ಭಟ್ಕಳ: ಸಮುದ್ರ ಸ್ನಾನದ ವೇಳೆ ಅಪಾಯಕ್ಕೆ ಸಿಲುಕಿದ ಮೂವರನ್ನು ಲೈಫ್ ಗಾರ್ಡ್ ಗಳು ರಕ್ಷಣೆ ಮಾಡಿದ ಘಟನೆ ಮುರ್ಡೇಶ್ವರ ಸಮುದ್ರ ಕಿನಾರೆಯಲ್ಲಿ ನಡೆದಿದೆ.
ಮುರ್ಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದ 16 ವಿದ್ಯಾರ್ಥಿಗಳಲ್ಲಿ ಮೂವರು ಸಮುದ್ರ ಸ್ನಾನದ ವೇಳೆ ಅಪಾಯಕ್ಕೆ ಸಿಲುಕಿದ್ದು ತಕ್ಷಣ ಗಮನಿಸಿದ ಲೈಫ್ ಗಾರ್ಡ್ ರಕ್ಷಣೆ ಮಾಡಿದ್ದಾರೆ.
ಹನುಮಂತ, ಸಂದೀಪ ಹರಿಕಾಂತ ಮತ್ತು ಕೇಶವ ಮೊಗೇರ ಅವರುಗಳು ಓಸಿಯನ್ ಅಡ್ವಂಚರ್ಸ್ ಬೋಟಿನಲ್ಲಿ ಹೋಗಿ ರಕ್ಷಣೆ ಮಾಡಿದ್ದಾರೆ.
ಶಿವಮೊಗ್ಗದಿಂದ ಒಟ್ಟು 16 ಜನ ವಿದ್ಯಾರ್ಥಿಗಳು ಮುರ್ಡೇಶ್ವರ ಪ್ರಸಾಸಕ್ಕೆ ಬಂದಿದ್ದು ಮುರ್ಡೇಶ್ವರದಿಂದ ಗೋಕರ್ಣಕ್ಕೆ ಹೋಗುವವರಿದ್ದರು. ಬುಧವಾರ ಬೆಳಿಗ್ಗೆ ದೇವರ ದರ್ಶನ ಮಾಡಿದ ಅವರು ಮಧ್ಯಾಹ್ನದ ಸಮಯ ಸಮುದ್ರ ಸ್ನಾನಕ್ಕೆಂದು ಹೋಗಿದ್ದು,ಸಮುದ್ರದಲ್ಲಿ ಈಜುತ್ತಾ ಮುಂದೆ ಮುಂದೆ ಹೋದಾಗ ಮಾರುತಿ ಎಸ್. ಅನಿಲ್ ಕುಮಾರ್, ಪುರುಷೋತ್ತಮ ಎನ್ ಎಂಬುವವರು ಅಪಾಯಕ್ಕೆ ಸಿಲುಕಿದ್ದಾರೆ.
ಇದನ್ನು ಅರಿಯ ಲೈಫ್ ಗಾರ್ಡ್ ಗಳು ತಕ್ಷಣ ಸಮುದ್ರಕ್ಕೆ ಹೋಗಿ ಅಪಾಯದಲ್ಲಿರುವ ಮೂವರನ್ನು ರಕ್ಷಿಸಿ ಸಮುದ್ರ ದಡಕ್ಕೆ ಕರೆ ತಂದಿದ್ದಾರೆ. ಬೀಚ್ ಸುಪರ್‍ವೈಸರ್ ದತ್ತಾತ್ರೇಯ ಶೆಟ್ಟಿ ರಕ್ಷಣೆಗೆ ಸಹಕರಿಸಿದರು.