Advertisement

ಜೀವನ ಅನುಭವ ಇಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆ

05:03 PM Apr 30, 2019 | pallavi |

ಬಳ್ಳಾರಿ: ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆದು ಸುಮಾರು 22 ವರ್ಷಗಳ ನಂತರ ಹಿಂತಿರುಗಿ ನೋಡಿದಾಗ ಜೀವನದ ಒಂದೊಂದು ಅನುಭವ ಇಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿದೆ ಎಂದು ಪ್ರಾಚಾರ್ಯ ಅಬ್ದುಲ್ ಮುತಾಲಿಬ್‌ ಹೇಳಿದರು.

Advertisement

ನಗರದ ಸರಳದೇವಿ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ 1997ನೇ ಸಾಲಿನಲ್ಲಿ ಬಿ.ಕಾಂ ವ್ಯಾಸಂಗ ಮಾಡಿದ್ದ (ಹಳೆಯ) ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಸ್ನೇಹ ಸಂಗಮ ಹಾಗೂ ಗುರುವಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳು ತಾವು ಕಲಿತ ಕಾಲೇಜನ್ನು ನೆನಪಿಟ್ಟುಕೊಂಡು ತಾವು ಕಲಿಸಿದ ವಿದ್ಯಾಗುರುಗಳ ಸ್ಮರಣೆ ಮಾಡುತ್ತಾ ಅವರಿಗೆ ಗುರುವಂದನೆ ಸಲ್ಲಿಸುತ್ತಿರುವುದು ಶ್ಲಾಘನೀಯ. ಇದು ಭಾರತೀಯ ಶಿಕ್ಷಣ ಪದ್ಧತಿಯ ಒಂದು ಪ್ರತೀಕವಾಗಿದೆ. ಗುರುಗಳ ಬಗ್ಗೆ ವಿದ್ಯಾರ್ಥಿಗಳು ಹೊಂದಿರುವ ಭಾವನೆಯನ್ನು ಇದು ಎತ್ತಿ ಹಿಡಿಯುತ್ತದೆ. ಹಾಗಾಗಿ ಗುರುಗಳು ಯಾವಾಗಲೂ ತಮ್ಮ ವಿದ್ಯಾರ್ಥಿಗಳ ಹಿತ ಬಯಸುತ್ತಾ ಅವರ ಏಳ್ಗೆಗಾಗಿ ಶ್ರಮಿಸುತ್ತಾರೆ ಎಂದು ನುಡಿದರು.

ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲ ಜಿ.ಆರ್‌.ವೆಂಕಟೇಶುಲು, ಕುರುಗೋಡು ಪ್ರಾಂಶುಪಾಲ ಪ್ರೊ.ಎಸ್‌.ನಾರಾಯಣಪ್ಪ, ಮಹಿಳಾ ಕಾಲೇಜಿನ ಪ್ರಾಚಾರ್ಯೆ ಪ್ರೊ.ಡಿ.ಇಂದಿರಾ, ತೆಕ್ಕಲಕೋಟೆ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ.ಮಾನಕರಿ ಶ್ರೀನಿವಾಸಾಚಾರ್ಯ, ಸಹ ಪ್ರಾಧ್ಯಾಪಕರಾದ ಜಬೀನಾ ಸುಲ್ತಾನ್‌, ಡಾ.ಎಸ್‌.ಎಂ.ಶೈಲಜಾ, ಸಿ.ದೇವಣ್ಣ, ಡಾ.ಜಿಲಾನ್‌ ಬಾಷಾ, ಜಯಲಕ್ಷ್ಮಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.

ಇದೇ ವೇಳೆ 1997ನೇ ಸಾಲಿನ ಬಿ.ಕಾಂ ವಿದ್ಯಾರ್ಥಿಗಳಾದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ರಾಮಾಂಜನೇಯಲು, ಸರಳಾದೇವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಗುರುಬಸಪ್ಪ, ಹರಿಹರ ರೈಲ್ವೆ ವಿಭಾಗದ ಸ್ಟೇಷನ್‌ ಮಾಸ್ಟರ್‌ ಶ್ರೀನಿವಾಸ್‌, ಅಂಚೆ ಇಲಾಖೆ ಸಹಾಯಕ ಅಂಚೆ ಅಧೀಕ್ಷಕ ಚಿದಾನಂದ ಪದ್ಮಸಾಲಿ, ಆಂಧ್ರ ಬ್ಯಾಂಕಿನ ಅಧಿಕಾರಿ ಇನ್ನಿತರೆ ಬಾಲರೆಡ್ಡಿ, ಚಂಚಣ್ಣ, ಗೌರಿ ಮುಂತಾದವರು ಹಿಂದಿನ ದಿನಗಳನ್ನು ಮೆಲುಕು ಹಾಕಿದರು.

Advertisement

ಇದೇ ವೇಳೆ ಎಲ್ಲ ಗುರುವೃಂದದವರಿಗೆ ಸನ್ಮಾನಿಸಿ ಗೌರವಿಸಲಾಯಿತು. ನಂತರ ಹಳೆಯ ವಿದ್ಯಾರ್ಥಿಗಳು ಆರಂಭದಲ್ಲಿ ಲಲಿತಾ, ಗೌರಿ, ಶೋಭಾ ತಂಡದವರು ಪ್ರಾರ್ಥನೆ ಗೀತೆ ಹಾಡಿದರು. ಪ್ರೊ.ರಾಮಾಂಜನೇಯಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುಬಸಪ್ಪ ಸ್ವಾಗತಿಸಿದರು. ಶ್ರೀನಿವಾಸ ವಂದಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next