Advertisement

ನಮ್ಮ ಬದುಕು ಹೀಗಿದ್ದರೆ ಚೆನ್ನ

10:57 PM Nov 25, 2021 | Team Udayavani |

ಬದುಕೆನ್ನುವುದು ಒಂದು ಸುಂದರ ವಾದ ಅನುಭವ. ಇಲ್ಲಿ ಪ್ರತೀ ದಿನ, ಪ್ರತೀ ಗಂಟೆ, ಪ್ರತೀ ನಿಮಿಷ ಎಲ್ಲವೂ ಅಮೂಲ್ಯ. ಇವುಗಳಲ್ಲಿ ಯಾವುದೂ ಒಮ್ಮೆ ಕಳೆದರೆ ಹಿಂದಿರುಗಿ ಬರುವುದಿಲ್ಲ. ಆದ್ದರಿಂದಲೇ ನಮ್ಮ ಪ್ರತೀ ಕ್ಷಣದ ಬದುಕು ನವ ನವೀನ. ಮುಂದಿನ ಕ್ಷಣ ಏನೆಂದು ಯಾರಿಗೂ ತಿಳಿಯದು. ಈ ಕ್ಷಣವೇ ಪರಮ ಪವಿತ್ರ. ಈ ಕ್ಷಣವನ್ನು ಅನುಭವಿಸುವುದೇ ಬದುಕು. ಸಂಘರ್ಷ, ಮನಸ್ತಾಪ, ಕೋಪ, ದ್ವೇಷ ಇವೆಲ್ಲವನ್ನೂ ಬಿಟ್ಟು ಪ್ರೀತಿ, ಸೌಹಾರ್ದ, ಸಹಾಯ, ಕಾರುಣ್ಯ ಮತ್ತು ಹಸನ್ಮುಖದ ನಡುವೆ ಬದುಕುವುದೇ ಸಾರ್ಥಕ ಜೀವನ. ಬದುಕಿನಲ್ಲಿ ಕಷ್ಟ, ನೋವು, ನಿರಾಸೆ, ದುಃಖ ಇವೆಲ್ಲವೂ ಎಲ್ಲರಿಗೂ ಇದೆ. ಏಳು ಬೀಳುಗಳ ಮಧ್ಯೆ ಸಂತೋಷದಿಂದ, ತೃಪ್ತಿಯಿಂದ ಬದುಕುವುದೇ ಜೀವನ. ನಮಗೆ ಬದುಕಲು ಒಂದೇ ಅವಕಾಶವಿರುವುದು ಎಂಬುದು ಮನದಟ್ಟಾಗಿಬಿಟ್ಟರೆ ಆ ಕ್ಷಣ  ದಿಂದಲೇ ನಮ್ಮ ಬದುಕನ್ನು ಸುಂದರ  ವಾಗಿಟ್ಟುಕೊಳ್ಳುವ ಪ್ರಯತ್ನ ಆರಂಭಿಸುತ್ತೇವೆ.

Advertisement

ಕನ್ನಡ ನಾಡು ಕಂಡ ಅಪ್ರತಿಮ ಪ್ರತಿಭೆಯ ಕವಿಗಳಲ್ಲಿ ಒಬ್ಬರಾದ ಡಿ.ವಿ.ಜಿ.

ಅವರ ಮಂಕುತಿಮ್ಮನ ಕಗ್ಗದಲ್ಲಿ ಬದುಕು ಹೇಗಿರಬೇಕು ಎಂಬುದನ್ನು ತಿಳಿಸುವ ಬಹಳ ಅದ್ಭುತವಾದ ಸಾಲು ಗಳಿವೆ. “ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು, ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ. ಬೆಲ್ಲ- ಸಕ್ಕರೆ ಯಾಗು ದೀನ ದುರ್ಬಲರಿಂಗೆ, ಎಲ್ಲರೊಳ ಗೊಂದಾಗು ಮಂಕುತಿಮ್ಮ’ ಇಲ್ಲಿ ಎಲ್ಲ ರೊಳ ಗೊಂದಾಗಿ ಬದುಕುವುದು ಎಂದರೆ ನಮ್ಮ ಅಸ್ತಿತ್ವವು ಇತರರಿಗೆ ಪ್ರಯೋಜನ ವಾಗುವಂತಿರಬೇಕು, ನಾವು ಮಾಡುವ ಒಳ್ಳೆಯ ಕಾರ್ಯದಿಂದ ನಮ್ಮನ್ನು ಎಲ್ಲರೂ ಪದೇ ಪದೆ ನೆನಪಿಸಿಕೊಳ್ಳುವಂತಿರಬೇಕು.

ಮೂರು ದಿವಸದ ನಮ್ಮ  ಬಾಳುವೆ ಯಲ್ಲಿ ಮನದೊಳಗಿನ ಅಹಂಕಾರ, ತಾನು ಮೇಲು, ಇತರರೆಲ್ಲ ಕೀಳು, ಅವರ ಜತೆ ನಾನ್ಯಾಕೆ ಮಾತನಾಡಿಸಲಿ, ಅವರು ಕೆಳಗಿನ ಹುದ್ದೆಯಲ್ಲಿರುವವರು, ನನ್ನ ಸ್ಥಾನವೇ ಬೇರೆ ಎಂಬೆಲ್ಲ ಮನಃಸ್ಥಿತಿಗಳು ವ್ಯಕ್ತಿಯನ್ನು ದೂರ ಇರಿಸುವಂತೆ ಮಾಡುತ್ತದೆ. ವ್ಯಕ್ತಿಯೊಬ್ಬ ಕೆಳಸ್ಥಾನ ದಲ್ಲಿ ರಲಿ ಅಥವಾ ಅವರು ಮಾಡುವ ಕೆಲಸ ಕೆಳಗಿನ ಮಟ್ಟದ್ದೇ ಆಗಿರಲಿ, ಆತ “ಮನುಷ್ಯ’ ಎನ್ನುವು ದನ್ನು ಮರೆಯಬಾರದು. ಹುದ್ದೆ, ಅಂತಸ್ತು, ಶ್ರೀಮಂತಿಕೆಗೆ ಅನುಗುಣವಾಗಿ ನಮ್ಮ ಮಾತು ಇರಬಾರದು ಹಾಗೂ ಈ ವಿಷಯಗಳಲ್ಲಿ ಯಾರನ್ನೂ ಅಳೆಯುವ ಪ್ರಯತ್ನ ಮಾಡಬಾರದು.

ಅವರವರ ವ್ಯಕ್ತಿತ್ವ, ಮಾತು, ಹಾವ ಭಾವ ಅವರವರಿಗೆ. ಇತರರು ತಮ್ಮ ವ್ಯಕ್ತಿತ್ವವನ್ನು ಅಳೆಯುವುದನ್ನು ಯಾರು ಕೂಡ ಇಷ್ಟಪಡುವುದಿಲ್ಲ. ಅವರು ಧರಿಸುವ ಉಡುಗೆ, ಅವರ ಬಣ್ಣ, ಸಮುದಾಯ, ಯಾವುದನ್ನೂ ಅವರು ಹೀಗೆ ಎಂದು ನಿರ್ಧರಿಸುವ ಪ್ರಯತ್ನ ಮಾಡಬಾರದು. ಇತರರನ್ನು ದೂರುವುದು, ಅವಮಾನಿಸುವುದು, ಮನಸ್ಸಿಗೆ ನೋವುಂಟು ಮಾಡುವಂತೆ ಮಾತ ನಾಡುವುದು, ತಾನು ಮಾತ್ರ ಶ್ರೇಷ್ಠ ಎಂಬ ಮನೋಭಾವ ಇವೆಲ್ಲವೂ ನಮ್ಮನ್ನು ಎಲ್ಲರಿಂದಲೂ ದೂರವಿರಿಸುತ್ತದೆ.

Advertisement

ನಾವಾಡುವ ಮಾತು ನೇರವಾಗಿರ ಬೇಕು. ಎದುರಿಗೊಂದು, ಹಿಂದಿ ನಿಂದೊಂದು ಮಾತನಾಡುವ ಅಭ್ಯಾಸ ವೈಷ್ಯಮ್ಯಕ್ಕೆ ಕಾರಣವಾಗುತ್ತದೆ. ನಾವಾ ಡುವ ಮಾತು ಹಿತಮಿತವಾಗಿದ್ದು ಸಂಬಂಧಗಳನ್ನು ಬೆಸೆ ಯುವಂತಿರಬೇಕು. ನಮ್ಮ ಬಂಧುಮಿತ್ರರಲ್ಲಿ ಕೆಲವರು ನಮ್ಮನ್ನು ಇಷ್ಟಪಡದೇ ಇರಬಹುದು. ನಮ್ಮ ಸಾಂಗತ್ಯವನ್ನು ಬಯಸದೆ ಇರ ಬಹುದು ಅಥವಾ ವಿನಾ ಕಾರಣ ನಮ್ಮನ್ನು ಹಿಂದಿನಿಂದ ಟೀಕಿಸುತ್ತಲೇ ಇರ ಬಹುದು. ಅಂಥವರಿಂದ ಅಂತರ ಕಾಯ್ದುಕೊಳ್ಳಬೇಕೇ ಹೊರತೂ ದ್ವೇಷಿಸಲು ಹೋಗಬಾರದು.

ನಮ್ಮ ಬದುಕು ಹೇಗಿರಬೇಕೆಂದರೆ ನಮ್ಮನ್ನು ದೂರ ಮಾಡಿಕೊಂಡವರು ಪಶ್ಚಾತ್ತಾಪ ಪಡುವಂತೆ ಇರಬೇಕು, ನಮ್ಮನ್ನು ಉಳಿಸಿಕೊಂಡವರು ಹೆಮ್ಮೆ ಪಡು ವಂತೆ ಇರಬೇಕು, ಸಮಾಜ ಸಂಭ್ರ ಮಿಸು ವಂತಿರಬೇಕು, ಸತ್ತರೆ ಶ್ಮಶಾನ ಕೂಡ ಕಣ್ಣೀರಿಡುವಂತಿರಬೇಕು. ಸುಖ ಬಂದಾಗ ಹೆಚ್ಚು ಹಿಗ್ಗದೆ, ದುಃಖ ಬಂದಾಗ ಕುಗ್ಗಿ ಕುಸಿಯದೆ ಮನಸ್ಸಿನ ಸಮತೋಲನವನ್ನು ಕಾಪಾಡಿಕೊಂಡು ಜೀವನ ಸಾಗಿಸುವುದು ಸ್ಥಿತಪ್ರಜ್ಞನ ಲಕ್ಷಣ. ಬದುಕಿನ ಹಾದಿಯಲ್ಲಿ ನಮಗೆ ಸಿಕ್ಕಿದ್ದನ್ನು ಆ ಪರಮಾತ್ಮನ ಪ್ರಸಾದವೆಂದು ಬಗೆದು ತೃಪ್ತಿಯಿಂದ ಬಾಳಿದರೆ ಕಷ್ಟವಾಗಲಿ, ಸುಖವಾಗಲಿ ನೆಮ್ಮದಿಯ ಶಾಂತ ಜೀವನ ನಮ್ಮದಾಗುತ್ತದೆ.

 -ನರಹರಿ ರಾವ್‌, ಕೈಕಂಬ

Advertisement

Udayavani is now on Telegram. Click here to join our channel and stay updated with the latest news.

Next