Advertisement

“ಸಸ್ಯ ಸಂವರ್ಧನೆಯಿಂದ ಬದುಕು ಹಸನು’

03:45 AM Jul 10, 2017 | Team Udayavani |

ಕುಂದಾಪುರ:  ಸಸ್ಯಗಳು ಪ್ರಕೃತಿಯ ದೊಡ್ಡ ಕೊಡುಗೆ. ಸಸ್ಯ ಸಂವರ್ಧನೆಯಿಂದ ಮನುಷ್ಯನ ಬದುಕು ಹಸನಾಗುತ್ತದೆ. ಕರಾವಳಿಯು  ಸಕಲ ರೀತಿಯ ಶ್ರೇಷ್ಠ ಸಸ್ಯ ಸಂಪತ್ತನ್ನು ಒಳಗೊಂಡಿದ್ದು ಅವುಗಳ ಶಾಸ್ತ್ರೀಯ ಅಧ್ಯಯನ ಇಂದಿಗೂ ಅವಶ್ಯಕತೆಯಾಗಿದೆ ಎಂದು ಪತ್ರಕರ್ತ ಯು.ಎಸ್‌. ಶೆಣೈ ಹೇಳಿದರು.

Advertisement

ಅವರು ಭಂಡಾರ್ಕಾರ್ಸ್‌ ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದಿಂದ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕಾಲೇಜಿನ ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥ  ಪ್ರೊ|ನಾರಾಯಣ ತಂತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಎನ್‌.ಎಸ್‌.ಎಸ್‌ ಅ ಧಿಕಾರಿ ಪ್ರೊ|ರಾಮಚಂದ್ರ, ಗೋ ಗ್ರೀನ್‌ ಕ್ಲಬ್‌ ಇಅದರ್‌ ಸಂಯೋಜಕ ಪ್ರೊ| ಮಂಜುನಾಥ ಉಪಸ್ಥಿತರಿದ್ದರು.ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ  ಪ್ರೊ| ಗಾಯತ್ರಿ ಪೈ ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು.

ವಿದ್ಯಾರ್ಥಿನಿ ಚೇತನಾ ಸ್ವಾಗತಿಸಿದರು. ದಶಮಿ ವಂದಿಸಿದರು. ಸೌಮ್ಯಾ ಕಾಯಕ್ರಮ ನಿರ್ವಹಿಸಿದರು.
ನಂತರ ಕಾಲೇಜಿನ ಸಸ್ಯೋದ್ಯಾನದಲ್ಲಿ ಅತಿಥಿಗಳು ಮತ್ತು ವಿದ್ಯಾರ್ಥಿಗಳು ಸಸಿಗಳನ್ನು ನೆಟ್ಟರು. ವಿದ್ಯಾರ್ಥಿಗಳಿಗೆ ಬೀಜದುಂಡೆಗಳನ್ನು ವಿತರಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next