದೆ. ಏಕೆಂದರೆ, ಬ್ಯಾಂಕಿನ ಸಾಲ ಕ್ಯಾಪಿಟಲ್ ಎಕ್ಸ್‌ಪೆಂಡೇಚರ್ ಅಂದರೆ ಫ್ಯಾಕ್ಟರಿ, ಕಂಪನಿ ತೆರೆಯುವ ಬಂಡವಾಳಕ್ಕೆ ಹೋದರೆ ದೇಶದ ಆರ್ಥಿಕ ಚೈತನ್ಯ ಜಾಸ್ತಿಯಾಗುತ್ತದೆಯಂತೆ. ಆದರೆ ಬ್ಯಾಂಕ್‌ಗಳು ಸಾಲ ಮರುಪಾವತಿ ಬಹಳ ಸುಲಭವಾಗಿ ಆಗುತ್ತದೆ ಅನ್ನೋ ಒಂದೇ ಕಾರಣಕ್ಕೆ ಗ್ರಾಹಕ ಸಾಲಗಳನ್ನು ಏರಿಸುತ್ತಿವೆ. ಇದು ಸರಿಯೇ, ಇನ್ನೊಂದು ಕಡೆ ಗ್ರಾಹಕರು ಶೇ.33ರಷ್ಟು ಬ್ಯಾಂಕ್‌ಗಳಲ್ಲಿ ಉಳಿತಾಯ ಮಾಡುತ್ತಿದ್ದರು, ಈಗ ಅದು ಶೇ.27ಕ್ಕೆ ಇಳಿದಿದೆಯಂತೆ. ಒಂದು ಕಾಲದಲ್ಲಿ ಇಡೀ ಬ್ಯಾಂಕಿಂಗ್ ವಹಿವಾಟು ನಡೆಯುತ್ತಿದ್ದುದೇ ಉಳಿತಾಯದಿಂದ. ಇವತ್ತು, ಸಾಲದ ಬಡ್ಡಿಯ ಮೇಲೆ ನಿಂತಿದೆ ಎನ್ನುವ ಅಪಸ್ವರವೂ ಕೇಳಿಬರುತ್ತಿದೆ. ಜನಗಳಲ್ಲಿ ಉಳಿತಾಯ ಮಾಡುವ ಪ್ರವೃತ್ತಿ ಕಡಿಮೆಯಾಗಲು ಈ ಆಮಿಷಗಳು, ಅದು ಹುಟ್ಟುಹಾಕುವ ಆಸೆಗಳೂ ಕಾರಣವಾಗಿದೆ. ಜನಗಳನ್ನು ಗುಲಾಮರನ್ನಾಗಿ ಮಾಡಬೇಕಾದರೆ ಅವರಿಗೆ ಸಾಲ ಕೊಟ್ಟು, ಇಎಂಐ ಕಟ್ಟಿಸಿಕೊಂಡರೆ ಸಾಕು ಎನ್ನುವ ಜೋಕು ಇಲ್ಲಿ ನಿಜವಾಗುತ್ತಿದೆ. ಏನು ಮಾಡಬೇಕು?
1) ಇಡೀ ಕುಟುಂಬದ ಆದಾಯ ಲೆಕ್ಕ ಹಾಕಿ. ಅದರಲ್ಲಿ ಮಾಸಿಕ ಖರ್ಚು, ಉಳಿಯ ಎರಡೂ ಬ್ಯಾಲೆನ್ಸ್ ಆಗುತ್ತಿದೆಯೇ ನೋಡಿ. 2) ಸಾಮಾನ್ಯವಾಗಿ ಬ್ಯಾಚುಲರ್‌ಗಳಾದರೆ ಆದಾಯದ ಶೇ. 30-40ರಷ್ಟು ಉಳಿತಾಯ ಮಾಡಲು ಅವಕಾಶವಿದೆ. ಮದುವೆ, ಮಕ್ಕಳು ಆದವರು ಇದರಲ್ಲಿ ಶೇ. 20-25ರಷ್ಟಾದರೂ ಉಳಿತಾಯ ಮಾಡಬೇಕಾಗುತ್ತದೆ. 3) ಉಳಿತಾಯ ಅನ್ನೋದು ಭವಿಷ್ಯದ ಹಿತದೃಷ್ಟಿಗೆ. ಅಲ್ಪಾವಧಿ, ದೀರ್ಘಾವಧಿ ಅಂತ ಭಾಗ ಮಾಡಿಕೊಂಡು ಉಳಿತಾಯ ಮಾಡಿ. ಚಿನ್ನ, ಷೇರು, ಮ್ಯೂಚುವಲ್ ಫಂಡ್ ಇವ್ಯಾವುದೂ ತಕ್ಷಣಕ್ಕೆ ಹಣ ತಂದು ಕೊಡದು. ಇಂಥವುಗಳು ಮಕ್ಕಳ ಮದುವೆ, ಉನ್ನತ ಓದಿಗೆ ನೆರವಾಗುತ್ತವೆ. 4) ತುರ್ತು ನಿಧಿ ಇಂದಿನ ಅನಿವಾರ್ಯ. ಇದರಲ್ಲಿ ಎರಡು ವಿಧ. ಅನಾರೋಗ್ಯ ಹಾಗೂ ಇತರೆ.
ಅನಾರೋಗ್ಯಕ್ಕೆ ವಿಮೆಗಳಿವೆ. ಮೊದಲಿನಷ್ಟು ತಲೆ ಬೇನೆ ಇಲ್ಲ. ಇತರೆ ಅಂದರೆ ಸಣ್ಣ ನೆಗಡಿ, ಕೆಮ್ಮು, ಸ್ನೇಹಿತರ, ಸಂಬಂಧಿಕರ ಮನೆಯ ಸಮಾರಂಭದ ಖರ್ಚು ಮುಂತಾದವು. 5) ಆಸೆಗಳು ಕಡಿಮೆ ಇರಲಿ. ಅನಿವಾರ್ಯತೆಗೆ ಕಟ್ಟು ಬೀಳಿ. ಆದರೆ ಅನುಕರಣೆಯಿಂದ ಆದಾಯಕ್ಕೆ ಕತ್ತರಿ ಬೀಳುತ್ತದೆ. ಇದರಿಂದ ನೆಮ್ಮದಿ ಹಾಳಾಗುತ್ತದೆ. ಉದಾಹರಣೆಗೆ- ನಿಮ್ಮ ಬಳಿ 15 ಸಾವಿರದ ಸ್ಮಾರ್ಟ್ ಫೋನ್ ಇದೆ. ಗೆಳೆಯನ ಬಳಿ ಆ್ಯಪಲ್ ಫೋನು ಇದೆ. ಆಗ ನಿಮಗೂ ಆ್ಯಪಲ್ ಫೋನು ಬೇಕು ಅಂತ ಆಸೆಯಾಗಬಹುದು. ಆದರೆ ಅದರ ಅನಿವಾರ್ಯ ಇದೆಯೇ ಮೊದಲು ಕೇಳಿಕೊಳ್ಳಿ. ಇಲ್ಲದೇ ಇದ್ದರೂ ಕೊಳ್ಳುವುದರಿಂದ ಹೊರೆ ಹೆಚ್ಚಾಗುತ್ತದೆ. – ಕಟ್ಟೆ ಗುರುರಾಜ್