ಕನಕಪುರ: ರಾಸುಗಳಿಗೆ ಜೀವ ವಿಮೆ ಮಾಡಿಕೊಳ್ಳುವುದರಿಂದ ರಾಸುಗಳು ಆಕಸ್ಮಿಕ ಸಾವಿಗೀಡಾದಾಗ ಆಗುವ ನಷ್ಟವನ್ನು ತಪ್ಪಿಸಬಹುದುಎಂದು ಬೆಂಗಳೂರು ಹಾಲು ಉತ್ಪಾದಕ ಸಹಕಾರಸಂಘದ ಕನಕಪುರ ಶಿಬಿರದ ಪಶು ವೈದ್ಯ ಡಾ. ಲೋಕೇಶ್ ತಿಳಿಸಿದರು.
ತಾಲೂಕಿನ ಸಾತನೂರು ಹೋಬಳಿಯ ಬಾಪೂಜಿ ಕಾಲೋನಿಯಲ್ಲಿ ಬೆಂಗಳೂರು ಹಾಲು ಉತ್ಪಾದಕ ಸಂಘದ ಕನಕಪುರ ಶಿಬಿರದ ವತಿಯಿಂದ ಏರ್ಪಡಿಸಿದಹೈನುಗಾರಿಕೆ ರಾಸುಗಳಿಗೆ ಜೀವ ವಿಮೆ ಕಾರ್ಯಕ್ರಮದ ಅಭಿಯಾನದಲ್ಲಿ ಮಾತನಾಡಿ, ಹೈನುಗಾರಿಕೆಯನ್ನೇ ನಂಬಿಕೊಂಡು ನೂರಾರು ಕುಟುಂಬಗಳು ಜೀವನ ಕಟ್ಟಿಕೊಂಡಿದ್ದಾರೆ. ಹೈನುಗಾರಿಕೆ ರಾಸುಗಳಿಗೆ 70 ಸಾವಿರದಿಂದ ಸುಮಾರು 1 ಲಕ್ಷ ರೂ.ವರೆಗೂ ಕೊಟ್ಟು ರೈತರು ರಾಸುಗಳನ್ನು ಖರೀದಿ ಮಾಡಿರುತ್ತಾರೆ. ರಾಸುಗಳು ಅನಾರೋಗ್ಯ ಹಾಗೂ ಪ್ರಕೃತಿ ವಿಕೋಪದಿಂದಲ್ಲೂ ಸಾವನ್ನಪ್ಪುವ ಸಾಧ್ಯತೆಗಳಿವೆ. ಅಂತಹ ಸಂದರ್ಭದಲ್ಲಿ ರೈತರಿಗೆ ಲಕ್ಷಾಂತರ ರೂ.ನಷ್ಟ
ಉಂಟಾಗಲಿದೆ. ರಾಸುಗಳ ಆಕಸ್ಮಿಕ ಸಾವಿನಿಂದಾಗುವ ನಷ್ಟವನ್ನು ಭರಿಸಲು ವಿಮೆ ನೆರವಿಗೆ ಬರಲಿದೆ. ಹೀಗಾಗಿ ರೈತರಿಗಾಗುವ ನಷ್ಟವನ್ನು ತಪ್ಪಿಸುವ ಸಲುವಾಗಿಯೇ ಮತ್ತು ಹೈನುಗಾರಿಕೆ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಬೆಂಗಳೂರು ಹಾಲು ಉತ್ಪಾದಕ ಸಹಕಾರ ಸಂಘದ ವತಿಯಿಂದ ರಿಯಾಯಿತಿ ದರದಲ್ಲಿ ರಾಸುಗಳಿಗೆ ಜೀವ ವಿಮೆ ಮಾಡಲಾಗುತ್ತಿದೆ. ಇದನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಸಂಘಕ್ಕೆ ಹಾಲು ಪೂರೈಕೆ ಮಾಡಿ: ಹಾಲು ಉತ್ಪಾದಕ ಸಹಕಾರ ಸಂಘಕ್ಕೆ ಹಾಲು ಪೂರೈಕೆ ಮಾಡಿ, ಸದಸ್ಯತ್ವಹೊಂದಿರುವ ರೈತರು ಇದರ ಲಾಭ ಪಡೆಯಬಹುದು. ಪ್ರತಿ ರಾಸುಗಳಿಗೆ ವಾರ್ಷಿಕ 700 ರೂ. ನೀಡಿಜೀವವಿಮೆ ಮಾಡಿಸಿದರೆ, ರಾಸುಗಳು ಅನಾರೋಗ್ಯ ಮತ್ತು ಆಕಸ್ಮಿಕವಾಗಿ ಸಾವನ್ನಪ್ಪಿದ್ದಾಗ ರೈತರಿಗೆ ಸುಮಾರು 70 ಸಾವಿರ ರೂ.ವರೆಗೂ ಜೀವವಿಮೆ ಸಿಗಲಿದೆ. ಹೈನುಗಾರಿಕೆ ಹಸುಗಳ ಜೊತೆ ನಾಟಿ ಹಸುಗಳು, ಎಮ್ಮೆ,ಕುರಿ, ಮೇಕೆಗಳಿಗೂ ಜೀವ ವಿಮೆ ಮಾಡಿಸಿ, ಇದರ ಅನುಕೂಲ ಪಡೆದುಕೊಳ್ಳಿ ಎಂದು ಹೇಳಿದರು.
ಕಬ್ಟಾಳು ಹಾಲು ಉತ್ಪಾದಕರ ಸಹಕಾರ ಸಂಘದ ವ್ಯಾಪ್ತಿಯ ಗ್ರಾಮಗಳಾದ ಬಾಪೂಜಿ ಕಾಲೋನಿ,ಕಬ್ಟಾಳು, ಹೊಸ ಕಬ್ಟಾಳು, ಕಂಸಾಗರ ಸೇರಿದಂತೆಹತ್ತಾರು ಗ್ರಾಮದ ನೂರಾರು ರೈತರು ತಮ್ಮ ರಾಸುಗಳಿಗೆ ಜೀವ ವಿಮೆ ಮಾಡಿಸಿದರು.
ಬೆಂಗಳೂರು ಹಾಲು ಉತ್ಪಾದಕ ಸಹಕಾರ ಸಂಘದಕನಕಪುರ ಶಿಬಿರದ ಸಿಬ್ಬಂದಿ ಮುತ್ತುರಾಜು, ಕಬ್ಟಾಳುಹಾಲು ಉತ್ಪಾದಕ ಸಹಕಾರ ಸಂಘದ ಮುಖ್ಯಕಾರ್ಯನಿರ್ವಾಹಕಿ ನಂದಿನಿ, ಹಾಲು ಪರೀಕ್ಷಕ ರಮೇಶ್ ಉಪಸ್ಥಿತರಿದ್ದರು.